2020ರ ಐಪಿಎಲ್ ನಲ್ಲಿ ಹೊರಬಿದ್ದ ಆರಸಿಬಿ ತಂಡದಲ್ಲಿ ಕೆಲವು ಬದಲಾವಣೆ ಮಾಡುವುದರಲ್ಲಿದ್ದು ಕೆಲವು ಆಟಗಾರರನ್ನು ತಂಡದ ಹರಾಜಿನಲ್ಲಿ ಕೈ ಬಿಡುವ ಸಾಧ್ಯತೆಗಳಿದೆ ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಟೀಮ್ ಇಂಡಿಯಾ ಸತತ ಮೂರು ತಿಂಗಳ ಕಾಲ ಆಸ್ಟ್ರೇಲಿಯಾ ಪ್ರವಾಸ ಹೊರಡಲಿದ್ದಾರೆ. ಈ ಬಾರಿ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಅವರಿಗೆ ಸ್ಥಾನ ಸಿಗದೇ ಇರುವ ಬಗ್ಗೆ ಚರ್ಚೆ ನಡೆಯಿತು. ಆದರೆ ಏಕದಿನ ಹಾಗೂ ಟಿ-ಟ್ವೆಂಟಿ ಪಂದ್ಯಗಳಿಗೆ ರೆಸ್ಟ್ ನೀಡಿ ಟೆಸ್ಟ್ ಟೀಮ್ ನಲ್ಲಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಜನವರಿಯಲ್ಲಿ ಮಗುವಿಗೆ ಜನ್ಮ ನೀಡುವುದರಿಂದ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ನಂತರ ತವರಿಗೆ ಮರಳಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೆಸ್ಟ್ ತಂಡದ ಉಪನಾಯಕ ರಹಾನೆ ಕ್ಯಾಪ್ಟನ್ ಆಗುತ್ತಾನೆ. ಆದರೆ ರೋಹಿತ್ ಶರ್ಮಾ ಅವರನ್ನು ಕ್ಯಾಪ್ಟನ್ ಮಾಡಬೇಕೆಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಭಿಪ್ರಾಯ ಪಟ್ಟಿದ್ದಾರೆ.
ಈಗಾಗಲೇ ಆರಸಿಬಿ ಐಪಿಎಲ್ ನಿಂದ ಹೊರಬಿದ್ದಿದ್ದು. ಮುಂದಿನ ಐಪಿಎಲ್ ಗೆ ತಯಾರಿ ನಡೆಸುತ್ತಿದೆ 2021ರ ಐಪಿಎಲ್ ಗೆ ತಂಡದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಿದ್ದಾರೆ. 2020ರ ಐಪಿಎಲ್ ನಲ್ಲಿ ಕೆಲವು ಎಡವಟ್ಟುಗಳಾದ ಕಾರಣ ಮುಂದಿನ ಐಪಿಎಲ್ ಗೆ ತಂಡದಿಂದ ಕೆಲವೊಬ್ಬರನ್ನು ತೆಗೆಯುವ ಮೂಲಕ ಮೇಜರ್ ಸರ್ಜರಿ ಮಾಡಲಿದ್ದಾರೆ ಮೈಕ ಹಸನ್ ಹಾಗೂ ಮ್ಯಾನೇಜ್ಮೆಂಟ್ ಟೀಮ್. ಉಮೇಶ್ ಯಾದವ್ ಇದುವರೆಗೂ ಉತ್ತಮ ಪ್ರದರ್ಶನ ನೀಡದ ಕಾರಣ ಅವರನ್ನು ತಂಡದಿಂದ ಕೈ ಬಿಡಲಾಗುತ್ತದೆ.
ವಿಕೆಟ್ ಕೀಪರ್ ಆಗಿದ್ದ ಪಾರ್ಥಿವ ಪಟೇಲ್ ಅವರನ್ನು ಕೈ ಬಿಡಲಾಗುತ್ತದೆ. ಗುರು ಕಿರತ್ ಮನ್ ಅವರು ತಂಡಕ್ಕಾಗಿ ಆಡದೆ ಟೆಸ್ಟ್ ಪ್ಲೇಯರ್ ಆಗಿ ಆಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ ಅವರನ್ನು ಮುಂದಿನ ಐಪಿಎಲ್ ಗೆ ತಂಡದಿಂದ ಕೈ ಬಿಡಲಾಗುತ್ತದೆ. ಪವನ್ ನೇಗಿ ಈ ಬಾರಿ ಹೆಚ್ಚುವರಿ ಫೀಲ್ಡರ್ ಆಗಿ ಆಡಿದ್ದಾರೆ ಅವರು ಉತ್ತಮ ಪ್ರದರ್ಶನ ನೀಡದ ಕಾರಣ ಅವರನ್ನು ತಂಡದಿಂದ ತೆಗೆಯಲಿದ್ದಾರೆ. ವೇಗದ ಬೌಲರ್ ಡೇಲ್ ಸ್ಟೇನ್ ಅವರು ವಿಕೆಟ್ ತಂದುಕೊಡುವಲ್ಲಿ ವಿಫಲರಾಗಿದ್ದು ಕಳಪೆ ಪ್ರದರ್ಶನ ನೀಡಿರುವುದರಿಂದ ಅವರನ್ನು ತಂಡದಿಂದ ಕೈ ಬಿಡುವ ಲಕ್ಷಣಗಳು ಕಂಡುಬರುತ್ತಿದೆ. ಒಟ್ಟಿನಲ್ಲಿ ಅಂತಿಮವಾಗಿ ಯಾರನ್ನು ತಂಡದಿಂದ ಕೈಬಿಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.