ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕರ್ನಾಟಕದ ಹಲವು ಪ್ರತಿಭೆಗಳಿಗೆ ಅವಕಾಶ ಸಿಕ್ಕಿದೆ ಅದರಲ್ಲೂ ಗದಗದ ಅನಿರುದ್ಧ ಜೋಶಿ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮುದ್ರಣ ಕಾಶಿ ಎಂದೇ ಖ್ಯಾತಿಯಾದ ಗದಗದ ಅನಿರುದ್ಧ ಜೋಶಿ ಆಯ್ಕೆಯಾಗಿದ್ದಾರೆ. ಕರ್ನಾಟಕದ 12 ಜನ ಕ್ರಿಕೆಟರ್ಸ್ ಐಪಿಎಲ್ ನಲ್ಲಿ ಆಟವಾಡುತ್ತಿದ್ದಾರೆ, ಇದರಲ್ಲಿ ಅನಿರುದ್ಧ ಸೇರಿ ಮೂವರು ರಾಜಸ್ಥಾನ ರಾಯಲ್ಸ್ ಪರ ಆಡುತ್ತಿದ್ದಾರೆ. ಅನಿರುದ್ಧನಿಗೆ ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಆಡಲು ಸಿಕ್ಕರೆ ಒಬ್ಬ ಒಳ್ಳೆಯ ಕ್ರಿಕೆಟ್ ಪ್ಲೇಯರ್ ಆಗುತ್ತಾನೆ ಎನ್ನುವ ಆಶಯವನ್ನು ಅವನ ಕುಟುಂಬದವರು ವ್ಯಕ್ತಪಡಿಸಿದ್ದಾರೆ. ಅನಿರುದ್ಧ ಅವರು ಕ್ರಿಕೆಟ್ ಆಟಗಾರರ ಕುಟುಂಬದಿಂದಲೇ ಬಂದಿದ್ದಾರೆ ತಂದೆ ಅಶೋಕ್ ಜೋಶಿ ಲೀಗ್ ಕ್ರಿಕೆಟರ್, ಮಾಜಿ ಟೀಮ್ ಇಂಡಿಯಾ ಆಲ್-ರೌಂಡರ್ ಸುನೀಲ್ ಜೋಶಿ ಅನಿರುದ್ಧ್ ಅವರ ಚಿಕ್ಕಪ್ಪ.
ಚಿಕ್ಕಪ್ಪ ಸುನೀಲ್ ಜೋಶಿಯಂತೆ ಅನಿರುದ್ಧ್ ಜೋಶಿಯವರು ಸ್ಪಿನ್ ಆಲ್-ರೌಂಡರ್ ಅದರಲ್ಲೂ ಟಿ-20 ಕ್ರಿಕೆಟಗೆ ಹೇಳಿ ಮಾಡಿಸಿದ ಆಟಗಾರ. ಶಾಲಾ ದಿನಗಳಿಂದಲೇ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಜೋಶಿ ಗದಗ ಜಾನೊಪಂತರ ಕ್ರಿಕೆಟ್ ಅಕಾಡೆಮಿ, ಕೆ.ಎಸ್.ಸಿ.ಎ ಲೀಗ್ ಪಂದ್ಯ, ರಣಜಿ ಹಾಗೂ ಕರ್ನಾಟಕ ಪ್ರೀಮಿಯರ್ ಹೀಗೆ ಹಲವಾರು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಈ ಬಾರಿ ಐಪಿಎಲ್ ನಲ್ಲಿ ಆಡಲು ರಾಜಸ್ಥಾನ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಯ್ಕೆಯಾಗಿದ್ದರೂ, ಆಡುವ 11 ರಲ್ಲಿ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಯ್ಕೆಯಾಗಿದ್ದು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಅನಿರುದ್ಧ ಜೋಶಿ ಐಪಿಎಲ್ ನಲ್ಲಿ ಆಯ್ಕೆಯಾಗಿದ್ದು ನನಗೆ ಬಹಳ ಖುಷಿಯಾಗಿದೆ ಎಂದು ಅನಿರುದ್ಧ ಅವರ ಸಹೋದರಿ ಅನಗಾ ಜೋಶಿ ಹೇಳಿದ್ದಾರೆ. ಉತ್ತರ ಕರ್ನಾಟಕದ ಪ್ರತಿಭೆ ಅನಿರುದ್ಧ್ ಅವರು ಉತ್ತಮವಾಗಿ ಆಡಲಿ ಎಂದು ಹಾರೈಸೋಣ.