ನಮ್ಮ ಸುತ್ತಮುತ್ತ ಅನೇಕ ಇಂಟರೆಸ್ಟಿಂಗ್ ಹಾಗೂ ಆಶ್ಚರ್ಯಕರ ಸಂಗತಿಗಳು ನಡೆಯುತ್ತವೆ ಅದಕ್ಕೆ ಕಾರಣಗಳನ್ನು ನಾವು ತಿಳಿದುಕೊಳ್ಳಲು ಹೋಗುವುದಿಲ್ಲ. ಉದಾಹರಣೆಗೆ ರಾತ್ರಿಹೊತ್ತಿನಲ್ಲಿ ನಾಯಿ ಏಕೆ ಕೂಗುತ್ತದೆ, ಭಾರತದಲ್ಲಿ ವಾಹನಗಳಿಗೆ ನಂಬರ್ ಪ್ಲೇಟ್ ಹಾಕುತ್ತಾರೆ ಅದರಲ್ಲಿ ಎಷ್ಟು ವಿಧಗಳಿವೆ, ಪ್ಲಾಸ್ಟಿಕ್ ಸರ್ಜರಿ ಎಂದರೇನು ಹಾಗೂ 20 ವರ್ಷದ ನಂತರ ಇಂದು ನೀವು ಮಾಡುತ್ತಿರುವ ಕೆಲಸದಲ್ಲಿ ಇರುತ್ತೀರಾ ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಲೇಖನದಲ್ಲಿ ನೋಡೋಣ

ರಾತ್ರಿ ಹೊತ್ತು ನಾಯಿ ಕೂಗಿದರೆ ಅಪಶಕುನ ಎಂದು ಹೇಳುತ್ತಾರೆ. ತೋಳ ಮತ್ತು ನಾಯಿ ಒಂದೇ ಜಾತಿ, ತೋಳವು ಹೀಗೆಯೇ ಕೂಗುತ್ತದೆ, ನಾಯಿ ಬೋಗಳುತ್ತದೆ. ನಾಯಿ ತಾನು ಇದ್ದೇನೆ ಎಂದು ತನ್ನ ಸಂಗಾತಿ ಮತ್ತು ಇತರೆ ನಾಯಿಗಳಿಗೆ ತಿಳಿಸಲು ಹೀಗೆ ಕೂಗುತ್ತದೆ ಮತ್ತು ನಾಯಿಗೆ ಏನಾದರೂ ಶಾರೀರಿಕ ಸಮಸ್ಯೆ ಇದ್ದಾಗ ತನ್ನ ನೋವನ್ನು ಈ ರೀತಿ ಕೂಗುವ ಮೂಲಕ ಹೊರ ಹಾಕುತ್ತದೆ. ಪ್ಲಾಸ್ಟಿಕ್ ಸರ್ಜರಿಯನ್ನು ನಾವು ಹೆಚ್ಚು ಕೇಳಿದ್ದೇವೆ. ನಮ್ಮ ಅಂದವನ್ನು ಪುನರ್ ನಿರ್ಮಾಣ ಮಾಡುವುದೇ ಪ್ಲಾಸ್ಟಿಕ್ ಸರ್ಜರಿ. ಪ್ಲಾಸ್ಟಿಕ್ ಸರ್ಜರಿ ಎಂಬ ಪದ ಗ್ರೀಕ್ ಭಾಷೆಯ ಪ್ಲಾಸ್ಟಿಕೋಸ್ ಎಂಬ ಪದದಿಂದ ಹುಟ್ಟಿದೆ. ಸುಮಾರು 5,000 ವರ್ಷಗಳ ಹಿಂದೆ ಭಾರತದ ಆಯುರ್ವೇದ ಪಿತಾಮಹ ಸುಶ್ರುತ ಮುನಿಗಳು ಆಪರೇಷನ್ ಮಾಡುತ್ತಿದ್ದರು. ಪ್ಲಾಸ್ಟಿಕ್ ಸರ್ಜರಿ ಮಾಡುವಾಗ 5 ಭಾಗಗಳನ್ನಾಗಿ ಮಾಡಿಕೊಳ್ಳುತ್ತಾರೆ. ಮೊದಲನೇಯದು ಇಸ್ತೆಟಿಕ್ ಸರ್ಜರಿ, ಇದರಲ್ಲಿ ಮುಖ ಮತ್ತು ಶರೀರವನ್ನು ಅಂದವಾಗಿ ಕಾಣಿಸುವಂತೆ ಸರ್ಜರಿ ಮಾಡುತ್ತಾರೆ. ಎರಡನೇಯದು ಬರ್ನ್ ಸರ್ಜರಿ ದೇಹ ಸುಟ್ಟ ತಕ್ಷಣ ಮಾಡಲಾಗುತ್ತದೆ ಮತ್ತು ಅಂಗ ವಿಕಾರವಾಗಿರುವುದನ್ನು ಸರಿಪಡಿಸಲಾಗುತ್ತದೆ. ಮೂರನೇಯದು ಕ್ರೇನಿಯೋ ಫೇಶಿಯಲ್ ಸರ್ಜರಿ. ಮಕ್ಕಳಿಗೆ ಸೀಳುತುಟಿ ಸಮಸ್ಯೆ ಇದ್ದರೆ ಮತ್ತು ದೊಡ್ಡವರಿಗೆ ಕಿವಿ, ಮೂಗು, ಬಾಯಿ ಅಂದವಾಗಿ ಕಾಣಿಸಲು ಈ ಸರ್ಜರಿ ಮಾಡಲಾಗುತ್ತದೆ. ನಾಲ್ಕನೇಯದು ಮೈಕ್ರೋ ಸರ್ಜರಿ, ಈ ಸರ್ಜರಿಯಲ್ಲಿ ಕತ್ತರಿಸಿದ ಕೈಕಾಲುಗಳನ್ನು ಜೋಡಣೆ ಮಾಡುತ್ತಾರೆ. ಐದನೇಯದು ಪೀಡಿಯಾಟ್ರಿಕ್ ಸರ್ಜರಿ, ಹುಟ್ಟಿದ ಮಗುವಿನ ಹೆಚ್ಚುವರಿ ಅಂಗವನ್ನು ತೆಗೆಯುವುದು ಅಥವಾ ಜೋಡಿಸುವುದನ್ನು ಈ ಸರ್ಜರಿಯಲ್ಲಿ ಮಾಡುತ್ತಾರೆ. ಪ್ರತಿಯೊಂದು ವಾಹನಗಳಿಗೂ ಒಂದು ನಂಬರ್ ಪ್ಲೇಟ್ ಇರುತ್ತದೆ. ಇದು ಹಳದಿ, ಹಸಿರು, ಕಪ್ಪು, ಬಿಳಿ ಬಣ್ಣದಲ್ಲಿ ಇರುತ್ತದೆ. ವೈಟ್ ಬೋರ್ಡ್ ನಲ್ಲಿ ಕಪ್ಪು ನಂಬರ್ ಗಳಿದ್ದರೆ ಇದನ್ನು ಪರ್ಸನಲ್ ರಿಜಿಸ್ಟ್ರೇಷನ್ ಎನ್ನುತ್ತಾರೆ. ಈ ಪ್ಲೇಟ್ ಹೊಂದಿರುವ ವಾಹನಗಳು ನಮ್ಮ ಸ್ವಂತ ಉದ್ದೇಶಕ್ಕೆ ಬಳಸಲಾಗುತ್ತದೆ. ಹಳದಿ ಬೋರ್ಡಿನಲ್ಲಿ ನೀಲಿ ಸಂಖ್ಯೆಗಳಿದ್ದರೆ ಇದನ್ನು ಕಮರ್ಷಿಯಲ್ ರಿಜಿಸ್ಟ್ರೇಷನ್ ಎನ್ನುತ್ತಾರೆ. ಇದು ಟ್ಯಾಕ್ಸಿ, ಲಾರಿಗಳಿಗೆ ಕೊಡುತ್ತಾರೆ. ಇವುಗಳಲ್ಲಿ ಲಗೇಜ್, ಜನರನ್ನು ಸಾಗಿಸಲಾಗುತ್ತದೆ. ಕಪ್ಪು ಬೋರ್ಡಿನಲ್ಲಿ ಹಳದಿ ನಂಬರ್ ಇದ್ದರೆ ಸೆಲ್ಫ್ ಡ್ರೈವನ್ ರಿಜಿಸ್ಟ್ರೇಷನ್, ಈ ಪ್ಲೇಟ್ ಹೊಂದಿರುವ ವಾಹನಗಳನ್ನು ಬೇರೆಯವರಿಗೆ ಬಾಡಿಗೆಗೆ ಕೊಡಬಹುದು. ಹಸಿರು ಬೋರ್ಡಿನಲ್ಲಿ ಬಿಳಿ ಸಂಖ್ಯೆಗಳು ಇದ್ದರೆ ಇಲೆಕ್ಟ್ರಿಕ ವೆಹಿಕಲ್ ರಿಜಿಸ್ಟ್ರೇಷನ್ ಎನ್ನುತ್ತಾರೆ. ಈ ಪ್ಲೇಟ್ಸ್ ಗಳನ್ನು ಇಲೆಕ್ಟ್ರಿಕ್ ವಾಹನಗಳಿಗೆ ಹಾಕಲಾಗುತ್ತದೆ. ಕೆಂಪು ಬೋರ್ಡಿನಲ್ಲಿ ಬಿಳಿ ಸಂಖ್ಯೆಗಳು ಇದ್ದರೆ ಇದು ತಾತ್ಕಾಲಿಕ ನೋಂದಣಿ ಬೋರ್ಡ್ ಆಗಿರುತ್ತದೆ, ಹೊಸದಾದ ವಾಹನಗಳಿಗೆ ಪರ್ಮನೆಂಟ್ ಪ್ಲೇಟ್ ಕೊಡುವ ಮೊದಲು ಈ ರೀತಿ ಕೊಡಲಾಗುತ್ತದೆ. ಈ ಪ್ಲೇಟ್ ಬಳಸಿಕೊಂಡು ವಾಹನ ಚಲಾಯಿಸಲು ಒಂದು ತಿಂಗಳು ಅವಕಾಶ ಕೊಡಲಾಗುತ್ತದೆ. ನೀಲಿ ಬೋರ್ಡಿನಲ್ಲಿ ಬಿಳಿ ಸಂಖ್ಯೆಗಳು ಇದ್ದರೆ ಡಿಪ್ಲೊಮೇಟ್ ಅಥವಾ ಎಂಬಸ್ಸಿ ಕಾರ್ ರಿಜಿಸ್ಟ್ರೇಷನ್ ಎನ್ನುತ್ತಾರೆ. ಭಾರತದಲ್ಲಿರುವ ವಿದೇಶಿ ರಾಯಭಾರಿಗಳ ವಾಹನಗಳಿಗೆ ಈ ಪ್ಲೇಟ್ ಕೊಡಲಾಗುತ್ತದೆ. ನಂಬರ್ ಪ್ಲೇಟ್ ನಲ್ಲಿ ಏರೋ ಮಾರ್ಕ್ ಇದ್ದರೆ ಅದನ್ನು ಸೇನಾ ವಾಹನಗಳಿಗೆ ಕೊಡಲಾಗುತ್ತದೆ. ದೇಶದ ರಾಷ್ಟ್ರಪತಿ ಮತ್ತು ರಾಜ್ಯದ ರಾಜ್ಯಪಾಲರ ವಾಹನಗಳಿಗೆ ರೆಡ್ಡ್ ಪ್ಲೇಟ್ ಕೊಡಲಾಗುತ್ತದೆ. ಈ ಪ್ಲೇಟ್ ನಲ್ಲಿ ನಂಬರ್ ಬದಲಾಗಿ ಲಾಂಛನವನ್ನು ಬಳಸಲಾಗುತ್ತದೆ.

ಪೀರಿಯಡ್ ಸಮಯದಲ್ಲಿ ಗಂಡ ಹೆಂಡತಿ ಸೇರಬಹುದೇ ಎಂಬ ಅನುಮಾನ ಹೆಚ್ಚಿನ ಜನರಲ್ಲಿ ಇದೆ. ಪೀರಿಯಡ್ ಸಮಯದಲ್ಲಿ ಗಂಡ-ಹೆಂಡತಿ ಸೇರಬಹುದು ಆದರೆ ಇದರಿಂದ ಲಾಭವಿದೆ, ಸಮಸ್ಯೆಯೂ ಇದೆ. ಪೀರಿಯಡ್ ಸಮಯದಲ್ಲಿ ಮಹಿಳೆಯರಿಗೆ ಹೊಟ್ಟೆನೋವು, ಸೊಂಟನೋವು ಬರುತ್ತದೆ ಮತ್ತು ಈ ಸಮಯದಲ್ಲಿ ಕೋಪ ಬರುವುದು, ಸುಮ್ಮನೆ ರೇಗಾಡುವುದು, ಮೂಡ್ ಬದಲಾಗುತ್ತಿರುತ್ತದೆ ಇದಕ್ಕೆ ಕಾರಣ ಹಾರ್ಮೋನ್. ಮನಸ್ಸಿಗೆ ನೆಮ್ಮದಿ ಕೊಡುವ ಸೆರಟೋನಿನ್ ಹಾರ್ಮೋನ್ ಉತ್ಪತ್ತಿಯಾಗುವುದು ಕಡಿಮೆಯಾಗಿ ಮನೋವಿಕಲತೆಯನ್ನು ಅನುಭವಿಸುತ್ತಾರೆ. ಈ ಸಮಯದಲ್ಲಿ ಗಂಡ ಹೆಂಡತಿ ಸೇರುವುದರಿಂದ ಹಾರ್ಮೋನ್ ಉತ್ಪತ್ತಿಯಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಸಮಸ್ಯೆಯೇನೆಂದರೆ ಈ ಸಮಯದಲ್ಲಿ ಗಂಡ ಹೆಂಡತಿ ಸೇರುವುದರಿಂದ ಇರಿಸು, ಮುರಿಸಾಗುತ್ತದೆ ಏಕೆಂದರೆ ನಿರಂತರವಾಗಿ ಬ್ಲಡ್ ರಿಲೀಸ್ ಆಗುತ್ತದೆ. ಈ ಸಮಯದಲ್ಲಿ ಸೇರುವುದರಿಂದ ಸೆಕ್ಷಯೂವೆಲ್ ಟ್ರಾನ್ಸ್ಮಿಟೆಡ್ ಇನ್ಫೆಕ್ಷನ್ ಆಗುವ ಸಂಭವ ಇರುತ್ತದೆ ಆದ್ದರಿಂದ ಈ ಸಮಯದಲ್ಲಿ ಸೇರುವುದು ಒಳ್ಳೆಯದಲ್ಲ. ತಂತ್ರಜ್ಞಾನ ಬಹಳ ಮುಂದುವರೆದಿದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಪವರ್ ನಿಂದ ಮನುಷ್ಯನ ಸಹಾಯವಿಲ್ಲದೆ ಎಲ್ಲಾ ಕೆಲಸವನ್ನು ರೋಬೋಟ್ ಮಾಡಿ ಮುಗಿಸುತ್ತದೆ, ಇದರಿಂದ ಮನುಷ್ಯರು ಮಾಡುವ ಕೆಲಸ ಕಡಿಮೆಯಾಗಿ ಕೆಲಸ ಕಳೆದುಕೊಳ್ಳುವ ಸಂಭವ ಇರುತ್ತದೆ, ಆದ್ದರಿಂದ 20 ವರ್ಷದ ನಂತರ ನಾವು ಮಾಡುವ ಕೆಲಸ ಇರುತ್ತದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ವೆಬ್ಸೈಟ್ ಇದೆ. ಅದು ಯಾವುದೆಂದರೆ ವಿಲ್ ರೋಬೋಟ್ ಟೇಕ್ಸ್ ಮೈ ಜಾಬ್ ಡಾಟ್ ಕಾಮ್.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!