ಆದುನಿಕ ಯುಗದಲ್ಲಿ ಹೊಸ ಹೊಸ ಅನ್ವೇಷಣೆಗೆ ಯಾವ ಕೊರತೆ ಸಹ ಇಲ್ಲ. ನಾವು ಭೂಮಿಯಿಂದ ಚಂದ್ರ ಗ್ರಹ, ಮಂಗಳ ಗ್ರಹ ಎಲ್ಲಾ ಸುತ್ತಿ ಬರುವಷ್ಟು ಈ ಕಾಲ ಬೆಳೆದಿದೆ. ಅದೇ ರೀತಿ ಟ್ಯಾಪ್ ಗೀಸರ್ ಎನ್ನುವ ವಾಟರ್ ಹೀಟರ್ ಬಗ್ಗೆ ಈ ದಿನ ತಿಳಿಯೋಣ. ಈ ಗೀಸರ್ ಯಾವ ರೀತಿ ಕೆಲಸ ಮಾಡುತ್ತೆ, ಇದರ ಬೆಲೆ, ಎಲ್ಲದರ ಬಗ್ಗೆ ಮಾಹಿತಿ ಪಡೆಯೋಣ. ಹೋಂ ಅಪ್ಲೈಯನ್ಸೆಸ್’ನಲ್ಲಿ ಇನ್’ಸ್ಟಂಟ್ ಟ್ಯಾಪ್ ಗೀಸರ್ . ಇದರಲ್ಲಿ ಕೇವಲ ಎರಡು ಸೆಕೆಂಡ್’ನಲ್ಲಿ ಬಿಸಿ ನೀರು ಬರುತ್ತದೆ. ಇದನ್ನ ಯಾವ ರೀತಿಯ ಟ್ಯಾಪಿಗೆ ಬೇಕಿದ್ದರು ಅಡವಳಿಸಬಹುದು.

ಟ್ಯಾಪ್ ಮೇಲೆ ಕೆಂಪು ಮತ್ತು ನೀಲಿ ಬಣ್ಣದ ಆರೋ ಮಾರ್ಕ್ ಇರುತ್ತದೆ ಕೆಂಪು ಬಣ್ಣ ಬಿಸಿ ನೀರು ಸೂಚಿಸುತ್ತದೆ. ನೀಲಿ ಬಣ್ಣ ತಣ್ಣೀರು ಸೂಚಿಸುತ್ತದೆ. ಬಿಸಿ ನೀರಿನ ಉಷ್ಣಾಂಶ ಕನಿಷ್ಠ 3೦°c ರಿಂದ 60°c ರವರೆಗೆ ಇರುತ್ತದೆ.ಟ್ಯಾಪ್ ಅನ್ನು 360 ಡಿಗ್ರಿ ವರೆಗೂ ತಿರುಗಿಸಬಹುದು. ವಿದ್ಯುತ್ ಉಳಿತಾಯವಾಗುತ್ತದೆ, ಗಂಟೆಗೆ ಎರಡು ( 2 ) ಇಲ್ಲ ಎರಡು ವರೆ ( 2.5 ) ಯೂನಿಟ್ ವಿದ್ಯುತ್ ತೆಗೆದುಕೊಳ್ಳುತ್ತದೆ. ಒಂದು ಗಂಟೆಗೆ ಇಪ್ಪತ್ತು ಬಕೆಟ್ ನೀರು ಸಂಗ್ರಹ ಮಾಡಬಹುದು.

ಲಾಭಗಳು ಏನು ಎಂದರೆ :-ವಿದ್ಯುತ್ ಉಳಿತಾಯ ಆಗುತ್ತದೆ, ನೀರು ಕೂಡ ಹೆಚ್ಚು ವ್ಯರ್ಥ ಆಗುವುದಿಲ್ಲ ಏಕೆಂದರೆ ಶವರ್’ನಲ್ಲಿ ಬರುವ ರೀತಿ ನೀರು ಟ್ಯಾಪ್ ಮೂಲಕ ಬರುವುದರಿಂದ ಇದು ನೀರನ್ನು ಉಳಿತಾಯ ಮಾಡುತ್ತದೆ.

ಇನ್’ಸ್ಟಂಟ್ ಟ್ಯಾಪ್ ಗೀಸರ್’ನಲ್ಲಿ ಇರುವ ಪ್ಲಗ್ ಅನ್ನು ಮನೆಯ ಕರೆಂಟ್ ಸಿಸ್ಟಮ್’ಗೆ ಅಡಾಪ್ಟ್ ಮಾಡಿಕೊಳ್ಳಬಹುದು.ಪ್ರೊಡಕ್ಟ್ ತುಂಬ ಉತ್ತಮ ಗುಣಮಟ್ಟದಲ್ಲಿ ಇರುತ್ತದೆ. ಯಾವುದೇ ಡ್ಯಾಮೇಜ್ ಹಾಗೂ ರಿಪೇರಿಗೆ ಬರುವುದಿಲ್ಲ. ಒಂದು ವರ್ಷ ವಾರಂಟಿ ಇರುತ್ತದೆ.
ಯಾವುದೇ ಸಮಸ್ಯೆ ಬಂದರು ಅದನ್ನು ಗುರುತಿಸಿ ಸರಿಪಡಿಸಿ ಕೊಡಲಾಗುವುದು ಇಲ್ಲ ಎಕ್ಸ್’ಚೇಂಜ್ ಮಾಡಿ ಕೊಡಲಾಗುವುದು ಮತ್ತೆ ಯಾವುದೇ ರೀತಿಯ ಖರ್ಚು ಬಂದರು ಅದನ್ನು ಉತ್ಪಾದಕರು ಭರಿಸುವರು. ತೆಲಂಗಾಣ, ಆಂಧ್ರ, ತಮಿಳುನಾಡು ಎಲ್ಲಾ ಕಡೆ ಟ್ಯಾಪ್ ಗೀಸರ್ ಉತ್ಪನ್ನ ಸೇಲ್ ಆಗುತ್ತಿದ್ದು ಹೊಸದಾಗಿ ಕರ್ನಾಟಕಕ್ಕೆ ಪರಿಚಯ ಮಾಡುವ ಉದ್ದೇಶ ಹೊಂದಿದ್ದಾರೆ ಉತ್ಪಾದಕರು.ಆಲ್ ಓವರ್ ಇಂಡಿಯಾ ಫ್ರೀ ಕೊರಿಯರ್ ಮೂಲಕ ಪ್ರೋಡಕ್ಟ್ ಕಳುಹಿಸಿ ಕೊಡಲಾಗುತ್ತದೆ. ಟ್ಯಾಪ್ ಗೀಸರ್ ಬೆಲೆ 1,600. ರಿಪೇರಿ ಚಾರ್ಜ್ ಕೂಡ ಇರುವುದಿಲ್ಲ.

ಅಡವಳಿಸುವ ವಿಧಾನ :-ಹಲವು ಕಡೆ ಹಲವು ರೀತಿಯ ಟ್ಯಾಪ್’ಗಳನ್ನು ಮನೆಯ ಮತ್ತು ಜಾಗಕ್ಕೆ ತಕ್ಕಂತೆ ಅಡವಳಿಸಿರುತ್ತಾರೆ. ಆದ್ದರಿಂದ ಟ್ಯಾಪ್ ಥ್ರೆಡ್’ಗೆ ಸಣ್ಣ ಪೈಪ್ ಪೀಸ್ ಹಾಗೂ ಎಲ್ಬೋ ಕನೆಕ್ಟ್ ಮಾಡಿ ಎಲ್ಲಿ ಬೇಕಿದ್ದರು ಫಿಕ್ಸ್ ಮಾಡಬಹುದು. ಪ್ಲಗ್ ಕನೆಕ್ಟರ್ ಬಾಕ್ಸ್’ಗೆ ಫಿಕ್ಸ್ ಮಾಡಿಕೊಂಡರೆ ಸಾಕು ಪ್ರೋಸೆಸ್ ಪೂರ್ಣ ಆಗುವುದು. ಬಿಸಿ ನೀರಿಗೆ ಕೆಂಪು ಬಣ್ಣದ ಗುರುತು ಇರುವ ಕಡೆ ತಿರುಗಿಸಬೇಕು. ತಣ್ಣನೆಯ ನೀರಿಗೆ ಬೇರೆ ಟ್ಯಾಪ್ ಅವಶ್ಯಕತೆ ಇಲ್ಲ, ಇದೆ ಟ್ಯಾಪ್ ಗೀಸರ್ನಲ್ಲಿ ಇರುವ ನೀಲಿ ಬಣ್ಣದ ಗುರುತಿನ ಕಡೆ ತಿರುಗಿಸಿದರೆ ತಣ್ಣೀರು ಕೂಡ ಬರುತ್ತದೆ. ಯಾವ ಟೆಂಪರೇಚರ್ನಲ್ಲಿ ನೀರು ಬರುತ್ತಿದೆ ಎಂದು ತೋರಿಸಲು ಮೀಟರ್ ಸಹ ಟ್ಯಾಪ್’ನಲ್ಲಿ ತೋರಿಸುತ್ತದೆ. ಟೆಂಪರೇಚರ್ ಹೆಚ್ಚಂದಂತೆ ಬಿಸಿ ಕೂಡ ಹೆಚ್ಚಾಗುತ್ತದೆ. ಎಲ್ಲಾ ಸಮಯದಲ್ಲಿ ಬಹು ಬೇಗನೆ ಬಿಸಿ ನೀರು ಪಡೆಯಲು, ಎಲ್ಲಾ ಜನರಿಗೂ ಬೇಕಾಗಿರುವ ಮತ್ತು ಅನುಕೂಲಕರ ಸಾಧನ ಈ ಇನ್’ಸ್ಟಂಟ್ ಟ್ಯಾಪ್ ಗೀಸರ್.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!