ಮನುಷ್ಯನು ಖುಷಿಯಿಂದ ಇರಬೇಕೆಂದರೆ ಮೊದಲಿಗೆ ಅವನ ಮನಸ್ಸು ಶಾಂತಿಯುತವಾಗಿ ಹಾಗೂ ನೆಮ್ಮದಿಯಾಗಿ ಇರಬೇಕು. ಹಾಗಾದರೆ ಅಶಾಂತಿಗೆ ಕಾರಣವೇನು? ಶಾಂತಿಯಿಂದ ಇರಲು ಏನು ಮಾಡಬೇಕು? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ನಾವೂ ಈ ಮಾಹಿತಿಯಿಂದ ಪಡೆಯೋಣ.
ಎಷ್ಟು ಪ್ರಯತ್ನ ಪಟ್ಟರು ಮನುಷ್ಯನು ತನ್ನ ಮನಸ್ಸಿನೊಳಗೆ ಶಾಂತಿಯ ಅನುಭವ ಪಡೆಯಲು ಸಾಧ್ಯವಾಗುತ್ತಿಲ್ಲ. ಅಶಾಂತಿಯು ಕ್ಷಣ ಕ್ಷಣವೂ ಹೆಚ್ಚುತ್ತಲೆ ಇರುತ್ತದೆ. ಇದರಿಂದಾಗಿ ಮಾಡಲು ಹೋದ ಯಾವ ಕಾರ್ಯಗಳಲ್ಲಿ ನಮಗೆ ತೃಪ್ತಿ, ಖುಷಿ, ಗೆಲುವು ಸಿಗುವುದಿಲ್ಲ. ಯಾವುದೇ ಕೆಲಸಕ್ಕೂ ಮನಸ್ಸಿನ ಶಾಂತಿ ತುಂಬಾ ಮುಖ್ಯ. ಮನಸ್ಸಿನ ಅಶಾಂತಿಗೆ ಕಾರಣ ಹುಡುಕಿದಾಗ ಸಾಮಾನ್ಯವಾಗಿ ಎಲ್ಲರೂ ಬೇರೆಯವರ ಕಡೆ ಬೆರಳು ಮಾಡುವುದು. ಸಂಬಂಧಿಕರು, ಆಫೀಸ್ ಇಲ್ಲವೇ ಸುತ್ತಮುತ್ತಲಿನ ಜನರು ಹೀಗೆ ನಮ್ಮ ಅಶಾಂತಿಗೆ ಕಾರಣ ಬೇರೆ ಯಾವುದೊ ಮೂಲ ಎನ್ನುತ್ತೇವೆ. ಆದರೆ ಮನುಷ್ಯನು ಸ್ವಯಂ ಅಶಾಂತಿಗೆ ಒಳಗಾಗದೆ ಬೇರೆ ಯಾರು ಅವನ ಶಾಂತಿಯನ್ನು ಭಂಗಗೊಳಿಸಲು ಸಾಧ್ಯವಿಲ್ಲ ಎಂಬ ವಾಸ್ತವದ ಮಾತು ಮನುಷ್ಯನು ತಿಳಿದಿಲ್ಲ. ಮಹಾನ್ ಸಾಧನೆಗೆ ಮೂಲವಾಗಿದೆ ಶಾಂತಿ. ಮನಃಶಾಂತಿ ಒಂದು ಅದ್ಭುತ ಶಕ್ತಿ ಹೊಂದಿದೆ. ಎಲ್ಲಾ ವಿಜ್ಞಾನಿಗಳು, ಸಾಧಕರು ಎಲ್ಲರೂ ಯಾವುದೆ ಒಂದು ಕೆಲಸ ಮಾಡುವಾಗ ಒಬ್ಬರೆ ಕುಳಿತು ಶಾಂತಿಯಿಂದ ಯೋಚಿಸಿ ಕಾರ್ಯ ಕೈಗೊಳ್ಳುತ್ತಾರೆ. ಜಗತ್ತಿನ ಗದ್ದಲದಿಂದ ದೂರ ಉಳಿದು, ಮನಸ್ಸಿನ ಅಶಾಂತಿ ಮರೆತು ಹೊಸ ತೆರೆನಾದ ಸಂಶೋಧನೆಗೆ ಕಾರಣವಾಗುತ್ತಾರೆ. ಮನಃಶಾಂತಿ ಪಡೆಯಲು ಏನು ಮಾಡಬೇಕು. ನಾವು ಬೇರೆಯವರ ಬಳಿ ಶಾಂತಿಯಿಂದ ಇರಲು ಬಿಡಿ ಎನ್ನುತ್ತೇವೆ. ಸ್ವಲ್ಪ ಸಮಯದ ನಂತರ ಮತ್ತೆ ಏನೊ ಒಂದು ಕೆಲಸದಿಂದ ಇಲ್ಲವೇ ಸಂದರ್ಭದಲ್ಲಿ ಮತ್ತೆ ಅಶಾಂತಿ ಉಂಟಾಗುತ್ತದೆ. ಆದರೆ ವಿಷಯ ಏನೆಂದರೆ ಜಗತ್ತಿನ ಯಾವ ವ್ಯಕ್ತಿಯಿಂದಲೂ ನಮಗೆ ಶಾಂತಿ ದೊರೆಯುವುದಿಲ್ಲ.
ಜಗತ್ತಿನ ನಡುವೆ, ಎಲ್ಲೆಲೂ ಶಾಂತಿ ಹುಡುಕುತ್ತಿರುವ ಬದಲು ನಮ್ಮಲ್ಲಿ ಶಾಂತಿ ಹುಡುಕಿಕೊಂಡಾಗ ಅಶಾಂತಿ ನಮ್ಮಿಂದ ದೂರಾಗುತ್ತದೆ. ದಿನ ಬೆಳಿಗ್ಗೆಯಿಂದ ಅಶಾಂತಿ ಇದೆ, ಶಾಂತಿ ಇಲ್ಲ ಎನ್ನುವ ನೆಗೆಟಿವ್ ಆಲೋಚನೆ ಬಿಟ್ಟು ಒಳ್ಳೆಯ ಆಲೋಚನೆ ರೂಢಿಸಿಕೊಳ್ಳಬೇಕು. ನನ್ನ ಮನಸ್ಸು ಶಾಂತವಾಗಿದೆ ಎಂದಾಗ ಮನಸ್ಸು ನಿಧಾನವಾಗಿ ಶಾಂತವಾಗುತ್ತದೆ. ಮನಸ್ಸಿನ ಒಳಗಡೆ ಶಾಂತಿ ಇಲ್ಲದಿದ್ದಾಗ ಯಾರಾದರೂ ಆಡಿದ ಒಂದು ಮಾತು ಕೂಡ ನಮ್ಮನ್ನು ಕೆರಳಿಸುತ್ತದೆ. ಮನಸ್ಸಿನ ಅಶಾಂತಿ ಜಗಳ ಮಾಡುವಂತೆ ಮಾಡುತ್ತದೆ.ಮನಸ್ಸಿನ ಶಾಂತಿ ಉಳಿಸಿಕೊಳ್ಳಲು ಶಾಂತ ಸಂಕಲ್ಪ ಹಾಗೂ ಆಲೋಚನೆ ನಾವೆ ಸೃಷ್ಟಿಸಬೇಕು. ಯಾಕೆಂದರೆ ಮನಸ್ಸಿನ ಮಾಲಿಕ ನಾವೆ ಆಗಿರುತ್ತೆವೆ. ನಾವು ಹೇಳಿದಂತೆ ಮಾತ್ರ ಮನಸ್ಸು ಕೇಳುತ್ತದೆ. ಬೇರೆ ಯಾರಿಂದಲೂ ಶಾಂತಿ ತಂದು ಕೊಡಲು ಸಾಧ್ಯವಿಲ್ಲ. ಜಗತ್ತಿನ ಎಷ್ಟು ಸಾಧಕರಿದ್ದಾರೆ ಅವರನ್ನೇ ಗಮನಿಸಿ ನೋಡಿ, ಅವಶ್ಯಕತೆ ಇದ್ದಷ್ಟು ಹಾಗೂ ಕಡಿಮೆ ಮಾತನಾಡುತ್ತಾರೆ. ಏನಾದರೂ ಸಾಧನೆ ಮಾಡಲು, ಉತ್ತಮ ಕಾರ್ಯ ಮಾಡಲು ಮನಃಶಾಂತಿ ಕಾಪಾಡಿಕೊಳ್ಳಬೇಕು. ಹೀಗೆ ಮನಃಶಾಂತಿ ಪಡೆಯಲು ಬೆಳಿಗ್ಗೆ ಎದ್ದ ಕೂಡಲೇ ಶಾಂತಿ ಇಂದ ಇದ್ದೆನೆ, ಶಾಂತ ಆತ್ಮ ನನ್ನದು, ಎಂದೂ ಬೆಳಿಗ್ಗೆ ಎದ್ದಾಗ ಹಾಗೂ ರಾತ್ರಿ ಸಮಯದಲ್ಲಿ ಇಪ್ಪತ್ತೊಂದು ಬಾರಿ ಹೇಳಿಕೊಳ್ಳಬೇಕು.
ಈ ರೀತಿಯಲ್ಲಿ ಮನಃಶಾಂತಿಯನ್ನು ನಮ್ಮೊಳಗೆ ಹುಡುಕುವುದರಿಂದ ಎಂತಹ ಅಸಂಭವದ ಕೆಲಸಗಳನ್ನು ನಾವೂ ಮಾಡಬಹುದು. ಅಂತಹದ್ದೊಂದು ಏಕಾಗ್ರತೆಯ ಶಕ್ತಿ ನಮ್ಮಲ್ಲಿ ಜಾಗೃತವಾಗುತ್ತದೆ. ಮನಃಶಾಂತಿ ಇದ್ದಲ್ಲಿ ಎಷ್ಟೋ ವಿಷಯಗಳನ್ನು ಕಲಿಯಲು ಸಾಧ್ಯವಿದೆ. ನಮ್ಮಲ್ಲಿ ಅಡಗಿರುವ ಪ್ರತಿಭೆಗಳ ಹಾಗೂ ಗುಣಗಳ ಬಗೆಗಿನ ಅಧ್ಯಯನ ನಮ್ಮೊಳಗೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ.
ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ.