ಎಲ್ಲರಿಗೂ ತಾವು ಒಂದು ನಿರ್ದಿಷ್ಟ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಇರುತ್ತದೆ ಅದೇ ರೀತಿಯಾಗಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕೆಂಬ ಆಸೆಯನ್ನು ಹೊಂದಿರುವವರಿಗೆ ನಾವಿಂದು ಸಿಹಿಸುದ್ದಿಯನ್ನು ತಿಳಿಸಿಕೊಡುತ್ತೇವೆ. ನಾವಿಂದು ನಿಮಗೆ ಕರ್ನಾಟಕದ ಆರ್ ಪಿ ಎಫ್ ಅಂದರೆ ರೈಲ್ವೆ ಪ್ರೋಟೆಕ್ಷನ್ ಬೋರ್ಡ್ ನಿಂದ ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಹೊರಡಿಸಲಾಗಿರುವ ನೇಮಕಾತಿಯ ಬಗ್ಗೆ ಕುರಿತಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ. ಅನೇಕ ಜನರು ಈಗಾಗಲೇ ರೈಲ್ವೆ ಇಲಾಖೆಯ ಪೊಲೀಸ್ ಪ್ರೋಟೆಕ್ಷನ್ ಇಲಾಖೆಯಿಂದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಯಾವಾಗ ಕರೆಯುತ್ತಾರೆ ಎಂಬುದರ ಬಗ್ಗೆ ಕಾಯುತ್ತಿದ್ದರು ಅದರ ಕುರಿತಾದ ಮಾಹಿತಿಯನ್ನು ನಾವೀಗ ತಿಳಿಸಿಕೊಡುತ್ತೇವೆ.
ಅಕ್ಟೋಬರ್ ಎರಡು, ಎರಡು ಸಾವಿರದ ಇಪ್ಪತ್ತೊಂದರ ಇತ್ತೀಚಿಗೆ ಅಪ್ಡೇಟ್ ಆಗಿರುವ ಮಾಹಿತಿಯ ಪ್ರಕಾರ ಆರ್ ಪಿ ಎಫ್ ಶೀಘ್ರದಲ್ಲಿ ಎರಡು ಸಾವಿರದ ಇಪ್ಪತ್ತೊಂದರ ಕಾನ್ಸ್ಟೇಬಲ್ ನೇಮಕಾತಿಯ ಕುರಿತು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ಖಾಲಿ ಇರುವ ಹುದ್ದೆಗಳಿಗೆ ಸಿದ್ಧರಾಗಿ ಮತ್ತು ಅರ್ಹತಾ ಮಾನದಂಡಗಳ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಜೊತೆಗೆ ಆರ್ ಪಿ ಎಫ್ ನಲ್ಲಿ ವಿವಿಧ ಹುದ್ದೆಗಳಿಗೆ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್ ನೊಂದಿಗೆ ಸಂಪರ್ಕದಲ್ಲಿರಬೇಕು ಎಂದು ತಿಳಿಸಲಾಗಿದೆ. ನಾವೀಗ ಆರ್ ಪಿ ಎಫ್ ನ ಹಿಂದಿನ ವರ್ಷದ ನೇಮಕಾತಿಯ ಬಗ್ಗೆ ತಿಳಿದುಕೊಳ್ಳೋಣ.
ಆರ್ ಪಿ ಎಫ್ ನ ಹಿಂದಿನ ವರ್ಷದ ನೇಮಕಾತಿ ವಿವರದಲ್ಲಿ ಮುಂಬರುವ ಅಧಿಸೂಚನೆಯಲ್ಲಿ ಕಾನ್ಸ್ಟೇಬಲ್ ಹುದ್ದೆಗಳನ್ನು ಘೋಷಿಸಲಾಗುತ್ತದೆ ಎಂದು ತಿಳಿಸಿದ್ದರು. ವೇತನ ಶ್ರೇಣಿಯ ಬಗ್ಗೆ ನೋಡುವುದಾದರೆ ಏಳನೇ ಸಿಪಿಸಿ ಪಾವತಿ ಮ್ಯಾಟ್ರಿಕ್ಸ್ ನ ಹಂತ ಮೂರು ಆರಂಭಿಕ ಪಾವತಿಯೊಂದಿಗೆ ಇಪ್ಪತ್ತೊಂದು ಸಾವಿರದ ಏಳು ನೂರು ರೂಪಾಯಿ ಜೊತೆಗೆ ಆಯಾ ಸಮಯದಲ್ಲಿ ಅನುಮತಿಸಬಹುದಾದ ಇತರ ಭತ್ಯೆಗಳು ಕೂಡಿರುತ್ತವೆ ಎಂದು ಮಾಹಿತಿಯನ್ನು ಕೊಡಲಾಗಿದೆ.
ಸ್ಪರ್ಧಾರ್ಥಿಗಳ ವಯಸ್ಸಿನ ಮಿತಿಯ ಬಗ್ಗೆ ನೋಡುವುದಾದರೆ ಒಂದು ಆಗಸ್ಟ್ ಎರಡು ಸಾವಿರದ ಇಪ್ಪತ್ತೊಂದರಂತೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು ಹದಿನೆಂಟರಿಂದ ಇಪ್ಪತ್ತೈದು ವರ್ಷದೊಳಗಿರಬೇಕು ಎಂದು ಕೊಡಲಾಗಿದೆ. ಮೆಟ್ರಿಕುಲೇಷನ್ ಅಥವಾ ತತ್ಸಮಾನ ಪ್ರಮಾಣಪತ್ರದಲ್ಲಿ ನಮೂದಿಸಿರುವ ವಯಸ್ಸು ಮಾತ್ರ ಸ್ವೀಕರಿಸಲ್ಪಡುತ್ತದೆ ಎಂದು ತಿಳಿಸಲಾಗಿದೆ. ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ವಯಸ್ಸಿನ ಮಿತಿ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆ ಬಗ್ಗೆ ತಿಳಿಯುವುದಾದರೆ ಮಾನ್ಯತೆ ಪಡೆದಿರುವ ಕಾನ್ಸ್ಟೇಬಲ್ ಮಂಡಳಿಯಿಂದ ಕಾರ್ಯನಿರ್ವಾಹಕ ಮೆಟ್ರಿಕುಲೇಷನ್ ಪ್ರಮಾಣ ಪತ್ರ ಮಾನ್ಯವಾಗಿರುತ್ತದೆ ಎಂದು ತಿಳಿಸಲಾಗಿದೆ. ನಿಗದಿತ ಶೈಕ್ಷಣಿಕ ಅರ್ಹತೆಯ ಅಂತಿಮ ಪರೀಕ್ಷೆಯಲ್ಲಿ ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿಯನ್ನು ಸಲ್ಲಿಸಬಾರದು. ಅರ್ಜಿ ಶುಲ್ಕದ ಬಗ್ಗೆ ತಿಳಿಯುವುದಾದರೆ ಇತರ ಅಭ್ಯರ್ಥಿಗಳು ನಾಲ್ಕುನೂರು ರೂಪಾಯಿ ಅರ್ಜಿ ಶುಲ್ಕವನ್ನು ಮತ್ತು ಎಸ್ಸಿ-ಎಸ್ಟಿ ಅಭ್ಯರ್ಥಿಗಳು ಎರಡು ನೂರಾ ಐವತ್ತು ರುಪಾಯಿ ಅರ್ಜಿ ಶುಲ್ಕವನ್ನು ತುಂಬಬೇಕಾಗುತ್ತದೆ. ಇನ್ನು ಅರ್ಜಿಯನ್ನು ಎಲ್ಲಿ ಮತ್ತು ಯಾವ ರೀತಿಯಾಗಿ ಸಲ್ಲಿಸಬೇಕು ಎನ್ನುವುದನ್ನು ನೋಡುವುದಾದರೆ, ಅರ್ಜಿ ನಮೂನೆಯನ್ನು ಆನ್ಲೈನ್ನಲ್ಲಿ ಮಾತ್ರ ಸ್ವೀಕರಿಸಬೇಕು ಹಾಗೂ ಆಫ್ಲೈನ್ ಅಥವಾ ಇತರ ಯಾವುದೇ ಮೊಡ್ ಅನ್ನು ತಿರಸ್ಕರಿಸಲಾಗುತ್ತದೆ ಎನ್ನುವ ಮಾಹಿತಿ ಇದೆ.
ಅದರಿಂದ ಎಲ್ಲಾ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಶುಲ್ಕವನ್ನು ಸಲ್ಲಿಸದ ಅರ್ಜಿ ನಮೂನೆಯನ್ನು ಸ್ವೀಕರಿಸುವುದಿಲ್ಲ. ಒಂದು ಬಾರಿ ಅರ್ಜಿ ಶುಲ್ಕವನ್ನು ಪಾವತಿಸಿದರೆ ಅದನ್ನು ಮರಳಿ ಕೊಡುವುದಿಲ್ಲ ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಕೊನೆಯ ದಿನಾಂಕ ಮತ್ತು ಪರೀಕ್ಷೆಯ ದಿನಾಂಕಗಳನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ನಿಮಗೆ ರೈಲ್ವೆ ಇಲಾಖೆಯ ಪ್ರೋಟೆಕ್ಷನ್ ಬೋರ್ಡ್ ನಲ್ಲಿ ಕೆಲಸ ಮಾಡುವ ಆಸಕ್ತಿ ಇದ್ದರೆ ನೀವು ಕೂಡ ಅದರ ನೇಮಕಾತಿಗೆ ಬೇಕಾದ ಪೂರ್ವತಯಾರಿಗಳನ್ನು ಮಾಡಿಕೊಂಡು ನೇಮಕಾತಿಯಲ್ಲಿ ಭಾಗವಹಿಸುವುದಕ್ಕೆ ಸಿದ್ಧವಾಗಿರಿ ಜೊತೆಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430