indian oil free solar stave: ನಮ್ಮ ದೇಶದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಸ್ಟವ್ ಇದ್ದೆ ಇರುತ್ತದೆ. ಅಡುಗೆ ಮಾಡಿಕೊಳ್ಳುವುದಕ್ಕೆ ಸ್ಟವ್ ಅತ್ಯವಶ್ಯಕ. ಆದರೆ ಈಗ ನಮ್ಮ ದೇಶದಲ್ಲಿ ಎಲ್.ಪಿ.ಜಿ ಸಿಲಿಂಡರ್ ಗಳ ಬೆಲೆ ಹೆಚ್ಚಾಗುತ್ತಿದೆ. ಜೊತೆಗೆ ಪೆಟ್ರೋಲಿಯಂ ಕೊರತೆ ಕೂಡ ದೇಶದಲ್ಲಿ ಜಾಸ್ತಿಯಾಗಿದೆ. ಈ ಕಾರಣಕ್ಕೆ ಸೋಲಾರ್ ಸ್ಟವ್ ಬಳಕೆ ಮಾಡುವ ಕೆಲಸವು ನಡೆಯುತ್ತಿದೆ. ಹಲವು ಜನರು ಈಗಾಗಲೇ ಸೋಲಾರ್ ಸ್ಟವ್ ಬಳಸುತ್ತಿದ್ದಾರೆ.

ಇದೀಗ ಹೆಚ್ಚಿನ ಜನರು ಸೋಲಾರ್ ಸ್ಟವ್ ಬಳಕೆ ಮಾಡಲಿ ಎನ್ನುವ ಕಾರಣಕ್ಕೆ ಹೊಸದೊಂದು ಐಡಿಯಾವನ್ನು ಹೊರತರಲಾಗಿದೆ. ಅದೇನು ಎಂದರೆ, ಇಂಡಿಯನ್ ಆಯಿಲ್ ಸಂಸ್ಥೆ ಈಗ ತಮ್ಮ ಸಂಸ್ಥೆಯ ಸೋಲಾರ್ ಸ್ಟವ್ ಅನ್ನು ದೀಪಾವಳಿ ಹಬ್ಬದ ಕೊಡುಗೆಯಾಗಿ ಜನರಿಗೆ ನೀಡಲು ಮುಂದಾಗಿದೆ. ಇಂಡಿಯನ್ ಆಯಿಲ್ ಕಂಪನಿ ಈಗ ಪರಿಚಯ ಮಾಡುತ್ತಿರುವ ಹೊಸ ಸ್ಟವ್ ಇದು ಪುನರ್ ಭರ್ತಿ ಮಾಡಬಹುದಾದ ಒಳಾಂಗಣ ಸ್ಟವ್ ಆಗಿದೆ.

ಈ ಥರದ ಸ್ಟವ್ ಗಳಲ್ಲಿ ಅಡುಗೆ ಮಾಡುವುದು ಮಹಿಳೆಯರಿಗೆ ಸುರಕ್ಷತೆ ನೀಡುತ್ತದೆ. ಅವರಿಗೆ ಹೊಗೆಯಿಲ್ಲದ ವಾತಾವರಣದಲ್ಲಿ ಅಡುಗೆ ಮಾಡಲು ಸಹಾಯ ಮಾಡುತ್ತದೆ. ಈ ಸ್ಟವ್ ನ ಮತ್ತೊಂದು ವಿಶೇಷತೆ ಇದು ಸಿಂಗಲ್ ಮತ್ತು ಡಬಲ್ ಬರ್ನಲ್ ಎರರು ರೀತಿಯಲ್ಲಿ ಸಿಗುತ್ತದೆ. ಹಾಗೆಯೇ ಇದರಲ್ಲಿ ಫ್ರೈ ಮಾಡುವ, ಬೇಯಿಸುವ ಮತ್ತು ಸ್ಟೀಮ್ ಮಾಡುವ ಎಲ್ಲಾ ರೀತಿಯ ಅಡುಗೆಗಳನ್ನು ಸುಲಭವಾಗಿ ತಯಾರಿಸಬಹುದು.

indian oil free solar stave

ಈ ಸ್ಟವ್ ನ ಸಾಮರ್ಥ್ಯವನ್ನು ಸಹ ಟೆಸ್ಟ್ ಮಾಡಲಾಗಿದೆ. ಇಂಧನ ಸಚಿವರಾದ ಹರ್ದೀಪ್ ಸಿಂಗ್ ಅವರು ತಮ್ಮ ಮನೆಯಲ್ಲಿ ಇದರ ಬಗ್ಗೆ ಒಂದು ಕಾರ್ಯಕ್ರಮ ಮಾಡಿ, ಈ ಸ್ಟವ್ ಗೆ ಸೂರ್ಯ ನೂತನ್ ಎಂದು ಹೆಸರನ್ನು ಇಟ್ಟಿದ್ದಾರೆ. ಈ ಸ್ಟವ್ ನಲ್ಲಿ ನೀವು ಕರೆಂಟ್ ಅಥವಾ ಇನ್ಯಾವುದರ ಅವಶ್ಯಕತೆ ಕೂಡ ಇಲ್ಲದೆ, ಸುಲಭವಾಗಿ ಅಡುಗೆ ಮಾಡಬಹುದು. ಬೆಳಕಿನ ಸಮಯದಲ್ಲಿ ಬಹಳ ಚುರುಕಾಗಿ ಕೆಲಸ ಮಾಡುವ ಈ ಸ್ಟವ್, ಬೆಳಗಿನ ವೇಳೆ ಸೂರ್ಯನ ಎನರ್ಜಿಯನ್ನು ಸೇವ್ ಮಾಡಿ ಇಟ್ಟುಕೊಂಡು, ರಾತ್ರಿ ವೇಳೆ ಕೂಡ ಕಾರ್ಯ ನಿರ್ವಹಿಸುತ್ತದೆ..

ಒಂದು ಸಾರಿ ಈ ಸ್ಟವ್ ಖರೀದಿ ಮಾಡಿದರೆ, ಬಹಳ ವರ್ಷಗಳ ವರೆಗು ಯಾವುದೇ ತೊಂದರೆ ಇಲ್ಲದೆ, ಬಳಸಬಹುದು. ಈ ವಿಶಿಷ್ಟ ರೀತಿಯ ಸ್ಟವ್ ಅನ್ನು ಪಡೆಯಲು ಈಗ ಬುಕಿಂಗ್ ಓಪನ್ ಆಗಿದೆ. ಈ ವೇಳೆ ಬುಕಿಂಗ್ ಮಾಡಿದರೆ ದೀಪಾವಳಿ ಹಬ್ಬದ ಕಾರಣ ನಿಮಗೆ ಹೆಚ್ಚು ಡಿಸ್ಕೌಂಟ್ ಸಿಗುತ್ತದೆ. ಸ್ಟವ್ ಬಗ್ಗೆ ಮತ್ತು ಬುಕಿಂಗ್ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಹತ್ತಿರದ ಇಂಡಿಯನ್ ಆಯಿಲ್ ಆಫೀಸ್ ಗೆ ಭೇಟಿ ನೀಡಬಹುದು. ಅಥವಾ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಕೂಡ ಸ್ಟವ್ ಬುಕ್ ಮಾಡಬಹುದು. ಅಥವಾ IOC ವೆಬ್ಸೈಟ್ ಇಂದ ಹೆಚ್ಚಿನ ಮಾಹಿತಿ ಪಡೆಯಬಹುದು.

ಸೋಲಾರ್ ಸ್ಟವ್ ಬುಕ್ ಮಾಡಲು ಕೆಲವು ದಾಖಲೆಗಳು ಅಗತ್ಯವಿದೆ. ಅವುಗಳು ಏನೇನು ಎಂದು ನೋಡುವುದಾದರೆ, ಅಪ್ಲೈ ಮಾಡುವವರ ಹೆಸರು, ಇಮೇಲ್ ಐಡಿ, ಮೊಬೈಲ್ ನಂಬರ್, ಜಿಲ್ಲೆ ಮತ್ತು ರಾಜ್ಯದ ಮಾಹಿತಿ, ಮನೆಯ ಸದಸ್ಯರ ವಿವರ, ಇದರ ಜೊತೆಗೆ ಸೋಲಾರ್ ಪ್ಯಾನೆಲ್ ಅಳವಡಿಸಲು ನಿಮ್ಮ ಮನೆಯಲ್ಲಿ ವ್ಯವಸ್ಥೆ ಇದೆಯಾ ಎನ್ನುವುದು ಮತ್ತು ಎಷ್ಟು ವರ್ಷದಿಂದ ಗ್ಯಾಸ್ ಬಳಕೆ ಮಾಡುತ್ತಿದ್ದೀರಿ ಎನ್ನುವುದರ ಮಾಹಿತಿಯನ್ನು ನೀಡಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!