ಪ್ರತಿಯೊಬ್ಬರು ವಿಧವಿಧವಾದ ಕೆಲಸ ಮಾಡಿಕೊಂಡು ಹಣವನ್ನು ಸಂಪಾದಿಸುತ್ತಾರೆ ಆದರೆ ಭಿಕ್ಷೆ ಬೇಡಿಕೊಂಡು ಲಕ್ಷಾಂತರ ಹಣ ಸಂಪಾದಿಸಿದ ಭಾರತದ ಅತ್ಯಂತ ಧನವಂತ ಭಿಕ್ಷುಕರ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ
ಭಾರತದಲ್ಲಿ ಅತ್ಯಂತ ಶ್ರೀಮಂತ ಭಿಕ್ಷುಕರಲ್ಲಿ ಭರತ ಜೈನ್ ಒಬ್ಬ. ಈತನಿಗೆ 54 ವರ್ಷ ವಯಸ್ಸಾಯಿತು. ಈತ ಮುಂಬೈಯಲ್ಲಿ ಭಿಕ್ಷೆ ಬೇಡುತ್ತಿದ್ದಾನೆ. ಈತನಿಗೆ 2 ಅಪಾರ್ಟಮೆಂಟ್ ಇದೆ ಒಂದೊಂದರ ಬೆಲೆ 70 ಲಕ್ಷ. ಒಂದು ಜ್ಯೂಸ್ ಶೋಪ್ ಗೆ ತನ್ನ ಸ್ಥಳವನ್ನು ರೆಂಟ್ ಗೆ ಕೊಟ್ಟಿದ್ದಾನೆ, ಅದರ ರೆಂಟ್ ಪ್ರತಿ ತಿಂಗಳು 10,000ರೂ ಬರುತ್ತದೆ. ಈತ ಪ್ರತಿತಿಂಗಳು 60 ರಿಂದ 70,000ರೂ ವರೆಗೆ ಭಿಕ್ಷೆ ಬೇಡುತ್ತಾ ಹಣ ಸಂಪಾದನೆ ಮಾಡುತ್ತಾನೆ.
ಇನ್ನೊಬ್ಬ ಕೃಷ್ಣಕುಮಾರ್ ಗೈಟ್ ಈತ ಮುಂಬೈನ ಚಾರ್ನಿ ರೋಡ್ ಸುತ್ತ ಮುತ್ತ ಭಿಕ್ಷೆ ಬೇಡುತ್ತಾನೆ. ಈತನ ಬಳಿ 5 ಲಕ್ಷ ಬೆಲೆ ಬಾಳುವ ಸ್ವಂತ ಫ್ಲ್ಯಾಟ್ ಇದೆ. ಈತ ಪ್ರತಿದಿನ 1,800-2000 ರೂ ವರೆಗೆ ಭಿಕ್ಷೆ ಬೇಡುತ್ತಾ ಹಣ ಸಂಪಾದನೆ ಮಾಡುತ್ತಾನೆ. ಈತನ ಬ್ರದರ್ ಈತನಿಗೆ ಆಕೌಂಟಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಸರ್ವತೀಯ ದೇವಿ ಈಕೆ ಪಾಟ್ನಾಗೆ ಸೇರಿದ ಮಹಿಳೆ, ಭಾರತ ದೇಶದ ಪ್ರಸಿದ್ಧ ಮಹಿಳಾ ಭಿಕ್ಷುಕಿಯರಲ್ಲಿ ಈಕೆ ಒಬ್ಬಳು. ರೇಲ್ವೆ ಟ್ರಾಫಿಕ್ ಸಿಗ್ನಲ್ ಬಳಿ ಭಿಕ್ಷೆ ಬೇಡುತ್ತಾಳೆ ಹೀಗೆ ಭಿಕ್ಷೆ ಬೇಡುತ್ತಾ 10 ಲಕ್ಷ ಹಣವನ್ನು ಡೆಪಾಸಿಟ್ ಇಟ್ಟಿದ್ದಾಳೆ. ಈಕೆಗೆ ಪಾಟ್ನಾದಲ್ಲಿ ಒಂದು ಒಳ್ಳೆಯ ಮನೆ ಇದೆ. ಸೌಕರ್ಯಯುತ ಜೀವನ ನಡೆಸುತ್ತಿದ್ದಾಳೆ ಅಲ್ಲದೇ ಪ್ರತಿ ವರ್ಷ 36,000ರೂ ಇನ್ಸುರೆನ್ಸ್ ಪ್ರೀಮಿಯಂ ಕಟ್ಟುತ್ತಿದ್ದಾಳೆ. ಮಗಳ ಮದುವೆ ಮಾಡಿದ್ದಾಳೆ. ಆಕೆಗೆ ಇಷ್ಟವಾದಾಗ ದೇಶದ ಪವಿತ್ರ ಸ್ಥಳಗಳಿಗೆ ಹೋಗುತ್ತಾಳೆ, ತೀರ್ಥ ಯಾತ್ರೆಗೆ ಹೋಗುತ್ತಾಳೆ.
ಸಾಂಬಾಜಿ ಕಾಲೆ ಈತ ಮುಂಬೈನ ಕಾರ ಪ್ರಾಂತ್ಯದಲ್ಲಿ ಭಿಕ್ಷೆ ಬೇಡುತ್ತಾನೆ. ಈತನಿಗೆ ಸೋಲಾಪುರದಲ್ಲಿ ಒಂದು ಸ್ವಂತ ಫ್ಲಾಟ್ ಇದೆ ಅದರೊಂದಿಗೆ 2 ಮನೆ ಹಾಗೂ ಸ್ವಲ್ಪ ಜಮೀನು ಇದೆ. 1,000ರೂ ಗಳಲ್ಲಿ ಹಣ ಹೂಡಿಕೆ ಹಾಗೂ ಲಕ್ಷಗಳಲ್ಲಿ ಬ್ಯಾಂಕ್ ಡೆಪಾಸಿಟ್ ಇದೆ. ಲಕ್ಷ್ಮೀ ದಾಸ್ ಇವಾಳು 1964 ರಲ್ಲಿ 16 ವರ್ಷದವಳಿದ್ದಾಗ ಭಿಕ್ಷೆ ಬೇಡುವುದು ಪ್ರಾರಂಭಿಸುತ್ತಾಳೆ. ಪೋಲಿಯೋ ಪೀಡಿತೆಯಾದ ಈಕೆ ಕಲ್ಕತ್ತಾದ ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಾಳೆ. ಬಂದ ಹಣದಲ್ಲಿ ತನ್ನ ಅವಶ್ಯಕತೆ ಪೂರೈಸಿ ಮಿಕ್ಕ ಹಣವನ್ನು ಬಕೆಟ್ ನಲ್ಲಿ ಹಾಕಿಕೊಂಡಿದ್ದಾಳೆ ಇಲ್ಲಿಯವರೆಗೂ 4 ಬಕೆಟ್ ನಲ್ಲಿ 90 ಕೆ.ಜಿ ನಾಣ್ಯವನ್ನು ಸಂಗ್ರಹಿಸಿದ್ದಾಳೆ. ಆ ಹಣವನ್ನು ಕಲ್ಕತ್ತಾ ಬ್ಯಾಂಕ್ ನಲ್ಲಿ ಡೆಪಾಸಿಟ್ ಮಾಡಿದ್ದಾಳೆ. ಈಕೆಯ ಪ್ರಸ್ತುತ ವಯಸ್ಸು 72 ವರ್ಷ. ಮಸು ಎಂದು ಕರೆಯಲ್ಪಡುವ ಈ ಭಿಕ್ಷುಕನ ಹೆಸರು ಮಲಾನ. ಈತನಿಗೆ 60 ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿದೆ. ಈತ ರೆಸ್ಟೋರೆಂಟ್ ಗಳ ಮುಂದೆ ಭಿಕ್ಷೆ ಬೇಡುತ್ತಾನೆ. ಈತನ ಆಸ್ತಿಯ ಮೌಲ್ಯ 30 ಲಕ್ಷ. ಈತನಿಗೆ ಸ್ವಂತ ಫ್ಲಾಟ್ ಇದೆ. ತಾನು ಯಾವ ಪ್ರದೇಶದಲ್ಲಿ ಭಿಕ್ಷೆ ಬೇಡಬೇಕು ಎಂದುಕೊಳ್ಳುತ್ತಾನೆ ಆ ಪ್ರದೇಶಕ್ಕೆ ಆಟೋದಲ್ಲಿ ತೆರಳಿ ತಾನು ಹಾಕಿಕೊಂಡ ಬಟ್ಟೆಯನ್ನು ಬದಲಿಸಿ ಹರಿದ, ಗಲೀಜಾದ ಬಟ್ಟೆಯನ್ನು ಹಾಕಿಕೊಂಡು ಭಿಕ್ಷೆ ಬೇಡುತ್ತಾನೆ. 8-10 ಗಂಟೆ ಭಿಕ್ಷೆ ಬೇಡಿದ ನಂತರ ಗಲೀಜಾದ ಬಟ್ಟೆಯನ್ನು ತೆಗೆದು ತನ್ನ ಬೇರೆ ಬಟ್ಟೆಯನ್ನು ಹಾಕಿಕೊಂಡು ಆಟೋದಲ್ಲಿ ಮನೆಗೆ ಬರುತ್ತಾನೆ. ಪ್ರತಿದಿನ 1,000ರು ಸಂಪಾದನೆ ಮಾಡುತ್ತಾನೆ.