ನಾವಿಂದು ನಿಮಗೆ ಭಾರತೀಯ ಹೈನುಗಾರಿಕೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿರುವ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತವೆ. ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಯಂಗ್ ಪ್ರೊಫೆಷನ್ ಆಫೀಸ್ ಅಸಿಸ್ಟೆಂಟ್ ಎಸ್ ಆರ್ ಎಫ್ ಜೆ ಆರ್ ಎಫ್ ಸೇರಿ ಒಟ್ಟು ಹದಿನೈದು ಹುದ್ದೆಗಳು ಖಾಲಿ ಇದ್ದು ಆಸಕ್ತರು ಈ ಕೂಡಲೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾರ್ಚ್ 8 ರಂದು ನೇರ ಸಂದರ್ಶನ ನಡೆಯಲಿದೆ. ಭಾರತೀಯ ಹೈನುಗಾರಿಕೆ ಇಲಾಖೆಯಲ್ಲಿ ಎಲ್ಲಾ ಹುದ್ದೆಗಳು ಖಾಲಿ ಇವೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಭಾರತೀಯ ಹೈನುಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ನೋಡುವುದಾದರೆ ಯಂಗ್ ಪ್ರೊಫೆಷನಲ್ ಗ್ರೇಡ್-1 ಎಂಟು ಹುದ್ದೆಗಳು ಸೀನಿಯರ್ ರಿಸರ್ಚ್ ಫೆಲೊ ಎಸ್ ಆರ್ ಎಫ್ ನಾಲ್ಕು ಹುದ್ದೆಗಳು ಆಫೀಸ್ ಅಸಿಸ್ಟೆಂಟ್ ಒಂದು ಹುದ್ದೆ ಯಂಗ್ ಪ್ರೊಫೆಷನಲ್ ಗ್ರೇಡ್-2 ಒಂದು ಹುದ್ದೆ ಜೂನಿಯರ್ ರಿಸರ್ಚ್ ಫೆಲೊ ಜೆ ಆರ್ ಎಫ್ ಒಂದು ಹುದ್ದೆ ಖಾಲಿ ಇದೆ. ಅದೇ ರೀತಿಯಾಗಿ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ದೊರೆಯಲಿದೆ. ಯಂಗ್ ಪ್ರೊಫೆಷನಲ್ ಗ್ರೇಡ್-1 ಹುದ್ದೆಗೆ ಪ್ರತಿ ತಿಂಗಳು 25000 ಸಾವಿರ ರೂಪಾಯಿ ವೇತನ ಇರುತ್ತದೆ ಸೀನಿಯರ್ ರಿಸರ್ಚ್ ಫೆಲೊ ಹುದ್ದೆಗೆ 31000 ದಿಂದ 35000 ವರೆಗೆ ಮಾಸಿಕ ವೇತನ ಇರುತ್ತದೆ.
ಆಫೀಸ್ ಅಸಿಸ್ಟೆಂಟ್ ಮಾಸಿಕ ವೇತನ 15000 ಆಗಿರುತ್ತದೆ ಯಂಗ್ ಪ್ರೊಫೆಷನಲ್ ಗ್ರೇಡ್ 2 ಮಾಸಿಕ ವೇತನ 35000 ಇರುತ್ತದೆ ಜೂನಿಯರ್ ರಿಸರ್ಚ್ ಫೆಲೊ ಜೆ ಆರ್ ಎಫ್ ಹುದ್ದೆಗೆ ಮಾಸಿಕ ವೇತನ 31000 ರೂಪಾಯಿ ಇರುತ್ತದೆ. ಮುಂದಿನ ದಾಗಿ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು ಎಂಬುದರ ಬಗ್ಗೆ ನೋಡುವುದಾದರೆ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಹುದ್ದೆ ಅನುಸಾರವಾಗಿ ಅರ್ಹತೆಯನ್ನು ಪಡೆದಿರಬೇಕು. ಯಂಗ್ ಪ್ರೊಫೆಷನಲ್ ಗ್ರೇಡ್ 1 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಕಾಂ ಅಥವಾ ಬಿಬಿಎ ಅಥವಾ ಬಿ ಬಿ ಎಸ್ ಪದವಿ ಅಥವಾ ಸ್ನಾತಕೋತ್ತರ ಪದವಿ ಅಥವಾ ಎಂಎಸ್ಸಿ ಮುಗಿಸಿರಬೇಕು.
ಸೀನಿಯರ್ ರಿಸರ್ಚ್ ಫೆಲೊ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯನ್ನು ಪಡೆದಿರಬೇಕು ಯಂಗ್ ಪ್ರೊಫೆಷನಲ್ ಗ್ರೇಡ್ 2 ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿರಬೇಕು ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಂಇ ಎಂಟೆಕ್ ಅಥವಾ ಎನ್ ವಿ ಎಸ್ ವಿ ಅಥವಾ ಎಂಎಸ್ಸಿ ಪದವಿಯನ್ನು ಪಡೆದಿರಬೇಕು. ಮುಂದಿನ ದಾಗಿ ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಯಂಗ್ ಪ್ರೊಫೆಷನಲ್ ಗ್ರೇಡ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಪ್ಪತ್ತೊಂದು ವರ್ಷದಿಂದ ನಲವತ್ತೈದು ವರ್ಷ ಒಳಗಿನವರಾಗಿರಬೇಕು ಸೀನಿಯರ್ ರಿಸರ್ಚ್ ಫೆಲೊ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ನಲವತ್ತು ವರ್ಷದವರಾಗಿರಬೇಕು.
ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಹದಿನೆಂಟು ವರ್ಷದಿಂದ ನಲವತ್ತೈದು ವರ್ಷದೊಳಗಿನವರಾಗಿರಬೇಕು ಯಂಗ್ ಪ್ರೊಫೆಷನಲ್ ಗ್ರೇಡ್2 ಹುದ್ದೆಗೆ ಅರ್ಜಿ ಸಲ್ಲಿಸುವವರು ಇಪ್ಪತ್ತೊಂದು ವರ್ಷದಿಂದ ನಲವತ್ತೈದು ವರ್ಷದೊಳಗಿನವರಾಗಿರಬೇಕು ಜೂನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಅರ್ಜಿ ಸಲ್ಲಿಸುವವರು ಗರಿಷ್ಠ ಮೂವತ್ತೈದು ವರ್ಷ ವಯಸ್ಸಾಗಿರಬೇಕು. ಇನ್ನು ಉದ್ಯೋಗ ಸ್ಥಳದ ಕುರಿತು ನೋಡುವುದಾದರೆ ರಾಷ್ಟ್ರೀಯ ಹೈನು, ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳು ಹರಿಹರದ ಕರ್ನಲ್ ನಲ್ಲಿ ಉದ್ಯೋಗ ಮಾಡಬೇಕು. ನೀವು ಕೂಡ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿರಿ.