ಹೆಣ್ಣು ಮನಸ್ಸು ಮಾಡಿದರೆ ಎಂತಹ ಜವಾಬ್ದಾರಿಯನ್ನು ಹೊರಬಲ್ಲಳು, ಆಕೆಯಲ್ಲಿ ಅಗಾಧ ಶಕ್ತಿಯಿದೆ ಎನ್ನುವುದಕ್ಕೆ ತಬಸುಮ್ ಎನ್ನುವವರ ಜೀವನ ಉತ್ತಮ ಉದಾಹರಣೆಯಾಗಿದೆ. ಹಾಗಾದರೆ ತಬಸುಮ್ ಅವರ ಕೌಟುಂಬಿಕ ಹಿನ್ನಲೆ ಹಾಗೂ ಅವರ ಸಾಧನೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ತಬಸುಮ್ ಎಂಬ ಮಹಿಳೆ ಮದ್ಯಪ್ರದೇಶಕ್ಕೆ ಸೇರಿದ್ದಾರೆ, ಅವರ ವಯಸ್ಸು 27 ವರ್ಷ. ಅವರು ಕಲಾ ವಿಭಾಗದಲ್ಲಿ ಪದವೀಧರರಾಗಿದ್ದಾರೆ. ಅವರು ಮಾಡಿರುವ ಸಾಧನೆಯಿಂದ ಸ್ಫೂರ್ತಿಯಾಗಿ ಅನೇಕ ಮಹಿಳೆಯರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಅವರು ಭಾರತ ದೇಶದ ಮೊದಲ ಹೆವಿ ಗೂಡ್ಸ್ ವೆಹಿಕಲ್ ಟ್ರೇನಿಂಗ್ ಲೈಸೆನ್ಸ್ ಪಡೆದ ಮಹಿಳೆಯಾಗಿದ್ದಾರೆ. ಅವರಿಗೆ 6 ಜನ ಅಕ್ಕ ತಂಗಿಯರಿದ್ದಾರೆ ಹಾಗೂ ಒಬ್ಬ ತಮ್ಮನಿದ್ದಾನೆ. ತಂದೆ ಟ್ರಕ್ ಓಡಿಸುತ್ತಿದರು ಅದರಿಂದ ಅವರ ಜೀವನ ನಡೆಯುತ್ತಿತ್ತು.

ತಂದೆಗೆ ವಯಸ್ಸಾಗಿರುವುದರಿಂದ ಇನ್ನು ಮುಂದೆ ಟ್ರಕ್ ಓಡಿಸುವುದು ಬೇಡ ಎಂದು ವೈದ್ಯರು ಸಲಹೆ ಕೊಡುತ್ತಾರೆ. ಹೀಗಾಗಿ ತಬಸುಮ್ ಕಳೆದ ಮೂರು ವರ್ಷಗಳಿಂದ ಟ್ರಕ್ ಓಡಿಸುತ್ತಿದ್ದಾರೆ. ಅವರಿಗೆ ಅವರ ತಂದೆಯೆ ಟ್ರಕ್ ಓಡಿಸಲು ಕಲಿಸಿದರು. ಹಗಲು ರಾತ್ರಿ ಎನ್ನದೆ ತಬಸುಮ್ ಟ್ರಕ್ ಓಡಿಸಿ ಮನೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಅವರು ಒಬ್ಬ ಹೆಣ್ಣುಮಗಳು ಏನು ಬೇಕಾದರೂ ಸಾಧಿಸುತ್ತಾಳೆ ಎನ್ನುವ ಸಂದೇಶವನ್ನು ಇಡಿ ಭಾರತಕ್ಕೆ ಸಾರಿದ ಏಕೈಕ ಮಹಿಳೆಯಾಗಿದ್ದಾರೆ. ತಬಸುಮ್ ಅವರು ಮಹಿಳೆಯರು ಯಾವುದರಲ್ಲೂ ಹಿಂದಿಲ್ಲ, ಯಾವುದಕ್ಕೂ ಕಡಿಮೆ ಇಲ್ಲ ಹಾಗೂ ಯಾರಿಗೂ ಕಡಿಮೆ ಇಲ್ಲ ಎಂದು ಭಾರತೀಯ ಮಹಿಳೆಯರಿಗೆ ಸಂದೇಶ ಸಾರಿದ್ದಾರೆ.

ಹೆಣ್ಣುಮಕ್ಕಳು ಇಂದು ಎಲ್ಲಾ ರಂಗದಲ್ಲೂ ಕೆಲಸ ಮಾಡುತ್ತಿದ್ದಾರೆ. ಟ್ರಕ್ ಚಲಾಯಿಸಲು ತಬಸುಮ್ ಅವರು ಮುಂದಾಗಿದ್ದು ಭಾರತದ ಎಲ್ಲಾ ಹೆಣ್ಣುಮಕ್ಕಳಿಗೆ ಹೆಮ್ಮೆಯ ವಿಷಯವಾಗಿದೆ. ತಬಸುಮ್ ಅವರ ಜೀವನ ಎದೆಗುಂದದೆ ಮುಂದೆ ಸಾಗಬೇಕು ಎನ್ನುವುದಕ್ಕೆ ಉತ್ತಮ ನಿದರ್ಶನವಾಗಿದೆ. ಭಾರತದ ಎಲ್ಲ ಮಹಿಳೆಯರಿಗೆ ತಬಸುಮ್ ಮಾದರಿಯಾಗಿದ್ದಾರೆ. ತಬಸುಮ್ ಅವರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!