ಕ್ರಿಕೆಟ್ ಆಟ ಎಂದರೆ ಅದೊಂದು ಹಬ್ಬ. ಇಂತಹ ಹಬ್ಬವನ್ನು ನೀಡುವ ಕ್ರಿಕೆಟ್ ನಲ್ಲಿ ಆಟಗಾರನ್ನು ಸೇರಿಸಿ ಉಳಿದಂತೆ ಹಲವು ಜನರು ಇರುತ್ತಾರೆ. ಆ್ಯಂಕರ್ ಗಳು, ಫಿಸಿಯೊಥೆರಪಿಸ್ಟ್ ಗಳು ಹೀಗೆ ತುಂಬಾ ಮಂದಿ ಇರುತ್ತಾರೆ. ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಕೆಲವು ಜನರ ಪರಿಚಯ ನಾವು ಇಲ್ಲಿ ಮಾಡಿಕೊಳ್ಳೋಣ.
ಮೊದಲನೆಯದಾಗಿ ಮಯಂತಿ ಲ್ಯಾಂಗರ್. ಇವರು ಸ್ಪೋರ್ಟ್ಸ್ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಾರೆ. ಹೆಚ್ಚಾಗಿ ಇವರು ಸ್ಟಾರ್ ಇಂಡಿಯಾ ಮತ್ತೆ ಸ್ಟಾರ್ ನೆಟ್ವರ್ಕ್ ಚಾನೆಲ್ ಗಳಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಾರೆ. ಮಯಂತಿ ದೆಹಲಿಯಲ್ಲಿ ಫೆಬ್ರವರಿ 8, 1985 ರಲ್ಲಿ ಜನಿಸಿದರು. ಮಯಂತಿ ಅವರು 2006 ರಿಂದ ಇಂದಿನವರೆಗೂ ವಿವಿಧ ಕಾರ್ಯಕ್ರಮಗಳಲ್ಲಿ ಆ್ಯಂಕರ್ ಆಗಿ ಕೆಲಸ ಮಾಡಿದ್ದಾರೆ.
ಸಂಜಿವ್ ಲ್ಯಾಂಗರ್, ರಿಟೈರ್ಡ್ ಲೆಫ್ಟಿನೆಂಟ್ ಜನರಲ್ ಹಾಗೂ ಪ್ರಮಿಂದಾ ಲ್ಯಾಂಗರ್ ಅವರ ಪುತ್ರಿ. ಕ್ರಿಕೆಟಿಗ ರೋಜರ್ ಬಿನ್ನಿ ಅವರ ಮಗ ಸ್ಟುವರ್ಟ್ ಬಿನ್ನಿ ಅವರೊಂದಿಗೆ 2012 ರಲ್ಲಿ ಮದುವೆಯಾಗುತ್ತಾರೆ. ಟೂರ್ನಮೆಂಟ್ ಗಳಾದ ಪುಟ್ಬಾಲ್ ಕೆಫೆ ಆಫ್ ದಿ ಸ್ಪೋರ್ಟ್ಸ್, ಫಿಫಾ ವರ್ಡ್ ಕಪ್ 2010, ಕಾಮನ್‌ವೆಲ್ತ್ ಗೇಮ್, ಕ್ರಿಕೆಟ್ ವರ್ಡ್ ಕಪ್ 2011, ಇಂಡಿಯನ್ ಸೂಪರ್ ಲೀಗ್ 2012, ಐಸಿಸಿ ವರ್ಡ್ ಕಪ್ 2015, ಐಪಿಎಲ್ 2018, ಐಪಿಎಲ್ 2019, ಕ್ರಿಕೆಟ್ ವರ್ಡ್ ಕಪ್ 2019 ಹೀಗೆ ಮುಂತಾದ ಟೂರ್ನಮೆಂಟ್ ಗಳಿಗೆ ಹೊಸ್ಟ್ ಆಗಿ ಕೆಲಸ ಮಾಡಿದ್ದಾರೆ. ಇವರು ಪುಟ್ಬಾಲ್ ಆಟಗಾರರು ಕೂಡ ಹೌದು. ಯುಎಸ್ಎ ನಲ್ಲಿ ಕಾಲೇಜ್ ಫುಟ್ಬಾಲ್ ಟೀಂ ರೆಪ್ರೆಸೆಂಟ್ ಮಾಡಿದ್ದಾರೆ. ಫೀಫಾ ಬೀಚ್ ಫುಟ್ಬಾಲ್ ಆಟದಲ್ಲಿ ಗೆಸ್ಟ್ ಆ್ಯಂಕರ್ ಆಗಿ ಕೆಲಸ ಮಾಡುತ್ತಾರೆ. ನಂತರ ಇವರಿಗೆ ಯಶಸ್ಸು ಸಿಗುತ್ತದೆ . ನಂತರ ಆ್ಯಂಕರ್ ಹಾಗೂ ಸಹ ನಿರ್ದೇಶಕಿಯಾಗಿ ಕೆಲಸ ಮಾಡುತ್ತಾರೆ. ಇವತ್ತಿಗೂ ಆ್ಯಂಕರ್ ಆಗಿರುವ ಮಯಂತಿ ಜನಮನ್ನಣೆ ಗಳಿಸಿದ್ದಾರೆ.
ಎರಡನೆಯದಾಗಿ ನವನೀತಾ ಗೌತಮ್. ಐಪಿಎಲ್ ಹಾಗೂ ಆರ್.ಸಿ.ಬಿ ಆಡುವಾಗ ಒಬ್ಬ ಮಹಿಳೆ ಆರ್.ಸಿ.ಬಿ ಜೆರ್ಸಿ ಹಾಕಿಕೊಂಡು, ಆಟಗಾರರಿಗೆ ಹುರಿದುಂಬಿಸುತ್ತಿರುವುದು ಕಾಣಬಹುದು. ಇವರೆ ನವನೀತಾ ಗೌತಮ್. ಆರ್.ಸಿ.ಬಿ ತಂಡದ ಫಿಸಿಯೊಥೆರಪಿಸ್ಟ್. ನವನೀತಾ ಗೌತಮ್ ಕೆನಡಾ ಮೂಲದವರು. ಆರ್.ಸಿ.ಬಿ ಡಗೌಟ್ ನಲ್ಲಿ ವಿರಾಟ್ ಕೊಹ್ಲಿಯ ವಿನ್ನಿಂಗ್ ಮೂಮೆಂಟ್ ಗೆ ಕುಣಿಯುತ್ತಿದ್ದರು. ಮಸಾಜ್ ಥೆರಪಿಸ್ಟ್ ಹೆಡ್ ಆಗಿ ಟೊರಾಂಟೋ ಟೀ ಟ್ವೆಂಟಿ ಪಂದ್ಯದಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಕ್ರಿಕೆಟ್ ಆಟದೊಂದಿಗೆ ಕಳೆಯುವುದು ಹೆಚ್ಚಾಗಿ ಐಪಿಎಲ್ ಪಂದ್ಯಗಳಲ್ಲಿ ಮಸಾಜ್ ಥೆರಪಿಸ್ಟ್ ಹೆಡ್ ಆಗಿ ಕೆಲಸ ಮಾಡುವುದು ನವನೀತಾರ ಕನಸು. ಈ ಕನಸನ್ನು ಈಡೇರಿಸಿಕೊಳ್ಳಲು 2017 ರಲ್ಲಿ ಭಾರತಕ್ಕೆ ಸ್ಥಳಾಂತರ ಆಗಿದ್ದಾರೆ. ಕ್ರಿಕೆಟ್ ಆಟಕ್ಕೆ ದೇಹದ ಫಿಟ್ ನೆಸ್ ತುಂಬಾ ಅಗತ್ಯ. ಮೊದಲ ಐಪಿಎಲ್ ತಂಡ ಮಹಿಳಾ ಸಹಾಯಕ ಸಿಬ್ಬಂದಿ ಹೊಂದಿದ ತಂಡ ಆರ್.ಸಿ.ಬಿ. ಇಷ್ಟು ವರ್ಷ ಆರ್.ಸಿ.ಬಿ ಎಷ್ಟು ಕಷ್ಟ ಪಟ್ಟು ಆಡಿದರೂ ಕಪ್ ಗೆಲ್ಲಲೂ ಸಾಧ್ಯವಾಗಿರಲಿಲ್ಲ. ಆರ್.ಸಿ.ಬಿ ಆಟಗಾರರ ಫಿಟ್ ನೆಸ್ ಸುಧಾರಿಸಲು ಅನುಸರಿಸಿದ ವಿಧಾನ ಇದು. ಆದರೆ ನವನೀತಾ ಬಂದಾಗಿನಿಂದ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ.
ಮೂರನೆಯದಾಗಿ ಜೊಪ್ರಾ ಆರ್ಚರ್ ಬಾರ್ಬಡಾಸ್ ನಲ್ಲಿ ಎಪ್ರಿಲ್ 1, 1995 ರಲ್ಲಿ ಹುಟ್ಟಿದರು. ತಾಯಿ ಜಿಯೊಲ್ಲೆ ವೇಥೆ, ತಂದೆ ಪ್ರಾಂಕ್ ಅರ್ಚರ್. ಇವರು ಇಂಗ್ಲೆಂಡ್ ನ ಕ್ರಿಕೆಟಿಗ. ಅಂಡರ್ 19 ವೆಸ್ಟಿಂಡಿಸ್ ಕ್ರಿಕೆಟ್ ನಲ್ಲಿ ಮೂರು ಬಾರಿ 2014 ರಲ್ಲಿ ಆಡಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ಬೊರ್ಡ್ ಏಳು ವರ್ಷಗಳ ಕಾಲ ವಾಸವಿರಬೇಕು ಎಂದು ಇದ್ದ ನಿಯಮಗಳನ್ನು ಮೂರು ವರ್ಷಗಳಿಗೆ ಇಳಿಸಿತು. ಹೀಗೆ ಜೊಪ್ರಾ ಅರ್ಚರ್ ಆಡಲು ಅರ್ಹತೆ ಪಡೆದರು. ಐರ್ಲೆಂಡ್ ವಿರುಧ್ಧ 2019 ರಲ್ಲಿ ಒಂದೆ ಡೆಬ್ಯೂ ಮಾಡುತ್ತಾರೆ. ಐದು ವಿಕೇಟ್ ಪಡೆದು ಹೈಲೇಟ್ ಆಗುತ್ತಾರೆ. 11 ಟೆಸ್ಟ್ ಆಟಗಳಲ್ಲಿ 38 ವಿಕೆಟ್, 17 ಒನ್ ಡೇ ಆಟಗಳಲ್ಲಿ 30 ವಿಕೆಟ್, 40 ಫಸ್ಟ್ ಕ್ಲಾಸ್ ಆಟಗಳಲ್ಲಿ 174 ವಿಕೆಟ್ ಪಡೆದಿದ್ದಾರೆ. ಇವರು ಒಂದು ರೀತಿಯ ಆಲ್ ರೌಂಡರ್ ಇದ್ದಂತೆ. 2018 ರಲ್ಲಿ ಇವರು ಪಾದಾರ್ಪಣೆ ಮಾಡುತ್ತಾರೆ.
ನಾಲ್ಕನೆಯದಾಗಿ ಕಿಯರನ್ ಪೊಲಾರ್ಡ್. ವೆಸ್ಟಿಂಡಿಸ್ ನ ಟಕಾರ್ಗಿಯಾದಲ್ಲಿ ಮೇ 12, 1987 ರಲ್ಲಿ ಜನಿಸುತ್ತಾರೆ. ಎರಡು ಜನ ಸಹೋದರಿಯರೊಂದಿಗೆ ಬೆಳೆಯುತ್ತಾರೆ. ಕಡು ಬಡತನದಲ್ಲಿ ತಾಯಿಯ ಆಸರೆಯಲ್ಲಿ ಬೆಳೆಯುತ್ತಾರೆ. ಅಂಡರ್ 19 ವೆಸ್ಟಿಂಡಿಸ್ ಕ್ರಿಕೆಟ್ ನಲ್ಲಿ 2005 ರ ನಂತರ ಪಾಕಿಸ್ತಾನದ ಟೂರ್ ಗೆ ಹೋಗುತ್ತಾರೆ. ಪಸ್ಟ್ ಡೆ ಯುತ್ ನಲ್ಲಿ ಐವತ್ಮೂರು ರನ್ ಪಡೆಯುತ್ತಾರೆ ಪೊಲಾರ್ಡ್ ಟಾಪ್ ಸ್ಕೊರರ್ ಆಗಿರುತ್ತಾರೆ. ಐಸಿಸಿ ವಿಶ್ವ ಕಪ್ ಟೀ ಟ್ವೆಂಟಿ 2007 ರಲ್ಲಿ ಆಯ್ಕೆಯಾಗುತ್ತಾರೆ. ಒಳ್ಳೆಯ ಪ್ರದರ್ಶನ ಇರದ ಕಾರಣ 2008 ರಲ್ಲಿ ಇವರನ್ನು ಕೈ ಬಿಡುತ್ತಾರೆ. ಹೀಗೆ ತುಂಬಾ ಏರಿಳಿತಗಳನ್ನು ಎದುರಿಸುತ್ತಾರೆ. ಮುಂಬಯಿ ಇಂಡಿಯನ್ಸ್ ಮೂಲಕ 2010 ರಲ್ಲಿ ಡೆಬ್ಯೂ ಮಾಡುವ ಇವರದು ಒಂದು ಇತಿಹಾಸವಾಗುತ್ತದೆ. 2013-2015-2017-2019 ರಲ್ಲಿ ಮುಂಬಯಿ ಇಂಡಿಯನ್ಸ್ ಐಪಿಎಲ್ ಗೆಲ್ಲಲು ಇವರ ಕೊಡುಗೆ ಅಪಾರ. ಐದನೆಯದಾಗಿ ಸ್ಮೃತಿ ಮಂದಾನ. ಮುಂಬಯಿ ನಲ್ಲಿ ಜುಲೈ 18, 1996 ರಲ್ಲಿ ಜನಿಸಿದರು. ಇವರು ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ. ಬೆಸ್ಟ್ ವುಮೆನ್ಸ್ ಇಂಟರ್ನ್ಯಾಷನಲ್ ಕ್ರಿಕೆಟರ್ ಎಂದು ಐಸಿಸಿ 2018 ರಲ್ಲಿ ಕರೆಯಿತು. ರೆಕೆಲ್ ಹೆಯಿ ಪ್ಲಿಂಡ್ ಅವಾರ್ಡ್ ಅನ್ನು ಬೆಸ್ಟ್ ಫಿಮೇಲ್ ಕ್ರಿಕೆಟರ್ ಆಫ್ ದಿ ಇಯರ್ ಎಂದು ಐಸಿಸಿ ಇಂದ ಪಡೆದಿದ್ದಾರೆ. ಒಂದೆ ಡೇ ಪ್ಲೇಯರ್ ಆಫ್ ದಿ ಇಯರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸ್ಮೃತಿ ಮಂದಾನ ಬ್ಯಾಟಿಂಗ್ ಎಡಭಾಗದಲ್ಲಿ ಮಾಡಿದರೆ ಬೌಲಿಂಗ್ ಬಲಭಾಗದಲ್ಲಿ ಮಾಡುತ್ತಾರೆ. ಅಣ್ಣನ ಆಟವನ್ನು ಕಂಡು ಕ್ರಿಕೆಟ್ ಆಟದಲ್ಲಿ ತೊಡಗಿಸಿಕೊಂಡರು. ಮಹಾರಾಷ್ಟ್ರ ಅಂಡರ್ 15 ಆಟದಲ್ಲಿ ತಮ್ಮ 9 ನೆ ವಯಸ್ಸಿನಲ್ಲಿ ಹಾಗೂ ಮಹಾರಾಷ್ಟ್ರ ಅಂಡರ್ 19 ಟೀಂ ಗೆ 11 ನೆ ವಯಸ್ಸಿನಲ್ಲಿ ಆಯ್ಕೆ ಆಗುತ್ತಾರೆ. ಸ್ಮೃತಿ ಮಂದಾನ ಅವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಗಿದೆ. ರಾಹುಲ್ ದ್ರಾವಿಡ್ ಅವರಿಂದ ಸ್ಪೇಷಲ್ ಬ್ಯಾಟ್ ಪಡೆದಿದ್ದಾರೆ. ಭಾರತಕ್ಕೆ ಒಂದೆ ಅಲ್ಲದೆ ವಿದೇಶಿ ಲೀಗ್ ಕೂಡ ಆಡುತ್ತಾರೆ ಸ್ಮೃತಿ. ವಿರಾಟ್ ಕೊಹ್ಲಿ ಹಾಗೂ ಸ್ಮೃತಿ ಮಂದಾನ ಅವರ ಜೆರ್ಸಿ ನಂಬರ್ ಎರಡು ಒಂದೆ ಅದು 18ನಂಬರ್.
ಇವು ಕೆಲವು ವ್ಯಕ್ತಿಗಳ ಕೂತುಹಲಕಾರಿ ವಿಷಯಗಳು. ಇನ್ನಷ್ಟು ಸಾಧನೆ ಮಾಡಿದ ಹಲವು ಸಾಧಕರು ಇದ್ದಾರೆ. ಮತ್ತಷ್ಟು ಸಾಧನೆ ಮಾಡುವಂತಹ ಛಲ ಹೊತ್ತ ಸಾಧಕರು ಮುಂದೆ ಬರುತ್ತಲೆ ಇದ್ದಾರೆ.