ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಉದ್ಯೋಗಕ್ಕಾಗಿ ಹುಡುಕಾಟವನ್ನು ನಡೆಸುತ್ತಿರುತ್ತಾರೆ ತಮಗೆ ಇಷ್ಟವಾದ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕೆ ಪ್ರತಿಯೊಬ್ಬರಿಗೂ ಆಸೆ ಇರುತ್ತದೆ. ಅದೇ ರೀತಿ ಭಾರತೀಯ ಸೇನೆಯಲ್ಲಿ ಕೆಲಸವನ್ನು ಮಾಡಬೇಕು ಎಂಬ ಆಸೆಯನ್ನು ಹೊಂದಿರುವವರಿಗೆ ಸಿಹಿ ಸುದ್ದಿ ಒಂದನ್ನು ತಿಳಿಸಿ ಕೊಡುತ್ತಿದ್ದೇವೆ ಅದೇನೆಂದರೆ ಬಹಳ ದಿನಗಳ ನಂತರ ಭಾರತೀಯ ಸೇನೆಯಲ್ಲಿ ನೇಮಕಾತಿ ನಡೆಯುತ್ತಿದ್ದು ಆ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು ಈ ಕುರಿತಾದ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.
ಭಾರತೀಯ ಸೇನೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದು. ಭಾರತೀಯ ಸೇನೆಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವಂತಹ ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿ ಪಾಸ್ ಆಗಿರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಭಾರತೀಯ ಸೇನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ತಮ್ಮ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಫೆಬ್ರುವರಿ ಹನ್ನೆರಡು ಎರಡು ಸಾವಿರದ ಇಪ್ಪತ್ತೆರಡರ ಒಳಗಾಗಿ ಆನ್ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬೇಕು.
ಇನ್ನು ಭಾರತೀಯ ಸೇನೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರವನ್ನು ನೋಡುವುದಾದರೆ ಅಡುಗೆಯವರು ಹನ್ನೊಂದು ಹುದ್ದೆಗಳು ವಾಷರ್ ಮ್ಯಾನ್ ಮೂರು ಹುದ್ದೆಗಳು ಸಫೈವಾಲ ಹದಿಮೂರು ಹುದ್ದೆಗಳು ಕ್ಷೌರಿಕ ಏಳು ಹುದ್ದೆಗಳು ಎಲ್ ಡಿ ಸಿ ಎಚ್ ಕ್ಯೂ ಏಳು ಹುದ್ದೆ ಎಲ್ ಡಿ ಸಿ ಎಂ ಐ ಆರ್ ನಾಲ್ಕು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಯಾವ ರೀತಿಯಾಗಿ ಇರುತ್ತದೆ ಎಂಬುದರ ಕುರಿತು ನೋಡುವುದಾದರೆ ಅಡುಗೆ ಮತ್ತು ಎಲ್ ಡಿ ಸಿ ಅವರಿಗೆ ಹತ್ತೊಂಬತ್ತು ಸಾವಿರದ ಒಂಬೈನೂರು ರೂಪಾಯಿಯಿಂದ ಅರವತ್ಮೂರ ಸಾವಿರದ ಎರಡು ನೂರು ರೂಪಾಯಿವರೆಗೆ ವೇತನ ಇರುತ್ತದೆ. ಇತರೆ ಉದ್ಯೋಗಗಳಿಗೆ ಹದಿನೆಂಟು ಸಾವಿರದಿಂದ ಐವತ್ತಾರು ಸಾವಿರದ ಒಂಬೈನೂರು ರೂಪಾಯಿಗಳವರೆಗೆ ವೇತನ ಇರುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವ ಅರ್ಹತೆ ಇರಬೇಕು ಎಂದರೆ ಕುಕ್ ಅಭ್ಯರ್ಥಿಗಳು ಭಾರತೀಯ ಅಡುಗೆಯ ಬಗ್ಗೆ ತಿಳಿದಿರಬೇಕು ಮತ್ತು ಹತ್ತನೇ ತರಗತಿ ಪಾಸಾಗಿರಬೇಕು. ವಾಷರ್ ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಕೂಡ ಹತ್ತನೇ ತರಗತಿ ಪಾಸಾಗಿರಬೇಕು. ಸಪಾಯಿವಾಲ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ ಹತ್ತನೇ ತರಗತಿ ಪಾಸಾಗಿರಬೇಕು.
ಕ್ಷೌರಿಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೂಡ ಹತ್ತನೇ ತರಗತಿ ಪಾಸಾಗಿರಬೇಕು. ಎಲ್ ಡಿ ಸಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ನಲ್ಲಿ ಒಂದು ನಿಮಿಷಕ್ಕೆ ಇಂಗ್ಲಿಷ್ನಲ್ಲಿ ಮೂವತ್ತೈದು ಪದಗಳು ಹಾಗೂ ಹಿಂದಿಯಲ್ಲಿ ಮೂವತ್ತು ಪದಗಳನ್ನು ಟೈಪ್ ಮಾಡುವ ವೇಗವನ್ನು ಹೊಂದಿರಬೇಕು ಜೊತೆಗೆ ಹನ್ನೆರಡನೇ ತರಗತಿ ಪಾಸಾಗಿರಬೇಕು.
ಅರ್ಜಿ ಸಲ್ಲಿಸುವುದಕ್ಕೆ ಅಭ್ಯರ್ಥಿಗಳು ಯಾವ ವಯೋಮಿತಿಯವರಾಗಿರಬೇಕು ಎಂಬುದನ್ನು ನೋಡುವುದಾದರೆ ಸಾಮಾನ್ಯ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ಹದಿನೆಂಟರಿಂದ ಇಪ್ಪತ್ತೈದು ವರ್ಷದವರಾಗಿರಬೇಕು ಒಬಿಸಿ ಅಭ್ಯರ್ಥಿಗಳು ಹದಿನೆಂಟರಿಂದ ಇಪ್ಪತ್ತೆಂಟು ವರ್ಷ ಒಳಗಿನವರಾಗಿರಬೇಕು ಮತ್ತು ಎಸ್ಸಿಎಸ್ಟಿ ಹದಿನೆಂಟರಿಂದ ಮುವತ್ತುವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಪ್ರಯೋಗಿಕ ಮತ್ತು ಕೌಶಲ್ಯ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ನೀವು ಕೂಡ ಭಾರತೀಯ ಸೇನೆಯಲ್ಲಿ ಉದ್ಯೋಗವನ್ನು ಮಾಡುವ ಆಸೆಯನ್ನು ಹೊಂದಿದ್ದರೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಸ್ನೇಹಿತರು ಹಾಗೂ ಪರಿಚಿತರಿಗೂ ತಿಳಿಸಿರಿ. official notification https://drive.google.com/file/d/1IH5h…