ನಟ ಹಾಗೂ ನಟಿ ಮದುವೆಯಾದರೆ ಅವರ ಸಾಂಸಾರಿಕ ಜೀವನದಲ್ಲಿ ಬಹಳ ಕಲಹಗಳು ಭಿನ್ನಾಭಿಪ್ರಾಯಗಳು ಬರುತ್ತದೆ ಎಂಬ ಮೂಢ ನಂಬಿಕೆ ಇದೆ. ಆ ಕಲಹಗಳು ಎಲ್ಲರ ಜೀವನದಲ್ಲೂ ಇರುವುದಿಲ್ಲ ಎನ್ನುವುದನ್ನು ಮರೆಯಬಾರದು. ಸಾಕಷ್ಟು ನಟ ಹಾಗೂ ನಟಿಯರು ಪ್ರೀತಿಸಿ ಮದುವೆಯಾಗಿ ಜೊತೆಯಾಗಿ ಬಾಳುತ್ತಿರುವವರನ್ನು ನಾವೆಲ್ಲರೂ ನೋಡಿದ್ದೇವೆ.ಹಾಗೆಯೇ ಭಿನ್ನಾಭಿಪ್ರಾಯದಿಂದ ವಿಚ್ಛೇದನ ವನ್ನು ಪಡೆದಿರುವುದನ್ನು ಕೂಡ ನೋಡಿದ್ದೇವೆ. ಹಾಗೆಯೇ ಇಲ್ಲಿ ಕೂಡ ಒಬ್ಬ ನಟ ಹಾಗೂ ನಟಿ ಪ್ರೀತಿಸಿ ತಾಯಿಯ ವಿರೋಧದ ನಡುವೆಯೂ ವಿವಾಹವಾದ ನಟಿಯ ಬದುಕು ಇಂದು ಬೀದಿಗೆ ಬಂದಿದೆ. ಗಂಡ ಮತ್ತು ಮಕ್ಕಳು ಟಾಪ್ ನಟರಾಗಿದ್ದರು ದುರಾದೃಷ್ಟರಾಗಿ ಬದುಕು ನಡೆಸುತ್ತಿದ್ದಾರೆ ಈ ನಟಿ.

ನಟಿ ಸಾರಿಕಾ ಒಂದು ಕಾಲದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿ ಟಾಪ್ ನಟಿಯಾಗಿ ಮೆರೆದಿದ್ದರು.ಭಾರಿ ಬೇಡಿಕೆ ಇರುವಾಗಲೇ ತನ್ನ ತಾಯಿಯ ಮಾತಿನ ವಿರುದ್ಧವಾಗಿ ಕಮಲ್ ಹಾಸನ್ ರನ್ನು ಪ್ರೀತಿಸಿ ಮದುವೆಯಾದ ಸಾರಿಕಾ ನಂತರದ ದಿನಗಳಲ್ಲಿ ಚಿತ್ರರಂಗದಿಂದ ದೂರಾಗಿ ಸಂಸಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಕಮಲ್ ಮತ್ತು ಸಾರಿಕಾ ಪ್ರೀತಿಯ ಕುರುಹುವಾಗಿ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು ಅವರೇ ಶ್ರುತಿ ಹಾಸನ್ ಮತ್ತು ಅಕ್ಷರ ಹಾಸನ್. ಪೋಷಕರ ಮಾತಿಗೆ ಬೆಲೆ ಕೊಡದೆ ಅವರನ್ನು ಎದುರು ಹಾಕಿಕೊಂಡು ಕಮಲ್ ಹಾಸನ್ ರನ್ನು ಮದುವೆಯಾಗಿದ್ದ ಸಾರಿಕ ಜೀವನದಲ್ಲಿ ಮಕ್ಕಳು ಹುಟ್ಟಿದ ಮೇಲೆ ಅದೇನಾಯಿತೋ ಏನೋ ಯಥಾಪ್ರಕಾರ ಕಮಲ್ ಮತ್ತು ಸಾರಿಕಾ ತನ್ನ ಪ್ರೀತಿಗೆ ವಿದಾಯ ಹೇಳಿ ಬ್ರೇಕಪ್ ಮಾಡಿಕೊಂಡು ವಿಚ್ಛೇದನ ಪಡೆದುಕೊಂಡರು. ತನ್ನ ಮುದ್ದಾದ ಇಬ್ಬರು ಮಕ್ಕಳೊಂದಿಗೆ ಮುಂಬೈಗೆ ಉದ್ಯೋಗ ಅರಸಿ ಹೋದ ಸಾರಿಕಾ ಅಲ್ಲಿ ತಮಗೆ ಸಿಕ್ಕ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿ ಮಕ್ಕಳನ್ನು ದೊಡ್ಡವರನ್ನಾಗಿ ಮಾಡಿದರು.

ದೊಡ್ಡವರಾದ ಆ ಇಬ್ಬರು ಹೆಣ್ಣುಮಕ್ಕಳು ತಮ್ಮ ತಮ್ಮ ಬದುಕನ್ನು ತಾವೇ ಕಟ್ಟಿಕೊಂಡಿದ್ದಾರೆ. ಆದ್ರೆ ನಟಿ ಸಾರಿಕಾ ಮಾತ್ರ ಒಂದು ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಬಾಡಿಗೆ ಮನೆಯಲ್ಲಿರುವ ಸಾರಿಕಾಗೆ ಒಂದು ಭರವಸೆ ಇತ್ತು ಅದೇನೆಂದರೆ ತನ್ನ ತಾಯಿಗಿರುವ ನೂರಾರು ಕೋಟಿ ಆಸ್ತಿ, ಐಷಾರಾಮಿ ಬಂಗಲೆ ಹಾಗೂ ಮುನ್ನೂರು ಎಕರೆ ಜಮೀನು ತನಗೆ ಸಿಗುತ್ತದೆಯೆಂದು.ಆದರೆ ಅವರ ಯೋಚನೆಗಳು ತಲೆಕೆಳಗಾಗುವಂತೆ ಮಾಡಿ ಬಿಟ್ಟರು ಅವರ ತಾಯಿ. ಇತ್ತೀಚೆಗೆ ನಟಿ ಸಾರಿಕಾ ಅವರ ತಾಯಿ ತೀರಿಕೊಂಡರು. ಆಗಲೇ ತಿಳಿದದ್ದು ತನ್ನನ್ನು ನೋಡಿಕೊಳ್ಳುತ್ತಿದ್ದ ಡಾಕ್ಟರ್ ಹೆಸರಿಗೆ ತಮ್ಮ ಎಲ್ಲಾ ಆಸ್ತಿಯನ್ನು ಸಾರಿಕಾ ಅವರ ತಾಯಿ ಬರೆದಿದ್ದಾರೆ ಎಂದು. ತಾಯಿಯ ಆಸ್ತಿಯ ಭರವಸೆಯನ್ನು ಕಳೆದುಕೊಂಡಿರುವ ಸಾರಿಕಾ ಅವರು ತಾಯಿ ಆಸ್ತಿ ತನಗೆ ಬರಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ.

ಇಷ್ಟೆಲ್ಲಾ ಆದರು ತಮ್ಮ ಸ್ವಾಭಿಮಾನವನ್ನು ಬಿಡದೆ ಸಾರಿಕಾ ಅವರು ಬಾಡಿಗೆ ಮನೆಯಲ್ಲಿ ಸಾಮಾನ್ಯ ಮಹಿಳೆಯಂತೆ ವಾಸವಿದ್ದಾರೆ. ನಟಿ ಸಾರಿಕಾ ಸ್ಥಿತಿಯನ್ನು ನೋಡಿದ ಅಮೀರ್ ಖಾನ್ ಮುಂದೆ ಬಂದು ಸಾರಿಕಾ ಅವರ ಕೋರ್ಟ್ ಖರ್ಚು ಭರಿಸುವದಾಗಿ ಹೇಳಿದರು. ಅದರ ಜೊತೆಗೆ ಸಂಧಾನದ ಮೂಲಕ ಕೋರ್ಟ್ ನಲ್ಲಿರುವ ವ್ಯಾಜ್ಯವನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಅವರ ತಾಯಿಯ ಆಸ್ತಿಯಲ್ಲಿ ಸ್ವಲ್ಪ ಭಾಗ ನಟಿ ಸಾರಿಕಾ ಅವ್ರಿಗೆ ಸಿಕ್ಕಿ ಸಂತೋಷದ ಜೀವನ ನಡೆಸಲಿ ಎಂದು ಆಶಿಸೋಣ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!