income certificate renewal: ಇತ್ತೀಚಿನ ದಿನಗಳಲ್ಲಿ ಆದಾಯ ಪ್ರಮಾಣ ಪತ್ರ ಪ್ರತಿಯೊಂದು ಅರ್ಜಿ ಸಲ್ಲಿಸಲು, ವಿದ್ಯಾರ್ಥಿ ವೇತನ ಹಾಗೂ ಇತರ ಸರ್ಕಾರದ ಸೌಲಭ್ಯ ಪಡೆಯಲು ಆದಾಯ ಪ್ರಮಾಣದ ಪತ್ರ ಕೇಳುತ್ತಾರೆ. ಆದಾಯ ಪ್ರಮಾಣ ಪತ್ರದಲ್ಲಿ ನಿಮ್ಮ ವಾರ್ಷಿಕ ಆದಾಯ ಎಷ್ಟು? ಎನ್ನುವುದರ ಮಾಹಿತಿಯನ್ನು ನೋಡಬಹುದು. ಸರ್ಕಾರದ ಹುದ್ದೆಗಳಿಗೆ ಮೀಸಲಾತಿ ಪಡೆಯಲು ಕೆಲವು ದಾಖಲೆಗಳು ಕಡ್ಡಾಯವಾಗಿರುತ್ತದೆ ಅದರಲ್ಲಿ ಆದಾಯ ಪ್ರಮಾಣ ಪತ್ರವೂ ಒಂದು.
ನಿಮ್ಮ ಬಳಿ ಆದಾಯ ಪ್ರಮಾಣ ಪತ್ರವಿಲ್ಲದಿದ್ದರೆ ನೀವು ಈ ಕೂಡಲೇ ನಿಮ್ಮ ಮೊಬೈಲ್ ಮೂಲಕ ನೀವು ಮಾಡಿಕೊಳ್ಳಬಹುದು. ಯಾವ ರೀತಿಯಾಗಿ ಮಾಡಬಹುದು ಎಂದು ನಾವು ಇಲ್ಲಿ ತಿಳಿಸಿ ಕೊಡುತ್ತೇವೆ. ಪ್ರತಿ ಐದು ವರ್ಷಕ್ಕೊಮ್ಮೆ ಈ ಆದಾಯ ಪ್ರಮಾಣ ಪತ್ರವನ್ನು ರಿನಿವಲ್ ಮಾಡಬೇಕಾಗುತ್ತದೆ ಏಕೆಂದರೆ ಐದು ವರ್ಷಗಳ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗಿರಬಹುದು ಅಥವಾ ಕಡಿಮೆಯಾಗಿರಬಹುದು ಅದನ್ನು ಸರಿಪಡಿಸಲು ಸರ್ಕಾರ ಈ ಐದು ವರ್ಷಕ್ಕೊಮ್ಮೆ ರಿನಿವಲ್ ಮಾಡಲು ಹೇಳುತ್ತದೆ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು ತಹಶೀಲ್ದಾರ್ ಕಚೇರಿಗೆ ಅಲೆಯಬೇಕಾಗಿತ್ತು ಆದರೆ ಈಗ ನೀವು ಸಾರ್ವಜನಿಕ ಸೇವಾ ಸಿಂಧು ಪೋರ್ಟಲ್ ಮೂಲಕ ನಾವು ಆನ್ಲೈನ್ ಮೂಲಕ ರಿನಿವಲ್ ಮಾಡಿಕೊಳ್ಳಬಹುದು.
income certificate renewal
ರಿನಿವಲ್ ಮಾಡುವ ವಿಧಾನ :ನಿಮ್ಮ ಮೊಬೈಲ್ ನಲ್ಲಿ ನಾಡಕಚೇರಿ ಎಂದು ಸರ್ಚ್ ಮಾಡಿ. ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ AJKJ ಹೋಂ ಪೇಜ್ ಎಂದು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಆನ್ಲೈವ್ ಅರ್ಜಿ ಸ್ವೀಕೃತಿ ಎಂದು ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ. ನಂತರ ಫೋನ್ ನಂಬರ್ ಕೇಳುತ್ತದೆ ಅದನ್ನು ಹಾಕಿದ ನಂತರ ಪ್ರೋಸಿಡ್ ಕೊಟ್ಟರೆ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನ್ಯೂ ರಿಕ್ವೆಸ್ಟ್ ಎಂದು ಇರುವಲ್ಲಿ ಓಕೆ ಕೊಡಿ.
ನಂತರ ನಿಮಗೆ ಯಾವ ಸರ್ಟಿಫಿಕೇಟ್ ಗೆ ಅರ್ಜಿ ಸಲ್ಲಿಸುತ್ತಿರಿ ಎಂದು ಕೇಳುತ್ತದೆ ಅಲ್ಲೇ ನೀವು ಕಾಸ್ಟ್ ಸರ್ಟಿಫಿಕೇಟ್ ಸೆಲೆಕ್ಟ್ ಮಾಡಿ. ಅಲ್ಲಿ ಕೇಳಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಅದೇ ರೀತಿಯಾಗಿ ನೀವು ಇನ್ಕಮ್ ಸರ್ಟಿಫಿಕೇಟ್ ಕೂಡ ಅರ್ಜಿ ಸಲ್ಲಿಸಿ. ಹೊಸ ಪೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡ್ ಮೂಲಕ ನಿಮ್ಮ ಜಾತಿ ಪ್ರಮಾಣ ಪತ್ರವನ್ನು ಜನರೇಟ್ ಮಾಡಬೇಕಾಗುತ್ತದೆ ಅದಕ್ಕೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ.ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಎಲ್ಲವನ್ನು ಸೆಲೆಕ್ಟ್ ಮಾಡಿ.
ನಂತರ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಹೆಸರು ಕಾಣಿಸುತ್ತದೆ ಅಲ್ಲಿ ನೀವು ಯಾರ ಜಾತಿ ಪ್ರಮಾಣ ಪತ್ರ ಬೇಕು ಅವರ ಹೆಸರನ್ನು ಸೆಲೆಕ್ಟ್ ಮಾಡಿ. ನಂತರ ಅಲ್ಲಿ ಕೇಳುವಂತಹ ಮಾಹಿತಿಯನ್ನು ಭರ್ತಿ ಮಾಡಿ 25ರೂ ಶುಲ್ಕವನ್ನು ಪಾವತಿಸಿದರೆ ನಿಮ್ಮ ರಿನಿವಲ್ ಪ್ರೊಸೆಸ್ ಸಂಪೂರ್ಣವಾಗುತ್ತೆದೆ. ಇದೇ ಕ್ರಮವನ್ನು ಪಾಲಿಸಿ ಆದಾಯ ಪ್ರಮಾಣ ಪತ್ರ ರಿನೀವಲ್ ಮಾಡಿಕೊಳ್ಳಿ.