IAS Srinath SuccessIAS Srinath Success

ಎಲ್ಲ ಸೌಕರ್ಯ ಇದ್ದು ಸರಿಯಾಗಿ ಓದದೇ ಇರುವವರ ಮಧ್ಯೆ ಏನು ಇಲ್ಲದೆ ಬಡತನದಲ್ಲಿ ಬೆಳೆದು ಸಿಕ್ಕಂತ ಚಿಕ್ಕ ಪುಟ್ಟ ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಿದ ಈ ಮಹಾನ್ ವ್ಯಕ್ತಿಯ ಬಗ್ಗೆ ನಿಜಕ್ಕೂ ಹೇಳಲೇ ಬೇಕು. ರೈಲ್ವೆಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ರೈಲ್ವೆಯ ಉಚಿತ ವೈಫೈ ಬಳಸಿ ಕಷ್ಟ ಪಟ್ಟು ಓದಿ, ಕಠಿಣ ಶ್ರಮವಹಿಸಿ ಸಾಧನೆಯನ್ನು ಬೆನ್ನಟ್ಟಿ ಇಂದು IAS ಅಧಿಕಾರಿಯಾಗಿದ್ದಾರೆ. ಅಷ್ಟಕ್ಕೂ ಇವರು ಯಾರು ಇವರ ಸಾಧನೆ ಹಾದಿ ಹೇಗಿತ್ತು ಅನ್ನೋದನ್ನ ಮುಂದೆ ನೋಡೋಣ ಬನ್ನಿ

ಇವರ ಹೆಸರು ಶ್ರೀನಾಥ್ ಎಂಬುದಾಗಿ ಕೇರಳ ಮೂಲದವರು UPSC ಪರೀಕ್ಷೆಯಲ್ಲಿ ಸಾಧನೆ ಮಾಡಿದ ವ್ಯಕ್ತಿ, ಕೆಲವು ವರ್ಷಗಳ ಹಿಂದೆ ಪೋರ್ಟರ್ ಆಗಿ ಕೆಲಸ ಮಾಡಿದ ವ್ಯಕ್ತಿ IAS ಅಧಿಕಾರಿಯಾಗುವ ಮೂಲಕ ವಿಶ್ವದಲ್ಲೇ ಹೊಸ ಮಾದರಿಯನ್ನು ಸ್ಥಾಪಿಸಿದ್ದಾರೆ. ಯಾವುದೇ ಸರಿಯಾದ ಸೌಕರ್ಯ ಇಲ್ಲದಿದ್ದರೂ, ಎಲ್ಲವನ್ನು ಎದುರಿಸಿ ಬಡತನದಿಂದ ಹೊರಬಂದು ತನ್ನ ಸಾಧನೆಯಲ್ಲಿ ಯಶಸ್ಸು ಗಳಿಸಿದ್ದಾರೆ.

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ನ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪ್ರತಿ ವರ್ಷ ಲಕ್ಷಾಂತರ ಜನರು ಒಂದು ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಸಹಾಯವನ್ನು ತೆಗೆದುಕೊಳ್ಳುತ್ತಾರೆ ಮತ್ತು ಲಕ್ಷಾಂತರ ರೂಪಾಯಿಗಳನ್ನು ನೀರಿನಂತೆ ಖರ್ಚು ಮಾಡುತ್ತಾರೆ ಆದ್ರೆ ಯಶಸ್ಸು ಸಿಕ್ಕಿರಲ್ಲ, ಆದ್ರೆ ಶ್ರೀನಾಥ್ ಅವರು ರೈಲ್ವೆ ಇಲಾಖೆಯ ಉಚಿತ ವೈಫೈ ಬಳಸಿ UPSC ಯಲ್ಲಿ ಕೆಲವು ವರ್ಷಗಳ ಹಿಂದೆ ಪಾಸ್ ಆಗಿದ್ದಾರೆ

ಶ್ರೀನಾಥ್, 2018ರಲ್ಲಿ ತಾನು ಕಷ್ಟಪಟ್ಟು ದುಡಿದು ದೊಡ್ಡ ಸ್ಥಾನಮಾನ ಗಳಿಸಿ, ಆದಾಯ ಹೆಚ್ಚಿಸಿ, ಮಗಳ ಭವಿಷ್ಯ ಉಜ್ವಲವಾಗಲಿ ಎಂದು ನಿರ್ಧರಿಸಿದ್ದರು. ಇದರ ನಂತರ, ಅವರು ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು ಆದರೆ ಅವರ ಆರ್ಥಿಕ ದೌರ್ಬಲ್ಯವು ಅವರ ಹಾದಿಯಲ್ಲಿ ದೊಡ್ಡ ಅಡಚಣೆಯಾಗಿತ್ತು ಬಡತನ ಅಡ್ಡಿಯಾಗಿತ್ತು.

ಇವರ ಸಾಧನೆಯನ್ನು ಆಗಿನ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೊಗಳಿದ್ದರು
ಹೌದು ಐಎಎಸ್ ಪಾಸ್ ಮಾಡುವುದು ಅಷ್ಟೊಂದು ಸುಲಭವಿಲ್ಲ ಆದ್ರೆ ಯಾವುದೇ ಸರಿಯಾದ ಸೌಲಭ್ಯವಿಲ್ಲದೆ ಸಿಗುವ ಚಿಕ್ಕ ಸಮಯದಲ್ಲಿ ಅಷ್ಟೊಂದು ಶ್ರಮ ಹಾಕಿ ಸಾಧನೆಯನ್ನು ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ. ಇದೇನೇ ಇರಲಿ ಇವರ ಈ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಅಂದ್ರೆ ನಿಜಕ್ಕೂ ತಪ್ಪಾಗಲಾರದು. ಬಡತನದಿಂದ ಬೆಳೆದು ಬಂದ ಇವರು ಬಡವರಿಗಾಗಿ ಒಳ್ಳೆಯ ಕೆಲಸ ಮಾಡಲಿ ಅನ್ನೋದೇ ನಮ್ಮ ಆಶಯ

By

Leave a Reply

Your email address will not be published. Required fields are marked *