ಸಾಧಿಸುವವನಿಗೆ ಬಡತನ ಅಡ್ಡಿಯಲ್ಲ, ಶ್ರಮ ಆಸಕ್ತಿ ಶ್ರದ್ದೆ ಇದ್ರೆ ಖಂಡಿತ ಯಶಸ್ಸಿನ ದಾರಿ ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ವ್ಯಕ್ತಿಯೇ ಸೂಕ್ತ ಉದಾಹರಣೆಯಾಗಿದ್ದಾರೆ, ಹೌದು ಮನೆಯ ಜವಾಬ್ದಾರಿ ಹೊತ್ತ ತಂದೆ ಅನಾರೋಗ್ಯ ಸಮಸ್ಯೆಯಿಂದ ಸಾವನ್ನಪ್ಪುತ್ತಾರೆ, ಮನೆಯನ್ನು ಸಾಗಿಸುತ್ತಿದ್ದ ಜವಾಬ್ದಾರಿ ತಾಯಿಯ ಹೆಗಲಿಗೆ ಬೀಳುತ್ತದೆ. ಕಷ್ಟದಲ್ಲೂ ಎದೆಗುಂದದೆ ತಾಯಿ ಮಕ್ಕಳನ್ನು ಓದಿಸಿ ಒಳ್ಳೆಯ ವ್ಯಕ್ತಿಗಳನ್ನಾಗಿ ಮಾಡಬೇಕು ಎನ್ನುವ ಛಲದಿಂದ ತನ್ನ ಎಲ್ಲ ಕಷ್ಟಗಳನ್ನು ಯಾರಮುಂದೆ ಹೇಳದೆ ದುಡಿಯುತ್ತಾಳೆ.
ತಂದೆ ಇಲ್ಲ ತಾಯಿಯ ಕಷ್ಟ ನೋಡಲಾರದೆ, ತಾಯಿಯ ಆಸೆಯಂತೆ ಉನ್ನತ ಅಧಿಕಾರಿಯಾಗಬೇಕೆಂಬ ಛಲದಿಂದ IAS ಅಧಿಕಾರಿಯಾದ ಈ ವ್ಯಕ್ತಿ ಯಾರು ಇವರ ಬೆಳವಣಿಗೆ ಹಾದಿ ಹೇಗಿತ್ತು? ಅನ್ನೋದನ್ನ ಮುಂದೆ ನೋಡಿ, ಇವರ ಹೆಸರು ಸಾಯಿ ಕಿರಣ್ ಎಂಬುದಾಗಿ ತೆಲಂಗಾಣದ ವಲಿಚಾರ ಗ್ರಾಮವು ಕರೀಂನಗರದಿಂದ 12 ಕಿಮೀ ದೂರದಲ್ಲಿದೆ. ನಂದಲ ಸಾಯಿಕಿರಣ್ ಹುಟ್ಟಿದ್ದು ಕನಿಷ್ಠ ಸೌಲಭ್ಯಗಳಿರುವ ಹಳ್ಳಿಯಲ್ಲಿ. ಬಡತನದ ನಡುವೆಯೂ ಲಕ್ಷಾಂತರ ಜನರ ಕನಸಾದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಪಡೆಯಲು ಅಕ್ಷರವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡರು. ನಮ್ಮ ಗುರಿಗಳನ್ನು ಸಾಧಿಸುವ ಛಲವಿದ್ದರೆ ಅದನ್ನು ಸಾಧಿಸುವುದನ್ನು ಯಾವುದೂ ತಡೆಯುವುದಿಲ್ಲ ಎಂದು ಈ ವ್ಯಕ್ತಿ ಹೇಳುತ್ತಾರೆ
ತಂದೆಯೇ ಇವರಿಗೆ ಪ್ರೇರಣೆ: ಹೌದು ಅಪ್ಪನ ಅಸೆ ಕೂಡ ಇದೆ ಆಗಿತ್ತು ನನ್ನ ಮಗ ಉನ್ನತ ಅಧಿಕಾರಿಯಾಗಿ ನಮ್ಮವರಂತೆ ಇರುವ ಬಡವರಿಗೆ ಒಳ್ಳೆಯ ಅಧಿಕಾರಿಯಾಗಿ ಕೆಲಸ ಮಾಡಲಿ ಅನ್ನೋದು ತಂದೆಯ ಅಸೆ ಆಗಿತ್ತು, ಇನ್ನೂ ಸಾಯಿ ಕಿರಣ್ BE ಪಾಸ್ ಆಗಿ ಕೆಲಸಕ್ಕೆ ಕೂಡ ಸೇರಿದ್ದರು ಆದ್ರೆ, ಈ ಕೆಲಸ ಅವರಿಗೆ ಅಷ್ಟೊಂದು ತೃಪ್ತಿ ನೀಡುವುದಿಲ್ಲ, ಯಾಕೆಂದರೆ ಸಾಮಾಜಿಕ ಸೇವೆ ಮಾಡುವ ಕನಸು ಇವರದ್ದು ಹಾಗಾಗಿ ಈ ಕೆಲಸದಿಂದ ಜನರ ಸೇವೆ ಮಾಡಲು ಆಗೋದಿಲ್ಲ ಎಂದು ತಿಳಿದು ಕೆಲಸ ಬಿಟ್ಟು IAS ತಯಾರಿ ನಡೆಸುತ್ತಾರೆ.
ಮೊದಲ ಪ್ರಯತ್ನದಲ್ಲಿ ಫೇಲ್ ಆಗುತ್ತಾರೆ, ಆದರೆ ದ್ವಿತೀಯ ಪ್ರಯತ್ನದಲ್ಲಿ IAS ಪಾಸ್ ಆಗಿ ತಂದೆ ತಾಯಿಯ ಕನಸು ನನಸು ಮಾಡುತ್ತಾರೆ ಸಾಯಿ ಕಿರಣ್. ನಾನು ಸಿವಿಲ್ಸ್ಗಾಗಿ ಯಾರ ಬಳಿಯೂ ತರಬೇತಿ ಪಡೆದುಕೊಂಡಿಲ್ಲ, ನನ್ನಷ್ಟಕ್ಕೆ ನಾನೇ ತಯಾರಿ ನಡೆಸಿದೆ. ಇನ್ನು ನನ್ನ ಪ್ರಕಾರ ನೂರರಿಂದ ಇನ್ನೂರರ ಒಳಗೆ ರ್‍ಯಾಂಕ್ ಬರುತ್ತೆ ಎಂದು ತಿಳಿದುಕೊಂಡಿದ್ದೆ. ಆದ್ರೆ 27ನೇ ಸ್ಥಾನ ಬರುತ್ತೆ ಎಂದು ನಿರೀಕ್ಷಿಸಿರಲಿಲ್ಲ ಎಂಬುದಾಗಿ ಹೇಳುತ್ತಾರೆ ಅಷ್ಟೇ ಅಲ್ಲದೆ ಏಕಾಗ್ರತೆ, ಛಲ ಮತ್ತು ಆತ್ಮ ವಿಶ್ವಾಸವು ಯಾವುದೇ ಪ್ರಯತ್ನದಲ್ಲಿ ಯಶಸ್ಸಿನ ಮೂರು ಮಾರ್ಗಗಳಾಗಿವೆ. ನನ್ನ ಅಕ್ಕ ಮತ್ತು ನಾನು ನಮ್ಮ ಕುಟುಂಬದಲ್ಲಿ ಮೊದಲ ತಲೆಮಾರಿನ ಪದವೀಧರರು.ಆಲೋಚನೆ ಎಷ್ಟೇ ಒಳ್ಳೆದಾಗಿದ್ರೂ ಶ್ರಮ ಪಡದಿದ್ರೆ ಫಲ ಸಿಗುವುದಿಲ್ಲ. ಒಳ್ಳೆಯ ಆಲೋಚನೆಗಳನ್ನು ಸಣ್ಣ ಸಣ್ಣ ಗುರಿಗಳಾಗಿ ಬೇರ್ಪಡಿಸಿ ಮುಂದಕ್ಕೆ ಸಾಗಬೇಕು ಎನ್ನುತ್ತಾರೆ ಸಾಯಿಕಿರಣ್.