ಅನೇಕ ಮಹಿಳೆಯರು ಡಿ.ಸಿ.ಯಾಗಿ ಹೊರ ಹೊಮ್ಮಿದ್ದಾರೆ. ತಮ್ಮ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.ಹಾಗೆಯೇ ನಿರ್ವಹಿಸುತ್ತಿದ್ದಾರೆ ಕೂಡ. ಕರ್ನಾಟಕದಲ್ಲಿ ಮನೆಮಾತಾಗಿರುವ ಡಿ.ಸಿ.ಯಲ್ಲಿ ರೋಹಿಣಿ ಸಿಂಧೂರಿ ಅವರು ಕೂಡ ಒಬ್ಬರು. ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ.
ರೋಹಿಣಿ ಸಿಂಧೂರಿ ಅವರು ಮೂಲತಃ ಆಂಧ್ರದವರು.ಇವರಿಗೆ ಈಗ 35 ವರ್ಷಗಳು ಮಾತ್ರ. ಕರ್ನಾಟಕಕ್ಕೆ ಬಂದ ನಂತರ ಕನ್ನಡ ಕಲಿತಿದ್ದಾರೆ.ಇವರ ಪತಿಯ ಹೆಸರು ಸುಧೀರ್. ಇವರು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಇವರಿಗೆ ಒಂದು ಗಂಡುಮಗು ಮತ್ತು ಒಂದು ಹೆಣ್ಣು ಮಗು ಇದೆ. ಇವರಿಗೆ ಒಬ್ಬ ತಂಗಿ ಇದ್ದಾರೆ. ಅವರ ಹೆಸರು ಪ್ರಿಯಾಂಕಾ ರೆಡ್ಡಿ. ಬೆಂಗಳೂರಿನಲ್ಲಿ ಡಾಕ್ಟರ್ ಆಗಿದ್ದಾರೆ.
ರೋಹಿಣಿ ಸಿಂಧೂರಿ ಅವರು ಮೂಲತಃ ಸಿವಿಲ್ ಇಂಜಿನಿಯರ್. ಇವರಿಗೆ IAS ಮಾಡುವ ಆಸೆ.ಆದ್ದರಿಂದ ತಮ್ಮ ಮದುವೆಯನ್ನು ಮುಂದೂಡಿದರು. ಇವರು ಬಹಳ ಕಷ್ಟಪಟ್ಟು ಓದಿ 2019 ರ IAS ಬ್ಯಾಚ್ ಗೆ ಆಯ್ಕೆಯಾದರು. ಇವರ UPSC ಎಕ್ಸಾಮಿನ ರಾಂಕ್ 43. ಇವರು ಹಲವಾರು ಯೋಜನೆಗಳನ್ನು ಮಂಡ್ಯ ಮತ್ತು ಹಾಸನ ಜಿಲ್ಲೆಗೆ ತೆಗೆದುಕೊಂಡು ಬಂದರು. ಅದರಲ್ಲಿ ಪ್ರಸಿದ್ಧವಾಗಿದ್ದು ಪ್ರತಿ ಮನೆಗೊಂದು ಶೌಚಾಲಯ ಆಗಬೇಕು ಎಂದು. ಇದನ್ನು ನೋಡಿದ ಕೇಂದ್ರ ಸರ್ಕಾರ ಇವರನ್ನು ಸನ್ಮಾನ ಮಾಡಿತು. ಆದ್ದರಿಂದ ಈ ಎರಡೂ ಜಿಲ್ಲೆಗಳಲ್ಲಿ ಡಿ.ಸಿ. ಎಂದರೆ ರೋಹಿಣಿ ಸಿಂಧೂರಿ ತರ ಇರಬೇಕು ಎಂದು ಹೇಳುತ್ತಾರೆ.
ಮತ್ತೆ ಇವರು ಯಾವುದೇ ಮಂತ್ರಿಗೆ ಹೆದರುವುದಿಲ್ಲ. ಹಲವಾರು ರೀತಿಯ ಯೋಜನೆಗಳನ್ನು ತರುತ್ತಾರೆ. ಯಾರಿಗಾದರೂ ಕಷ್ಟ ಬಂದಾಗ ಹಿಂಜರಿಕೆ ಇಲ್ಲದೆ ಸಹಾಯ ಮಾಡುತ್ತಾರೆ. ಆದ್ದರಿಂದ ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ.