ಈ ಒಂದು ಪುಣ್ಯ ಕ್ಷೇತ್ರ ತುಂಗಭದ್ರಾ ನದಿಯ ದಂಡೆಯ ಮೇಲೆ ಇದೆ. ಈ ಕ್ಷೇತ್ರವನ್ನು ಹಿಂದೆ ವ್ಯಾಘ್ರ ಪುರಿ ಎಂದೇ ಕರೆಯಲಾಗುತ್ತಿತ್ತು. ಪ್ರತೀ ವರ್ಷ ಭರತ ಹುಣ್ಣಿಮೆಯಂದು ೯ ದಿನಗಳ ಕಾಲ ಅತೀ ದೊಡ್ಡ ಜಾತ್ರೆಯೇ ನಡೆಯುತ್ತದೆ. ಈ ಕ್ಷೇತ್ರದಲ್ಲಿ ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ದೇವಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಅದೇ ಕರ್ನಾಟಕದ ಆಕರ್ಷಕ ಹಾಗೂ ಶಕ್ತಿ ಕೇಂದ್ರ ಹುಲಗಿ. ಹುಲಗಿ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿದೆ. ಉತ್ತರ ಕರ್ನಾಟಕದ ಜನರಿಗೆ ಈ ದೇವಿಯ ಶಕ್ತಿಯ ಬಗ್ಗೆ ಅಪಾರವಾದ ಭಕ್ತಿ ಹಾಗೂ ನಂಬಿಕೆ ಇದೆ. ಯಾರಿಗೆ ಈ ದೇವಿಯ ಶಕ್ತಿಯ ಬಗ್ಗೆ ತಿಳಿದಿಲ್ಲವೋ ಅವರಿಗೆ ಈ ಲೇಖನದ ಮೂಲಕ ತಿಳಿಸಿಕೊಡುತ್ತಿದ್ದೇವೆ.
ಹುಲಗಿ ಕ್ಷೇತ್ರವನ್ನು ಹಿಂದೆ ವ್ಯಾಘ್ರ ಪುರಿ ಎಂದೇ ಕರೆಯಲಾಗುತ್ತಿತ್ತು ಹಾಗಾಗಿ ಹುಲಿಗೆಮ್ಮ ದೇವಿಯನ್ನು ವ್ಯಾಘ್ರೇಶ್ವರಿ ಎಂದು ಕೂಡ ಕರೆಯಲಾಗುತ್ತದೆ. ಸುಮಾರು ೮೦೦ ವರ್ಷಗಳಿಂದಲೂ ಇಲ್ಲಿ ಈ ದೇವಿಗೆ ಪೂಜೆಗಳು ನಡೆಯುತ್ತಲೆ ಇದೆ. ಈ ಅದ್ಭುತವಾದ ದೇವಸ್ಥಾನ ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಹುಲಗಿ ಕೊಪ್ಪಳದಿಂದ ಸುಮಾರು ೨೨km ದೂರದಲ್ಲಿ ಇದ್ದರೆ, ಹೊಸಪೇಟೆಯಿಂದ ಕೇವಲ ೧೫km ದೂರದಲ್ಲಿದೆ. ಹಾಗೆ ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಿಂದ ೩೩೭ km ದೂರದಲ್ಲಿ ಇದ್ದರೆ, ಹುಬ್ಬಳ್ಳಿ ಧಾರವಾಡದಿಂದ ೧೬೭km ದೂರದಲ್ಲಿದೆ ಹಾಗೆ ಕಲ್ಬುರ್ಗಿ ಇಂದ ೨೮೭ km ದೂರದಲ್ಲಿದೆ. ಹುಲಿಗೆಮ್ಮ ದೇವಸ್ಥಾನಕ್ಕೆ ನೀವು ಬಸ್ ಅಥವಾ ರೈಲಿನ ಮೂಲಕ ತಲುಪಬಹುದು. ಜಿಲ್ಲಾ ಕೇಂದ್ರ ಹಾಗೂ ಹಲವು ಜಿಲ್ಲೆಗಳಿಂದ ಹುಲಗಿ ಗೆ ಹಲವಾರು ಬಸ್ ಸೌಲಭ್ಯ ಇದೆ. ಇಲ್ಲಿಗೆ ವಿಮಾನದಲ್ಲಿ ಬರಲು ಹತ್ತಿರದ ವಿಮಾನ ನಿಲ್ದಾಣ ಎಂದರೆ ಹುಬ್ಬಳ್ಳಿಯ ವಿಮಾನ ನಿಲ್ದಾಣ.
ಪ್ರತೀ ವರ್ಷವೂ ಭರತ ಹುಣ್ಣಿಮೆಯಂದು ೯ ದಿನಗಳ ಕಾಲ ಅತೀ ದೊಡ್ಡ ಜಾತ್ರೆಯೇ ನಡೆಯುತ್ತದೆ. ರಾಜ್ಯಾದಾದ್ಯಂತ ಅಲ್ಲದೆ ಹೊರ ರಾಜ್ಯದಿಂದಲೂ ಸಹ ಸಾವಿರಾರು ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಅದರಲ್ಲಿ ಆಂದ್ರಪ್ರದೇಶ ಮತ್ತು ತಮಿಳುನಾಡಿನಿಂದ ಹೆಚ್ಚು ಭಕ್ತರು ಆಗಮಿಸುತ್ತಾರೆ. ಈ ಜಾತ್ರೆಯ ವಿಶೇಷ ಏನು ಎಂದರೆ ಜಾತ್ರೆಯಲ್ಲಿ ದೇವಸ್ಥಾನದ ಹೊರಗಿನ ಬಯಲಿನಲ್ಲಿ ವಿಶೇಷವಾಗಿ ಪಾಯಸವನ್ನು ಮಾಡಲಾಗುತ್ತದೆ. ಕುದಿಯುವ ಪಾಯಸದ ಪಾತ್ರೆಗೆ ಕೈ ಹಾಕಿ ಬಿಸಿ ಪಾಯಸವನ್ನು ದೇವಿಗೆ ನೈವೇದ್ಯ ಆಗಿ ಅರ್ಪಿಸಲಾಗುತ್ತದೆ. ಇಲ್ಲಿಯ ಜಾತ್ರೆ ೩ ದಿನಗಳ ಕಾಲ ನಡೆಯುತ್ತದೆ ಜೊತೆಗೆ ಪ್ರಧಾನ ಕಾರ್ಯಕ್ರಮಗಳು, ಪೂಜಾ ವಿಧಾನಗಳು ೧೦ ದಿನಗಳ ಕಾಲ ನಡೆಯುತ್ತದೆ. ವಿಜಯ ದಶಿಯಂದು ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಾರೆ. ಇದಲ್ಲದೆ ಹುಣ್ಣಿಮೆ, ಮಂಗಳವಾರ, ಶುಕ್ರವಾರದಂದು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಈ ಕ್ಷೇತ್ರಕ್ಕೆ ಸುಮಾರು ೮೦೦ ವರ್ಷಗಳ ಇತಿಹಾಸ ಇದೆ. ಹುಲಿಗೆಮ್ಮ ದೇವಿ ಉತ್ತರ ಕರ್ನಾಟಕದ ಒಂದು ಶಕ್ತಿ ಸ್ಥಳ ಆಗಿದೆ. ಇಲ್ಲಿಗೆ ಬರುವ ಭಕ್ತರಿಗೆ ಒಳ್ಳೆಯದಾಗಲಿ ಹಾಗೂ ಹುಲಿಗೆಮ್ಮ ದೇವಿಯ ಪವಾಡ ಆ ಜನರಿಗೆ ಮಾತ್ರ ತಿಳಿಯುತ್ತದೆ ಎಂದು ಹೇಳುತ್ತಾರೆ.
ಈ ಕ್ಷೇತ್ರಕ್ಕೆ ಸಂಬಂಧಿಸಿದ ಒಂದು ಪೌರಾಣಿಕ ಕಥೆ ಹೀಗಿದೆ. ಹಲವಾರು ವರ್ಷಗಳ ಹಿಂದೆ ಹುಲಗಿ ಎಂಬ ಪ್ರದೇಶದಲ್ಲಿ ನಾಗ ಜೋಗಿ ಮತ್ತು ಬಸವ ಜೋಗಿ ಎಂಬ ಸಹೋದರರು ಇದ್ದರು. ಇವರು ಸೌದತ್ತಿ ಎಲ್ಲಮ್ಮನ ಭಕ್ತರಾಗಿದ್ದ ಪ್ರತೀ ವರ್ಷ ಸೌದತ್ತಿ ಗೆ ಹೋಗಿ ರೇಣುಕಾ ದೇವಿಯ ದರ್ಶನ ಪಡೆಯುತ್ತಿದ್ದರು. ಒಮ್ಮೆ ಸೌದತ್ತಿ ಗೆ ಹೋಗುವಾಗ ಜೋರಾಗಿ ಮಳೆ ಶುರು ಆಗುತ್ತದೆ. ಹಾಗಾಗಿ ಹುಣ್ಣಿಮೆಯ ದಿನ ಸೌದತ್ತಿ ಎಲ್ಲಮ್ಮನ ದರ್ಶನ ಪಡೆಯಲು ಈ ಸಹೋದರರಿಗೆ ಸಾಧ್ಯ ಆಗಲಿಲ್ಲ. ಆಗ ಅವರು ದಾರಿಯ ಮಧ್ಯೆಯೇ ಎಲ್ಲಮ್ಮನ ಧ್ಯಾನ ಮಾಡುತ್ತಾರೆ. ಆಗ ಅವರ ಭಕ್ತಿಯನ್ನು ಮೆಚ್ಚಿ ಎಲ್ಲಮ್ಮ ಅಲ್ಲಿಯೇ ಪ್ರತ್ಯಕ್ಷ ಆಗುತ್ತಾಳೆ. ಇನ್ನು ಮುಂದೆ ನೀವು ಸೌದತ್ತಿಗೆ ಬರುವುದು ಬೇಡ ನಾನೇ ನಿಮ್ಮ ಊರಿಗೆ ಬಂದು ನೆಲೆಸುತ್ತೇನೆ ಎಂದು ಅಭಯ ಹಸ್ತ ನೀಡುತ್ತಾಳೆ. ಹೀಗೆ ಹುಲಗಿಯಲ್ಲಿ ತಾಯಿ ರೇನುಕಾಂಬಾ ಹುಲಿಗೆಮ್ಮ ದೇವಿ ಆಗಿ ನೆಲೆಸಿದ್ದಾಳೆ. ಹೀಗೆ ಹುಲಿಗೆಮ್ಮನ ಹುಲಗಿ ಸುಕ್ಷೇತ್ರ ಆಯಿತು. ಹುಳಿಗೆಮ್ಮನ ದೇವಸ್ಥಾನದ ಮುಂದೆಯೇ ಮಾತಂಗಿ, ಪರಶುರಾಮ ಸುಬ್ರಹ್ಮಣ್ಯ, ಪಾರ್ವತಿ, ಗಣಪತಿ ಹಾಗೂ ನಾಭಗ್ರಹಗಕ ದೇವಸ್ಥಾನವು ಇದೆ. ಕಂಕಣ ಧಾರಣ , ಅಕ್ಕಿ ಪಡಿ, ಮಹಾ ರಥೋತ್ಸವ, ಗಂಗಾ ದೇವಿ ಪೂಜೆ, ಶ್ರೀ ದೇವಿಗೆ ಪಾಯಸ ವಿತರಣೆ, ಬಾಳೆ ದಿಂಡಿಗೆ ಆರೋಹಣ, ಪಾಯಸ ಅಗ್ನಿಕುಂಡ, ಕುಂಡದ ಪೂಜೆ, ಹಿರಿ ದಕ್ಷಿಣೆ ಹೀಗೆ ಹಕವಾರು ಕಾರ್ಯಕ್ರಮಗಳು ಈ ದೇವಸ್ಥಾನದ ಪೂಜೆರ್ಯಲ್ಲಿ ನಡೆಯುತ್ತದೆ. ಆದ್ದರಿಂದಲೇ ಹುಲಿಗೆಮ್ಮ ದೇವಿ ರಾಜ್ಯದ್ಯಾಂತ ಅಲ್ಲದೆ ದೇಶದಲ್ಲೂ ಕೂಡ ಪ್ರಸಿದ್ಧಿ ಹೊಂದಿದ್ದಾಳೆ.