ನಮ್ಮ ಭರತ ಖಂಡದ ವಿಶೇಷ ಶಕ್ತಿಯೇ ಇಲ್ಲಿನ ಆಧ್ಯಾತ್ಮ ಪರಂಪರೆ. ಅಸಂಖ್ಯಾತ ಸಾಧು, ಸಂತರು, ಮಹಿಮಾನ್ವಿತರೂ ಅವತರಿಸಿದ ಈ ಪುಣ್ಯ ಭೂಮಿ ನಮ್ಮ ಭಾರತ ದೇಶ. ಇಂತಹ ಮಹಿಮಾನ್ವಿತರೂ ಮಾಡಿದ ಆಧ್ಯಾತ್ಮಿಕ ಸಾಧನೆಗಳು ನಮ್ಮ ದೇಶವನ್ನು ಪುಣ್ಯಭೂಮಿಯನ್ನಾಗಿಸಿದೆ. ಈ ಸಂತರು ತಮ್ಮ ಸಾಧನೆಯಿಂದ ಜಾತಿ, ಧರ್ಮ, ಮತ ಪಂಥಗಳ ಲೆಕ್ಕಿಸದೇ ಮನುಕುಲದ ಒಳಿತಿಗಾಗಿ ಸಂದೇಶವನ್ನು ಕೊಡುತ್ತಾ ಸಹಸ್ರಾರು ಜನರ ಬಾಳನ್ನು ಉದ್ಧರಿಸಿದ ಪವಾಡ ಪುರುಷರಿದ್ದಾರೆ. ಅಂತಹ ಮಹಾನ್ ಪವಾಡ ಪುರುಷರಲ್ಲಿ ನಮ್ಮ ಸಿದ್ಧಾರೂಢರ ಹೆಸರು ಮುಂಚೂಣಿಯಲ್ಲಿದೆ.
ಹುಬ್ಬಳ್ಳಿ ಎಂದಾಕ್ಷಣ ನೆನಪಾಗುವುದು ಸಿದ್ಧಾರೂಢ ಮಠ . ಸಿದ್ಧಾರೂಢ ಸ್ವಾಮಿಗಳು ತಮ್ಮ ಅದ್ವೈತ ಸಿದ್ಧಾಂತದ ಮೂಲಕ ಭಕ್ತರಿಗೆ ಧರ್ಮಮಾರ್ಗ ಬೋಧಿಸಿದವರು ಸಿದ್ಧಾರೂಢರ ಗದ್ದುಗೆ ಇಂದಿಗೂ ಜಾಗೃತ ಕೇಂದ್ರ . ಹೀಗಾಗಿ ಹುಬ್ಬಳ್ಳಿಗೆ ಯಾರೇ ಬರಲಿ ಮೊದಲು ಸಿದ್ಧಾರೂಢರ ಮಠಕ್ಕೆ ಭೇಟಿಕೊಟ್ಟು ಗದ್ದುಗೆಯ ದರ್ಶನ ಪಡೆಯುತ್ತಾರೆ ಮಠದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ .
ಸಿದ್ಧಾರೂಢ ಸ್ವಾಮಿಗಳು ಮಹಾನ್ ಪವಾಡ ಪುರುಷರು ಸರಳ ಜೀವನ ಮತ್ತು ಬೋಧನೆಯಿಂದಾಗಿ ಅಪಾರ ಭಕ್ತ ವೃಂದ ಸಂಪಾದಿಸಿದವರು . ಮಠದಲ್ಲಿ ನಿತ್ಯ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ . ಸಿದ್ಧಾರೂಢರ ಗದ್ದುಗೆಯ ದರ್ಶನಕ್ಕೆ ದೇಶವಿದೇಶಗಳಿಂದ ಅಪಾರ ಭಕ್ತವೃಂಧವೇ ಬರುತ್ತದೆ ಸಿದ್ಧಾರೂಢ ಸ್ವಾಮಿಗಳು ಮೂಲತಃ ಬೀದರ್ ಜಿಲ್ಲೆಯ ಚಳಕಾಪುರದವರು 1836 ರ ಮಾರ್ಚ್ 26 ರಂದು ಜನಿಸಿದವರು . ಚಿಕ್ಕಂದಿನಲ್ಲಿಯೇ ಮನೆ ಬಿಟ್ಟು ಲೋಕ ಸಂಚಾರ ಕೈಗೊಂಡವರು ತಮ್ಮ 41 ನೇ ವಯಸ್ಸಿನಲ್ಲಿ ಅಂದರೆ 1877 ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆ ನಿಂತವರು ಜನರ ಆಧ್ಯಾತ್ಮಿಕ ಸವಾಲುಗಳಿಗೆ ಕಿವಿಯಾದವರು. ನಂಬಿ ಬಂದವರ ದುಗುಡಗಳನ್ನು ಹೋಗಲಾಡಿಸಿ ಬಾಳು ಬೆಳಗಿದವರು . ಪಂಚಾಕ್ಷರಿ ಮಂತ್ರವನ್ನು ಬಹಿರಂಗವಾಗಿ ಪಠಿಸಲು ಜನರಿಗೆ ಪ್ರೇರಣೆ ನೀಡಿದವರು . ಹೀಗಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಮಠದಲ್ಲಿ ಓಂ ನಮಃ ಶಿವಾಯ ಮಂತ್ರ ಅನುರಣಿಸುತ್ತಿರುತ್ತದೆ .
ಗಂಡುಮೆಟ್ಟಿದ ನಾಡು ಹುಬ್ಬಳ್ಳಿಗೆ ಬಂದವರು ಸಿದ್ಧಾರೂಢರ ಮಠಕ್ಕೆ ಭೇಟಿ ನೀಡುವುದು ಸಂಪ್ರದಾಯ . ಶ್ರೇಷ್ಠ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದರೆ ಜೀವನದಲ್ಲಿ ಸುಖ- ಸಮೃದ್ಧಿ ಯಶಸ್ಸು ಸಿಗುತ್ತೆ ಎನ್ನುವುದು ನಂಬಿಕೆ . ಸ್ವತಂತ್ರ ಹೋರಾಟಗಾರರಿಂದ ಹಿಡಿದು ಪ್ರಖ್ಯಾತ ಚಲನಚಿತ್ರ ನಟನಟಿಯರು ರಾಜಕಾರಣಿಗಳು ಸಮಾಜದ ಗಣ್ಯ ವ್ಯಕ್ತಿಗಳಿಗೆ ಪ್ರೇರಣಾ ಶಕ್ತಿಯಾಗಿದ್ದವರು ಸದ್ಗುರು ಸಿದ್ಧಾರೂಢರು ಬಾಲಗಂಗಾಧರ ತಿಲಕರಿಗೆ ಸ್ವತಂತ್ರ ಹೋರಾಟಕ್ಕೆ ಮಾರ್ಗದರ್ಶನ ಮಾಡಿದ್ದವರು . ಕೊಲ್ಲಾಪುರದ ಶಾಹು ಮಹಾರಾಜರಿಗೆ ಪ್ರಜಾಸತ್ತಾತ್ಮಕ ಆಡಳಿತದ ಪರಿಕಲ್ಪನೆ ಹೇಳಿಕೊಟ್ಟವರು . ಅನೇಕ ಗಣ್ಯಮಾನ್ಯರು ಸಿದ್ಧಾರೂಢರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಯಶಸ್ವಿಯಾಗಿದ್ದಾರೆ . ಸಾಕಷ್ಟು ಸ್ಯಾಂಡಲ್ ವುಡ್ ನಟನಟಿಯರು ಸಿದ್ಧಾರೂಢರನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಡಾಕ್ಟರ್ ರಾಜ್ಕುಮಾರ್ ಸದಾಕಾಲ ಸಿದ್ಧಾರೂಢರ ಭಕ್ತರಾಗಿ ಇದ್ದವರು ರಾಜ್ಕುಮಾರ್ ಕುಟುಂಬದವರು ಇಂದಿಗೂ ಮಠದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ ಸಮಯ ಸಿಕ್ಕಾಗಲೆಲ್ಲ ಸಿದ್ಧಾರೂಢರ ಮಠಕ್ಕೆ ಬಂದು ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಸಿದ್ಧಾರೂಢ ಸ್ವಾಮಿಗಳು ತಮ್ಮ ಆಚಾರ ವಿಚಾರ ನಡತೆಗಳಿಂದ ಭಕ್ತರಿಗೆ ಸಾಕ್ಷಾತ್ ಶಿವನ ಸ್ವರೂಪವೇ ಆಗಿದ್ದವರು . ಗದಗದ ಮಡಿವಾಳಪ್ಪನವರು , ನವಲಗುಂದದ ನಾಗಲಿಂಗ ಸ್ವಾಮಿಗಳು , ಸಂತ ಶಿಶುನಾಳ ಶರೀಫರು ಸೇರಿದಂತೆ ಲೋಕಮಾನ್ಯ ತಿಲಕರು ಮತ್ತು ಗಾಂಧೀಜಿಯಂತಹ ಮಹಾತ್ಮರು ಸಿದ್ಧಾರೂಢರ ಪ್ರಭಾವಕ್ಕೊಳಗಾಗಿದ್ದರು . ದೇಹ ಇರುವಾಗಲೇ ಸಕಲ ಸ್ವರೂಪದ ಜ್ಞಾನಗಳನ್ನು ಪಡೆದು ಮುಕ್ತರಾಗಬೇಕು ಎನ್ನುವುದು ಸಿದ್ಧಾರೂಢರ ಬೋಧನೆಯ ಸಾರವಾಗಿತ್ತು 1929 ರ ಆಗಸ್ಟ್ 21 ರಂದು ಸಿದ್ಧಾರೂಢರು ದೇಹತ್ಯಾಗ ಮಾಡಿದರು .
ಅಂದಿನಿಂದ ಇಂದಿನವರೆಗೆ ಸಿದ್ಧಾರೂಢರ ಗದ್ದುಗೆ ಭಕ್ತರ ಹರಕೆಯ ಕೇಂದ್ರ , ಬೇಡಿ ಬರುವ ಭಕ್ತರಿಗೆ ಸಿದ್ಧಾರೂಢರು ಎಂದು ನಿರಾಶೆ ಮಾಡಿಲ್ಲ . ಹೀಗಾಗಿ ಪ್ರತಿವರ್ಷ ಅದ್ಧೂರಿ ರಥೋತ್ಸವ ಕಾರ್ಯಕ್ರಮ ನಡೆಯುತ್ತದೆ ಜಲರಥೋತ್ಸವ ಕಣ್ಮನ ಸೆಳೆಯುತ್ತದೆ . ಸಿದ್ಧಾರೂಢರ ಸನ್ನಿಧಿಯಲ್ಲಿ ಜಾತಿ ಮತದ ಭೇದಭಾವವಿಲ್ಲ ಮೇಲು – ಕೀಳೆಂಬ ಹಂಗಿಲ್ಲ . ಎಲ್ಲ ಜಾತಿ ಧರ್ಮ ವರ್ಗಗಳ ಜನರು ಮಠಕ್ಕೆ ಬರುತ್ತಾರೆ . ಸಿದ್ಧಾರೂಢರ ಗದ್ದುಗೆಯನ್ನು ನೇರವಾಗಿ ಸ್ಪರ್ಶಿಸಿ ನಮಿಸುತ್ತಾರೆ .
ಧಾರವಾಡ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಸಿದ್ಧಾರೂಢ ಮಠದ ಆಡಳಿತಾಧಿಕಾರಿ ಆಗಿರುತ್ತಾರೆ . ನ್ಯಾಯಾಧೀಶರು ತಮಗೆ ಸಲಹೆ ಸೂಚನೆ ನೀಡಲು ಟ್ರಸ್ಟ್ ಕಮಿಟಿಯನ್ನು ನೇಮಿಸುತ್ತಾರೆ . 17 ಜನ ನಿರ್ದೇಶಕರು ಐದು ವರ್ಷಗಳಿಗೊಮ್ಮೆ ಆಯ್ಕೆಯಾಗುತ್ತಾರೆ . ಮಠದಲ್ಲಿ ಎಲ್ಲ ಜಾತಿ ಧರ್ಮಗಳ ಜನರೂ ಇದ್ದಾರೆ . ಮಠದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲ ನಿರ್ಧಾರಗಳನ್ನು ಸೌಹಾರ್ದಯುತವಾಗಿ ಚರ್ಚಿಸಿ ತೆಗೆದುಕೊಳ್ಳುತ್ತಾರೆ . ಮಠಕ್ಕೆ ಭೇಟಿ ನೀಡುವ ಭಕ್ತರಿಗೆ ಯಾವುದೇ ಅನ್ನದಾಸೋಹ ಮತ್ತು ವಸತಿ ವ್ಯವಸ್ಥೆಯಿದೆ. ಸಿದ್ಧಾರೂಡರ ಖ್ಯಾತಿ ಕೇವಲ ಕರ್ನಾಟಕಕ್ಕೇ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಸ್ವಾಮೀಜಿಗಳ ಭಕ್ತ ಸಮೂಹವಿದೆ. ಇಂತಹ ಅದ್ಭುತ ಪರಂಪರೆಯನ್ನು ಸಿದ್ಧಾರೂಢ ಮಠ ಹೊಂದಿದೆ.
ನಮ್ಮ ಭರತ ಖಂಡದ ವಿಶೇಷ ಶಕ್ತಿಯೇ ಇಲ್ಲಿನ ಆಧ್ಯಾತ್ಮ ಪರಂಪರೆ. ಅಸಂಖ್ಯಾತ ಸಾಧು, ಸಂತರು, ಮಹಿಮಾನ್ವಿತರೂ ಅವತರಿಸಿದ ಈ ಪುಣ್ಯ ಭೂಮಿ ನಮ್ಮ ಭಾರತ ದೇಶ. ಇಂತಹ ಮಹಿಮಾನ್ವಿತರೂ ಮಾಡಿದ ಆಧ್ಯಾತ್ಮಿಕ ಸಾಧನೆಗಳು ನಮ್ಮ ದೇಶವನ್ನು ಪುಣ್ಯಭೂಮಿಯನ್ನಾಗಿಸಿದೆ. ಈ ಸಂತರು ತಮ್ಮ ಸಾಧನೆಯಿಂದ ಜಾತಿ, ಧರ್ಮ, ಮತ ಪಂಥಗಳ ಲೆಕ್ಕಿಸದೇ ಮನುಕುಲದ ಒಳಿತಿಗಾಗಿ ಸಂದೇಶವನ್ನು ಕೊಡುತ್ತಾ ಸಹಸ್ರಾರು ಜನರ ಬಾಳನ್ನು ಉದ್ಧರಿಸಿದ ಪವಾಡ ಪುರುಷರಿದ್ದಾರೆ. ಅಂತಹ ಮಹಾನ್ ಪವಾಡ ಪುರುಷರಲ್ಲಿ ನಮ್ಮ ಸಿದ್ಧಾರೂಢರ ಹೆಸರು ಮುಂಚೂಣಿಯಲ್ಲಿದೆ.
ಹುಬ್ಬಳ್ಳಿ ಎಂದಾಕ್ಷಣ ನೆನಪಾಗುವುದು ಸಿದ್ಧಾರೂಢ ಮಠ . ಸಿದ್ಧಾರೂಢ ಸ್ವಾಮಿಗಳು ತಮ್ಮ ಅದ್ವೈತ ಸಿದ್ಧಾಂತದ ಮೂಲಕ ಭಕ್ತರಿಗೆ ಧರ್ಮಮಾರ್ಗ ಬೋಧಿಸಿದವರು ಸಿದ್ಧಾರೂಢರ ಗದ್ದುಗೆ ಇಂದಿಗೂ ಜಾಗೃತ ಕೇಂದ್ರ . ಹೀಗಾಗಿ ಹುಬ್ಬಳ್ಳಿಗೆ ಯಾರೇ ಬರಲಿ ಮೊದಲು ಸಿದ್ಧಾರೂಢರ ಮಠಕ್ಕೆ ಭೇಟಿಕೊಟ್ಟು ಗದ್ದುಗೆಯ ದರ್ಶನ ಪಡೆಯುತ್ತಾರೆ ಮಠದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ .
ಸಿದ್ಧಾರೂಢ ಸ್ವಾಮಿಗಳು ಮಹಾನ್ ಪವಾಡ ಪುರುಷರು ಸರಳ ಜೀವನ ಮತ್ತು ಬೋಧನೆಯಿಂದಾಗಿ ಅಪಾರ ಭಕ್ತ ವೃಂದ ಸಂಪಾದಿಸಿದವರು . ಮಠದಲ್ಲಿ ನಿತ್ಯ ನಿರಂತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ . ಸಿದ್ಧಾರೂಢರ ಗದ್ದುಗೆಯ ದರ್ಶನಕ್ಕೆ ದೇಶವಿದೇಶಗಳಿಂದ ಅಪಾರ ಭಕ್ತವೃಂಧವೇ ಬರುತ್ತದೆ .
ಸಿದ್ಧಾರೂಢ ಸ್ವಾಮಿಗಳು ಮೂಲತಃ ಬೀದರ್ ಜಿಲ್ಲೆಯ ಚಳಕಾಪುರದವರು 1836 ರ ಮಾರ್ಚ್ 26 ರಂದು ಜನಿಸಿದವರು . ಚಿಕ್ಕಂದಿನಲ್ಲಿಯೇ ಮನೆ ಬಿಟ್ಟು ಲೋಕ ಸಂಚಾರ ಕೈಗೊಂಡವರು ತಮ್ಮ 41 ನೇ ವಯಸ್ಸಿನಲ್ಲಿ ಅಂದರೆ 1877 ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆ ನಿಂತವರು ಜನರ ಆಧ್ಯಾತ್ಮಿಕ ಸವಾಲುಗಳಿಗೆ ಕಿವಿಯಾದವರು . ನಂಬಿ ಬಂದವರ ದುಗುಡಗಳನ್ನು ಹೋಗಲಾಡಿಸಿ ಬಾಳು ಬೆಳಗಿದವರು . ಪಂಚಾಕ್ಷರಿ ಮಂತ್ರವನ್ನು ಬಹಿರಂಗವಾಗಿ ಪಠಿಸಲು ಜನರಿಗೆ ಪ್ರೇರಣೆ ನೀಡಿದವರು . ಹೀಗಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಮಠದಲ್ಲಿ ಓಂ ನಮಃ ಶಿವಾಯ ಮಂತ್ರ ಅನುರಣಿಸುತ್ತಿರುತ್ತದೆ .
ಗಂಡುಮೆಟ್ಟಿದ ನಾಡು ಹುಬ್ಬಳ್ಳಿಗೆ ಬಂದವರು ಸಿದ್ಧಾರೂಢರ ಮಠಕ್ಕೆ ಭೇಟಿ ನೀಡುವುದು ಸಂಪ್ರದಾಯ . ಶ್ರೇಷ್ಠ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದರೆ ಜೀವನದಲ್ಲಿ ಸುಖ- ಸಮೃದ್ಧಿ ಯಶಸ್ಸು ಸಿಗುತ್ತೆ ಎನ್ನುವುದು ನಂಬಿಕೆ . ಸ್ವತಂತ್ರ ಹೋರಾಟಗಾರರಿಂದ ಹಿಡಿದು ಪ್ರಖ್ಯಾತ ಚಲನಚಿತ್ರ ನಟನಟಿಯರು ರಾಜಕಾರಣಿಗಳು ಸಮಾಜದ ಗಣ್ಯ ವ್ಯಕ್ತಿಗಳಿಗೆ ಪ್ರೇರಣಾ ಶಕ್ತಿಯಾಗಿದ್ದವರು ಸದ್ಗುರು ಸಿದ್ಧಾರೂಢರು ಬಾಲಗಂಗಾಧರ ತಿಲಕರಿಗೆ ಸ್ವತಂತ್ರ ಹೋರಾಟಕ್ಕೆ ಮಾರ್ಗದರ್ಶನ ಮಾಡಿದ್ದವರು .
ಕೊಲ್ಲಾಪುರದ ಶಾಹು ಮಹಾರಾಜರಿಗೆ ಪ್ರಜಾಸತ್ತಾತ್ಮಕ ಆಡಳಿತದ ಪರಿಕಲ್ಪನೆ ಹೇಳಿಕೊಟ್ಟವರು . ಅನೇಕ ಗಣ್ಯಮಾನ್ಯರು ಸಿದ್ಧಾರೂಢರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಯಶಸ್ವಿಯಾಗಿದ್ದಾರೆ . ಸಾಕಷ್ಟು ಸ್ಯಾಂಡಲ್ ವುಡ್ ನಟನಟಿಯರು ಸಿದ್ಧಾರೂಢರನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಡಾಕ್ಟರ್ ರಾಜ್ಕುಮಾರ್ ಸದಾಕಾಲ ಸಿದ್ಧಾರೂಢರ ಭಕ್ತರಾಗಿ ಇದ್ದವರು ರಾಜ್ಕುಮಾರ್ ಕುಟುಂಬದವರು ಇಂದಿಗೂ ಮಠದ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ ಸಮಯ ಸಿಕ್ಕಾಗಲೆಲ್ಲ ಸಿದ್ಧಾರೂಢರ ಮಠಕ್ಕೆ ಬಂದು ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಸಿದ್ಧಾರೂಢ ಸ್ವಾಮಿಗಳು ತಮ್ಮ ಆಚಾರ ವಿಚಾರ ನಡತೆಗಳಿಂದ ಭಕ್ತರಿಗೆ ಸಾಕ್ಷಾತ್ ಶಿವನ ಸ್ವರೂಪವೇ ಆಗಿದ್ದವರು . ಗದಗದ ಮಡಿವಾಳಪ್ಪನವರು , ನವಲಗುಂದದ ನಾಗಲಿಂಗ ಸ್ವಾಮಿಗಳು , ಸಂತ ಶಿಶುನಾಳ ಶರೀಫರು ಸೇರಿದಂತೆ ಲೋಕಮಾನ್ಯ ತಿಲಕರು ಮತ್ತು ಗಾಂಧೀಜಿಯಂತಹ ಮಹಾತ್ಮರು ಸಿದ್ಧಾರೂಢರ ಪ್ರಭಾವಕ್ಕೊಳಗಾಗಿದ್ದರು . ದೇಹ ಇರುವಾಗಲೇ ಸಕಲ ಸ್ವರೂಪದ ಜ್ಞಾನಗಳನ್ನು ಪಡೆದು ಮುಕ್ತರಾಗಬೇಕು ಎನ್ನುವುದು ಸಿದ್ಧಾರೂಢರ ಬೋಧನೆಯ ಸಾರವಾಗಿತ್ತು 1929 ರ ಆಗಸ್ಟ್ 21 ರಂದು ಸಿದ್ಧಾರೂಢರು ದೇಹತ್ಯಾಗ ಮಾಡಿದರು ಅಂದಿನಿಂದ ಇಂದಿನವರೆಗೆ ಸಿದ್ಧಾರೂಢರ ಗದ್ದುಗೆ ಭಕ್ತರ ಹರಕೆಯ ಕೇಂದ್ರ , ಬೇಡಿ ಬರುವ ಭಕ್ತರಿಗೆ ಸಿದ್ಧಾರೂಢರು ಎಂದು ನಿರಾಶೆ ಮಾಡಿಲ್ಲ. ಹೀಗಾಗಿ ಪ್ರತಿವರ್ಷ ಅದ್ಧೂರಿ ರಥೋತ್ಸವ ಕಾರ್ಯಕ್ರಮ ನಡೆಯುತ್ತದೆ ಜಲರಥೋತ್ಸವ ಕಣ್ಮನ ಸೆಳೆಯುತ್ತದೆ . ಸಿದ್ಧಾರೂಢರ ಸನ್ನಿಧಿಯಲ್ಲಿ ಜಾತಿ ಮತದ ಭೇದಭಾವವಿಲ್ಲ ಮೇಲು – ಕೀಳೆಂಬ ಹಂಗಿಲ್ಲ ಎಲ್ಲ ಜಾತಿ ಧರ್ಮ ವರ್ಗಗಳ ಜನರು ಮಠಕ್ಕೆ ಬರುತ್ತಾರೆ . ಸಿದ್ಧಾರೂಢರ ಗದ್ದುಗೆಯನ್ನು ನೇರವಾಗಿ ಸ್ಪರ್ಶಿಸಿ ನಮಿಸುತ್ತಾರೆ .
ಧಾರವಾಡ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಸಿದ್ಧಾರೂಢ ಮಠದ ಆಡಳಿತಾಧಿಕಾರಿ ಆಗಿರುತ್ತಾರೆ . ನ್ಯಾಯಾಧೀಶರು ತಮಗೆ ಸಲಹೆ ಸೂಚನೆ ನೀಡಲು ಟ್ರಸ್ಟ್ ಕಮಿಟಿಯನ್ನು ನೇಮಿಸುತ್ತಾರೆ . 17 ಜನ ನಿರ್ದೇಶಕರು ಐದು ವರ್ಷಗಳಿಗೊಮ್ಮೆ ಆಯ್ಕೆಯಾಗುತ್ತಾರೆ . ಮಠದಲ್ಲಿ ಎಲ್ಲ ಜಾತಿ ಧರ್ಮಗಳ ಜನರೂ ಇದ್ದಾರೆ . ಮಠದ ಅಭಿವೃದ್ಧಿಗೆ ಸಂಬಂಧಿಸಿದಂತೆ ಎಲ್ಲ ನಿರ್ಧಾರಗಳನ್ನು ಸೌಹಾರ್ದಯುತವಾಗಿ ಚರ್ಚಿಸಿ ತೆಗೆದುಕೊಳ್ಳುತ್ತಾರೆ. ಮಠಕ್ಕೆ ಭೇಟಿ ನೀಡುವ ಭಕ್ತರಿಗೆ ಯಾವುದೇ ಅನ್ನದಾಸೋಹ ಮತ್ತು ವಸತಿ ವ್ಯವಸ್ಥೆಯಿದೆ. ಸಿದ್ಧಾರೂಡರ ಖ್ಯಾತಿ ಕೇವಲ ಕರ್ನಾಟಕಕ್ಕೇ ಮಾತ್ರ ಸೀಮಿತವಾಗಿಲ್ಲ. ದೇಶಾದ್ಯಂತ ಸ್ವಾಮೀಜಿಗಳ ಭಕ್ತ ಸಮೂಹವಿದೆ. ಇಂತಹ ಅದ್ಭುತ ಪರಂಪರೆಯನ್ನು ಸಿದ್ಧಾರೂಢ ಮಠ ಹೊಂದಿದೆ.