ದೇಶೀಯ ತೈಲ ಪೂರೈಕೆ ಕಂಪೆನಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಹಲವು ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 186 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಯಾವ ವಿಭಾಗಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ? ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ.
ಅಧಿಸೂಚನೆಯಲ್ಲಿ ತಿಳಿಸಿರುವಂತೆ ಒಟ್ಟು 186 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಭಾರತದಾದ್ಯಂತ ಖಾಲಿ ಇರುವ 186 ಕಾರ್ಯಾಚರಣೆ ತಂತ್ರಜ್ಞ, ಲ್ಯಾಬ್ ವಿಶ್ಲೇಷಕ ಹುದ್ದೆಗಳ ಭರ್ತಿಗೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಎಂಜಿನಿಯರಿಂಗ್, ಡಿಪ್ಲೊಮಾ, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಹುಡುಕುತ್ತಿರುವವರಿಗೆ ಹಾಗೂ ಭಾರತದ ಯಾವುದೇ ಸ್ಥಳದಲ್ಲಿ ಕೆಲಸ ಮಾಡಲು ಸಿದ್ದರಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಒಳ್ಳೆಯ ಕೆಲಸವನ್ನು ನಿಮ್ಮದಾಗಿಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 21-05-2022 ರ ಮೊದಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಭಾರತದಾದ್ಯಂತ ಖಾಲಿ ಇರುವ 186 ಕಾರ್ಯಾಚರಣೆ ತಂತ್ರಜ್ಞ, ಲ್ಯಾಬ್ ವಿಶ್ಲೇಷಕ ಹುದ್ದೆಗಳ ಭರ್ತಿಗೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಎಂಜಿನಿಯರಿಂಗ್, ಡಿಪ್ಲೊಮಾ, ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ. 25 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಹಾಕಲು ಮೇ 21 ಕೊನೆಯ ದಿನವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.55000/- ವೇತನ ನೀಡಲಾಗುತ್ತದೆ.
ಸಂಸ್ಥೆಯ ಹೆಸರು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)
ಹುದ್ದೆಗಳ ಸಂಖ್ಯೆ 186, ಉದ್ಯೋಗ ಸ್ಥಳ ಭಾರತದಾದ್ಯಂತ,
ಹುದ್ದೆಯ ಹೆಸರು ಕಾರ್ಯಾಚರಣೆ ತಂತ್ರಜ್ಞ, ಲ್ಯಾಬ್ ವಿಶ್ಲೇಷಕ,
ಸಂಬಳ ರೂ.55000/- ಪ್ರತಿ ತಿಂಗಳು.
ಹುದ್ದೆಯ ವಿವರ ಇಂತಿದೆ.
ಕಾರ್ಯಾಚರಣೆ ತಂತ್ರಜ್ಞ 94,
ಬಾಯ್ಲರ್ ತಂತ್ರಜ್ಞ 18,
ನಿರ್ವಹಣೆ ತಂತ್ರಜ್ಞ (ಮೆಕ್ಯಾನಿಕಲ್) 14,
ನಿರ್ವಹಣೆ ತಂತ್ರಜ್ಞ (ಎಲೆಕ್ಟ್ರಿಕಲ್) 17,
ನಿರ್ವಹಣೆ ತಂತ್ರಜ್ಞ (ಇನ್ಸ್ಟ್ರುಮೆಂಟೇಶನ್) 9,
ಲ್ಯಾಬ್ ವಿಶ್ಲೇಷಕ 16,
ಜೂನಿಯರ್ ಫೈರ್ & ಸೇಫ್ಟಿ ಇನ್ಸ್ಪೆಕ್ಟರ್ 18
ಶೈಕ್ಷಣಿಕ ಅರ್ಹತೆ
ಕಾರ್ಯಾಚರಣೆ ತಂತ್ರಜ್ಞ ಕೆಮಿಕಲ್ ಎಂಜಿನಿಯರಿಂಗ್, ಡಿಪ್ಲೊಮಾ ಪದವಿ ಹೊಂದಿರಬೇಕು.
ಬಾಯ್ಲರ್ ತಂತ್ರಜ್ಞ ಡಿಪ್ಲೊಮಾ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕೋರ್ಸ್ ಮಾಡಿರಬೇಕು.
ನಿರ್ವಹಣೆ ತಂತ್ರಜ್ಞ (ಮೆಕ್ಯಾನಿಕಲ್) ಡಿಪ್ಲೊಮಾ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಅರ್ಹತೆ ಹೊಂದಿರಬೇಕು.
ನಿರ್ವಹಣೆ ತಂತ್ರಜ್ಞ (ಎಲೆಕ್ಟ್ರಿಕಲ್) ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಡಿಪ್ಲೊಮಾ ಪದವಿ ಪಡೆದಿರಬೇಕು.
ನಿರ್ವಹಣೆ ತಂತ್ರಜ್ಞ (ಇನ್ಸ್ಟ್ರುಮೆಂಟೇಶನ್) ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್, ಡಿಪ್ಲೊಮಾ ಪದವಿ ಪಡೆದಿರಬೇಕು. ಲ್ಯಾಬ್ ಅನಾಲಿಸ್ಟ್: ಬಿ.ಎಸ್ಸಿ, ಎಂ.ಎಸ್ಸಿ ಪದವಿ ಪಡೆದಿರಬೇಕು.
ಜೂನಿಯರ್ ಫೈರ್ & ಸೇಫ್ಟಿ ಇನ್ಸ್ಪೆಕ್ಟರ್ ಯಾವುದೇ ಪದವಿ ಹೊಂದಿರಬೇಕು.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 01-04-2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳ ಒಳಗಿರಬೇಕು.
ವಯಸ್ಸು ಜಾಸ್ತಿ ಇದ್ದವರು ಬೇಜಾರ್ ಆಗುವ ಅವಕಾಶವಿಲ್ಲ. ಇಲ್ಲಿ ವಯೋಮಿತಿ ಸಡಿಲಿಕೆಗೂ ಅವಕಾಶ ಕಲ್ಪಿಸಲಾಗಿದೆ.
SC/ST ಅಭ್ಯರ್ಥಿಗಳು 05 ವರ್ಷಗಳು.
OBC-NC ಅಭ್ಯರ್ಥಿಗಳು 03 ವರ್ಷಗಳು.
PwBD (UR) ಅಭ್ಯರ್ಥಿಗಳು 10 ವರ್ಷಗಳು.
PwBD (OBC-NC) ಅಭ್ಯರ್ಥಿಗಳು 13 ವರ್ಷಗಳು,
PwBD (SC/ST) ಅಭ್ಯರ್ಥಿಗಳು 15 ವರ್ಷಗಳು.
SC/ST ಮತ್ತು PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ.
UR/OBC-NC & EWS ಅಭ್ಯರ್ಥಿಗಳು ಆನ್ಲೈನ್ ಮೂಲಕ ರೂ.590/- ಪಾವತಿಸಬೇಕು.
ವೆಬ್ಸೈಟ್: hindustanpetroleum.com
ಅರ್ಜಿ ಸಲ್ಲಿಸುವ ಲಿಂಕ್ ಇದಾಗಿದ್ದು ಇಲ್ಲಿ ನೇರವಾಗಿ ಅರ್ಜಿ ಹಾಕಿ.
ಆಯ್ಕೆ ಪ್ರಕ್ರಿಯೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಆಪ್ಟಿಟ್ಯೂಡ್ ಪರೀಕ್ಷೆ, ಕೌಶಲ್ಯ ಪರೀಕ್ಷೆ ಇರುತ್ತದೆ. ಪರೀಕ್ಷೆಯಲ್ಲಿ ಗಳಿಸಿದ ಅಂಕದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಸತಕ್ಕ ಪ್ರಮುಖ ದಿನಾಂಕಗಳು ಹೀಗಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-04-2022
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-05-2022.