ಕರ್ನಾಟಕದಲ್ಲಿ ಕೃಷಿಭೂಮಿಯನ್ನು ಕೊಂಡುಕೊಳ್ಳಬೇಕಾದರೆ ಯಾವ ಯಾವ ಡಾಕ್ಯೂಮೆಂಟ್ಸ್ ಚೆಕ್ ಮಾಡಬೇಕು. ಕೃಷಿ ಭೂಮಿಯನ್ನು ಯಾರು ಕೊಂಡುಕೊಳ್ಳಬಹುದು ಈ ಎಲ್ಲ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ರಿಯಲ್ ಎಸ್ಟೇಟ್ ಎಂದರೆ ಐದು ರೀತಿಯ ಪ್ರಾಪರ್ಟಿಗಳನ್ನು ಕೊಂಡುಕೊಳ್ಳಬಹುದು. ಅಪಾರ್ಟ್ ಮೆಂಟ್ ಫ್ಲಾಟ್, ಇಂಡಿಪೆಂಡೆಂಟ್ ಹೌಸ್, ಕಮರ್ಷಿಯಲ್ ಕಾಂಪ್ಲೆಕ್ಸ್, ಸೈಟ್ ಹಾಗೂ ಕೃಷಿ ಭೂಮಿಯನ್ನು ಕೊಂಡುಕೊಳ್ಳಬಹುದು. ಇವುಗಳಲ್ಲಿ ಸೈಟ್ ಅಥವಾ ಕೃಷಿಭೂಮಿಯನ್ನು ಕೊಂಡುಕೊಳ್ಳುವುದು ಉತ್ತಮ. ನಮ್ಮ ದೇಶದ ಜನಸಂಖ್ಯೆ ಹೆಚ್ಚುತ್ತಿದೆ ಅದಕ್ಕೆ ತಕ್ಕನಾಗಿ ಭೂಮಿ ಹೆಚ್ಚುವುದಿಲ್ಲ ಮುಂದೊಂದು ದಿನ ಕೃಷಿ ಭೂಮಿಗೆ ಹೆಚ್ಚು ಬೆಲೆ ಬರಬಹುದಾಗಿದೆ. ಹಾಗಾಗಿ ಕೃಷಿ ಭೂಮಿಯನ್ನು ಕೊಂಡುಕೊಳ್ಳುವುದು ಉತ್ತಮ. ಕೃಷಿ ಮಾಡದೆ ಇದ್ದರೂ ಮರಗಳನ್ನು ಬೆಳೆಸಬಹುದು ಇದರಿಂದ ಆದಾಯ ಬರುತ್ತದೆ. ಕೃಷಿ ಭೂಮಿಯನ್ನು ಕೊಂಡುಕೊಳ್ಳಬೇಕಾದರೆ ನಮಗೆ ಯಾರು ಮಾರುತಿದ್ದಾರೋ ಅವರು ಆ ಭೂಮಿಯ ಓನರ್ ಎಂಬುದನ್ನು ನೋಡಿಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಂದ ಕೊಂಡುಕೊಳ್ಳುವುದಾದರೆ ಅವರಿಗೆ ಮಾರುವ ಹಕ್ಕು ಇದೆಯೆ ಇಲ್ಲವೇ ಎಂಬುದನ್ನು ತಿಳಿಯಬೇಕು. ನಂತರ ಸಬ್ ರಿಜಿಸ್ಟರ್ ಆಫೀಸ್ ಗೆ ಹೋಗಿ ಇ. ಸಿ ಎನ್ ಕಂಬ್ರೆನ್ ಸರ್ಟಿಫಿಕೇಟ್ ತೆಗೆಸಬೇಕು. ಇದರಿಂದ ಅದರ ಮೇಲೆ ಸಾಲ ಇದೆಯಾ, ಏನಾದರೂ ಸಮಸ್ಯೆ ಇದ್ದರೆ ತಿಳಿಯುತ್ತದೆ. ಟ್ಯಾಕ್ಸ್ ಬಗ್ಗೆ ಕೇಳಬೇಕು. ನಂತರ ಅಗ್ರಿಮೆಂಟ್ ಮಾಡಬೇಕು ಅದರಲ್ಲಿ ಭೂಮಿಯ ಬೆಲೆ, ಕೊಟ್ಟಿರುವ ಅಡ್ವಾನ್ಸ್ ಇರಬೇಕು. ನಂತರ ಸರ್ಕಾರಿ ಸರ್ವೇಯರ್ ಕರೆಸಿ ಮಾರುವವರು ಪತ್ರದಲ್ಲಿ ತೋರಿಸಿರುವ ಮತ್ತು ಭೂಮಿಯ ಮೆಸರ್ ಮೆಂಟ್ ಒಂದೇ ಇದೆಯಾ ಎಂದು ಕೇಳಬೇಕು ಲ್ಯಾಂಡ್ ಸರ್ವೆ ಮಾಡಿಸಬೇಕು.
ನಿಮ್ಮ ಎಲ್ಲ ಡೀಟೇಲ್ಸ್ ಮೆನ್ಶನ್ ಮಾಡಿದ ನಂತರ ಇಂಡಿಯನ್ ರಿಜಿಸ್ಟ್ರೇಷನ್ ಆಕ್ಟ್ 1908 ಪ್ರಕಾರ ರಿಜಿಸ್ಟ್ರೇಷನ್ ಮಾಡಿಸಬೇಕು. ಸಾಮಾನ್ಯವಾಗಿ ಅಗ್ರಿಮೆಂಟ್ ಮಾಡಿಸಿ ನಾಲ್ಕು ತಿಂಗಳ ಒಳಗೆ ರಿಜಿಸ್ಟ್ರೇಷನ್ ಮಾಡಿಸಬೇಕು. ಇದಕ್ಕೆ ಮಾರಾಟ ಮಾಡುವವರು ಟೈಟಲ್ ಡೀಡ್ ಮತ್ತು ಪ್ರಿವಿಯಸ್ ಡೀಡ್, ಟ್ಯಾಕ್ಸ್ ರಿಸಿಪ್ಟ್ ಹಾಗೂ ಇಬ್ಬರು ವಿಟ್ನೆಸ್ ಬೇಕಾಗುತ್ತದೆ. ಆಗ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಭೂಮಿ ಟ್ರಾನ್ಸಫರ್ ಆಗುತ್ತದೆ. ನಂತರ ಆ ಭೂಮಿ ಇರುವ ಗ್ರಾಮ ಪಂಚಾಯತ್ ದಲ್ಲಿ ವಿಲೇಜ್ ಅಕೌಂಟೆಂಟ್ ಹತ್ತಿರ ಹೋಗಿ ಅಲ್ಲಿಯ ರೆಕಾರ್ಡ್ಸ್ ಗಳಲ್ಲಿ ಹೆಸರನ್ನು ಚೇಂಜ್ ಮಾಡಿಸಬೇಕು. N.R.I ಗಳಿಂದ ಕೃಷಿ ಭೂಮಿಯನ್ನು ಕೊಂಡು ಕೊಳ್ಳುವುದಾದರೆ ಇಂಡಿಯನ್ ಎಂಬಸಿ ಆಫೀಸರ್ ನಿಂದ ಪವರ್ ಆಫ್ ಅಟಾರ್ನಿಗೆ ವಿಟ್ನೆಸ್ ಆಗಿ ಸೈನ್ ತೆಗೆದುಕೊಳ್ಳಬೇಕಾಗುತ್ತದೆ. ಕರ್ನಾಟಕದಲ್ಲಿ ಕೃಷಿಭೂಮಿಯನ್ನು ಕೊಂಡುಕೊಳ್ಳಬೇಕಾದರೆ ನೀವು ರೈತ ಕುಟುಂಬದವರಾಗಿರಬೇಕು ಅಥವಾ ವಾರ್ಷಿಕ ಆದಾಯ 25 ಲಕ್ಷಕ್ಕಿಂತ ಕಡಿಮೆ ಇದ್ದರೆ ಡಿ.ಸಿಯಿಂದ ಅನುಮತಿ ಪಡೆದು ಕೃಷಿಭೂಮಿಯನ್ನು ಕೊಂಡುಕೊಳ್ಳಬಹುದು. ನಿಮ್ಮ ಕೃಷಿಭೂಮಿ ಹೈವೇ ಪಕ್ಕ ಅಥವಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಇದ್ದರೆ ಸೈಟ್ ಆಗಿ ಪರಿವರ್ತನೆಯಾಗುವ ಚಾನ್ಸ್ ಇರುತ್ತದೆ. ಸರ್ಕಾರ ನಿಮ್ಮ ಭೂಮಿಯನ್ನು ಅಕ್ವಾಯಾರ್ ಮಾಡುವುದಾದರೆ ಹೆಚ್ಚಿನ ಪರಿಹಾರ ನೀಡುತ್ತದೆ. ಕೃಷಿ ಭೂಮಿಯನ್ನು ಕೊಂಡುಕೊಳ್ಳಲು ಸಾಲವನ್ನು ಎಲ್ಲಿ ಪಡೆಯುವುದು ಎನ್ನುವ ಬಗ್ಗೆ ಮೊದಲೇ ತಿಳಿದುಕೊಂಡಿರಬೇಕು. ಹೆಚ್ಚಿನ ಮಾಹಿತಿಗೆ ಫೈನಾನ್ಸ್ ಫ್ರೀಡಂ ವರ್ಕಶಾಪ್ ಭೇಟಿ ಮಾಡಿ ಸಲಹೆಯನ್ನು ಪಡೆಯಬಹುದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.