ನಮ್ಮ ದಿನನಿತ್ಯ ಜೀವನದಲ್ಲಿ ಹಣ ಸಂಪಾದನೆ ಮಾಡಲು ಬಹಳಷ್ಟು ರೀತಿಯಲ್ಲಿ ಕಷ್ಟಪಡುತ್ತೇವೆ. ನಮ್ಮ ಜೀವನದಲ್ಲಿ ಹಣ ಇಲ್ಲ ಎಂದರೆ ಜೀವನ ನಡೆಸುವುದು ಕಷ್ಟ ಹಣದಿಂದ ನಾವು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಆದರೆ ಇವತ್ತಿನ ಜೀವಮಾನದಲ್ಲಿ ಜನರು ಸಾಕಷ್ಟು ಹಣವನ್ನು ಸಂಪಾದನೆಯನ್ನು ಮಾಡುತ್ತಿದ್ದಾರೆ ಆದರೆ ಸಂಪಾದನೆ ಮಾಡಿದ ಹಣ ಕೂಡ ಅವರಿಗೆ ಜೀವನ ನಡೆಸಲು ಸಾಕಾಗುವುದಿಲ್ಲ. ಇಷ್ಟೇ ಹಣ ಸಂಪಾದನೆ ಮಾಡಿದರು ಕೂಡ ಅವರ ಬೆಳೆಯದು ನಿಲ್ಲುವುದಿಲ್ಲ ಬೇಗ ಬೇಗ ಹಣ ಖರ್ಚಾಗುತ್ತದೆ. ಹೀಗಿರುವಾಗ ವಿಷ್ಣುಗುಪ್ತ ಎಂದು ಕರೆಯಲ್ಪಡುವ ಆಚಾರ್ಯ ಚಾಣಕ್ಯ ಅವರು ಹಣ ನಮ್ಮ ಬಳಿ ನಿಲ್ಲದಿರಲು ಕೆಲವು ಕಾರಣಗಳನ್ನು ತಿಳಿಸಿದ್ದಾರೆ ಅವುಗಳು ಎನು ಅನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಮ್ಮ ಬಳಿ ನಾವು ದುಡಿದಂತಹ ಹಣ ನಿಲ್ಲದೆ ಇರಲು ಆಚಾರ್ಯ ಚಾಣಕ್ಯ ತಿಳಿಸಿದ ನಾಲ್ಕು ಕಾರಣಗಳು ಏನು ಅನ್ನೋದನ್ನು ನೋಡುವುದಾದರೆ ಮೊದಲಿಗೆ. ಮೂರ್ಖರ ಸನ್ಮಾನ ಅಂದರೆ ಆಚಾರ್ಯ ಚಾಣಕ್ಯ ಅವರು ಹೇಳುವಂತೆ ಯಾವ ಮನೆಯಲ್ಲಿ ಮೂರ್ಖರಿಗೆ ಅಜ್ಞಾನಿಗಳಿಗೆ ಸನ್ಮಾನ ಮಾಡಲಾಗುವುದು ಅಥವ ಮೂರ್ಖರನ್ನು ಹಿಗಳಲಾಗುವುದು ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ನಡೆಸುವುದಿಲ್ಲ ಎಂದು ಹೇಳುತ್ತಾರೆ. ಕೆಲವರು ಮಾತಿನಲ್ಲಿ ಯಾವುದೇ ರೀತಿಯ ಅರ್ಥವೇ ಇರುವುದಿಲ್ಲ ಹಾಗೂ ಯಾವುದೇ ಶಾಸ್ತ್ರದ ಆಧಾರವೂ ಇಲ್ಲದೆ ಕೆಲವರು ತಮ್ಮ ಮಾತನ್ನು ಸರಾಗವಾಗಿ ಹರಿದು ಬಿಡುತ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ನೆಲೆನಿಲ್ಲುವುದಿಲ್ಲ ಎಂದು ಆಚಾರ್ಯ ಚಾಣಕ್ಯ ತಿಳಿಸುತ್ತಾರೆ. ಆದರೆ ಯಾವ ಮನೆಯಲ್ಲಿ ಜ್ಞಾನವನ್ನು ಹೊಂದಿರುವಂತಹ ವ್ಯಕ್ತಿಯ ಪೂಜೆ ಆರಾಧನೆ ನಡೆಯುತ್ತದೆ, ಯೋಗ್ಯ ಮಾರ್ಗದರ್ಶನದಲ್ಲಿ ನಡೆಯುತ್ತಾರೆ ಹಾಗೂ ಇತರರನ್ನು ಯೋಗ್ಯ ಮಾರ್ಗದರ್ಶನದಲ್ಲಿ ನಡೆಸಿಕೊಂಡು ಹೋಗುತ್ತಾರೆ ಅಂಥವರ ಮನೆಯಲ್ಲಿ ಯಾವುದೇ ರೀತಿಯ ಕಷ್ಟಗಳು ಇರುವುದಿಲ್ಲ ಹಾಗೂ ಅವರ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಹೇಳುತ್ತಾರೆ.

ಎರಡನೆಯದಾಗಿ ದುಡ್ಡಿನ ಸಂಗ್ರಹಣೆ ಮಾಡುವುದು. ಚಾಣಕ್ಯ ಹೇಳುವಂತೆ ಯಾವ ಮನೆಯಲ್ಲಿ ದುಡ್ಡಿನ ಸಂಗ್ರಹವನ್ನು ಮಾಡುತ್ತಾರೋ ಅಂತಹವರಿಗೆ ಕಷ್ಟದ ಬೆಲೆ ಹರಿದಿರುತ್ತದೆ ಹಾಗೂ ಹಣದ ಬೆಲೆ ಕೂಡ ತಿಳಿದಿರುತ್ತದೆ. ಯಾರಿಗೆ ಹಣದ ಬೆಲೆ ತಿಳಿದಿರುವುದಿಲ್ಲ ಅಂತಹ ವ್ಯಕ್ತಿಗಳು ಅನಾವಶ್ಯಕವಾಗಿ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಇಂತಹ ವ್ಯಕ್ತಿಗಳಿಗೆ ಯಾವುದಾದರೂ ಕಷ್ಟದ ಸಂದರ್ಭ ಪರಿಸ್ಥಿತಿ ಎದುರಾದಾಗ ಅವರ ಬಳಿ ಯಾವುದೇ ರೀತಿಯ ಹಣದ ಸಂಗ್ರಹ ಇರುವುದಿಲ್ಲ ಆಗ ಇನ್ನೊಬ್ಬರ ಬಳಿ ಹಣವನ್ನು ಕೇಳಿ ತೆಗೆದುಕೊಳ್ಳುತ್ತಾರೆ. ಆದರೆ ಹಣದ ಬೆಲೆಯನ್ನು ತಿಳಿದು ಹಣವನ್ನು ಸಂಗ್ರಹಿಸಿಟ್ಟುಕೊಳ್ಳುವ ಅವರಿಗೆ ಇಂತಹ ಪರಿಸ್ಥಿತಿ ಸಂದರ್ಭ ಎದುರಾಗಲಾರದು.

ಆಚಾರ್ಯ ಚಾಣಕ್ಯ ಹೇಳುವಂತೆ ಮೂರನೆಯದಾಗಿ ನಾವು ದುಡಿದಂತಹ ನಮ್ಮ ಬಳಲಿ ಇಲ್ಲದೆ ಇರಲು ಕಾರಣ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ಜಗಳ ನಡೆಯುತ್ತಿರುವುದು. ಯಾವ ಮನೆಯಲ್ಲಿ ಗಂಡ ಹೆಂಡತಿ ಇಬ್ಬರ ನಡುವೆ ಚಿಕ್ಕ ಚಿಕ್ಕ ಕಾರಣಕ್ಕೂ ಜಗಳ ನಡೆಯುತ್ತಿರುತ್ತದೆ ಅಂತಹ ಮನೆಯಲ್ಲಿ ಯಾವತ್ತಿಗೂ ಕೂಡ ಲಕ್ಷ್ಮಿ ನೆಲೆಸುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ.

ಚಾಣಕ್ಯ ತಿಳಿಸುವ ನಾಲ್ಕನೇ ಕಾರಣವೆಂದರೆ ನಾವು ದುಡಿದಂತಹ ನಮ್ಮ ಶತ್ರುಗಳ ಕೈಯಲ್ಲಿ ಅಥವಾ ಕೆಟ್ಟವರ ಕೈಯಲ್ಲಿ ಸೇರಿದರೆ ಅದು ಯಾವತ್ತೂ ಕೂಡ ಒಳ್ಳೆಯ ಕೆಲಸಗಳಿಗೆ ಪ್ರಯೋಜನಕ್ಕೆ ಬರುವುದಿಲ್ಲ. ಒಬ್ಬ ವ್ಯಕ್ತಿ ತಾನು ಕಷ್ಟಪಟ್ಟು ದುಡಿದ ಹಣ ಕೆಟ್ಟ ವ್ಯಕ್ತಿ ಅಥವಾ ಶತ್ರುಗಳ ಕೈಹಿಡಿದರೆ ಆ ವ್ಯಕ್ತಿ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅದರಲ್ಲಿ ಮುಖ್ಯವಾಗಿ ಎರಡು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಾವು ದುಡಿದ ಹಣ ಇನ್ನೊಬ್ಬರ ಕೈ ಸೇರಿದರೆ ಒಂದು ನಮ್ಮ ಹಣದ ನಷ್ಟ ಉಂಟಾಗುತ್ತದೆ ಹಾಗೂ ನಮ್ಮ ಶತ್ರುಗಳೇ ನಮ್ಮ ಹಣದಿಂದಲೇ ನಮ್ಮ ವಿರುದ್ಧ ಏನಾದರೂ ಅಪಾಯ ಮಾಡುವ ಸಾಧ್ಯತೆ ಇರುತ್ತದೆ.

ಆಚಾರ್ಯ ಚಾಣಕ್ಯ ತಿಳಿಸುವಂತೆ ಈ ನಾಲ್ಕು ಪ್ರಮುಖ ಕಾರಣಗಳು ನಮಗೆ ನಾವು ದುಡಿದಂತಹ ಹಣ ನಮ್ಮ ಬಳಿ ನಿಲ್ಲದೇ ಇರುವುದು ಹಾಗೂ ನಾವು ಹಲವಾರು ಸಂಕಷ್ಟಗಳಿಗೆ ಒಳಗಾಗುವುದು. ಈ ಮೇಲಿನ ನಾಲ್ಕು ತಪ್ಪುಗಳನ್ನು ನಾವು ಮಾಡದೇ ಇದ್ದಲ್ಲಿ ನಾವು ದುಡಿದ ಹಣವನ್ನು ನಾವು ನಮ್ಮಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!