ಈ ಒಂದು ಲೇಖನದ ಮೂಲಕ ನಾವು ಕಡಿಮೆ ಬಜೆಟ್ಟಿನಲ್ಲಿ ಮಾಡಬಹುದಾದ ಒಂದು ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ. ಅದು ಹತ್ತಿ ಬಿಸ್ನೆಸ್ ಆಗಿದ್ದು ಇದಕ್ಕೆ ನಾವು ಮಾಡಬಹುದಾದ ಇನ್ವೆಸ್ಟ್ಮೆಂಟ್ ಎಷ್ಟು ಇದರಿಂದ ನಮಗೆಷ್ಟು ಇದರ ಮಾರಾಟ ಹೇಗೆ ಎಲ್ಲ ವಿವರಗಳನ್ನು ಇಲ್ಲಿ ನೋಡೋಣ.
ಹತ್ತಿಗಳನ್ನು ಪ್ರತಿಯೊಬ್ಬರ ಮನೆಯಲ್ಲಿ ದೀಪ ಹಚ್ಚಲು ಎಂದು ಬಳಸುತ್ತಾರೆ. ಅದೇ ರೀತಿ ದೇವಸ್ಥಾನಗಳಲ್ಲಿ ಸಹ ಹತ್ತಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಹಬ್ಬದ ಸಂದರ್ಭಗಳಲ್ಲಿ ಹತ್ತಿಗೆ ಬಹಳ ಬೇಡಿಕೆ ಇರುತ್ತದೆ. ಈ ಕಾರಣಗಳಿಂದಾಗಿ ಇದು ಪ್ರತೀ ನಿತ್ಯ ಬೇಡಿಕೆ ಇರುವ ವಸ್ತು ಆಗಿರುವುದರಿಂದ ಇದಕ್ಕೆ ಒಂದು ಒಳ್ಳೆಯ ಬೇಡಿಕೆ ಇದೆ ಎಂದು ಹೇಳಬಹುದು. ಹಾಗಾಗಿ ಈ ಬಿಸ್ನೆಸ್ ಮಾಡುವ ಮೂಲಕ ಉತ್ತಮ ಲಾಭವನ್ನು ಗಳಿಸಬಹುದು. ಈ ಬಿಸ್ನೆಸ್ ಮಾಡಲು ನಮಗೆ ಏನೆಲ್ಲಾ ವಸ್ತುಗಳು ಬೇಕು ಹಾಗೂ ನಾವು ಇದಕ್ಕೆ ಎಷ್ಟು ಖರ್ಚು ಮಾಡಬೇಕು ಮುಂದೆ ಇದರಿಂದ ನಾವು ಗಳಿಸಬಹುದಾದ ಲಾಭ ಎಷ್ಟು ಎಲ್ಲ ವಿಷಯಗಳನ್ನು ನೋಡೋಣ.
ಈ ಬಿಸ್ನೆಸ್ ಮಾಡಲು ನಮಗೆ ಮೊದಲಿಗೆ ಮುಖ್ಯವಾಗಿ ಹತ್ತಿ ಮಾಡುವ ಮಶೀನ್ ಬೇಕು. ಈ ಮಶಿನ್ನಿನ ಬೆಲೆ 12,000 ರೂಪಾಯಿ. ಅತೀ ಕಡಿಮೆ ಬೆಲೆಗೆ ಸಿಗುತ್ತದೆ ಎನ್ನಬಹುದು. ಹಾಗೇ ಕಚ್ಚಾವಸ್ತು ಹತ್ತಿ ಅಂತೂ ಬೇಕೆ ಬೇಕು. ಹತ್ತಿಯ ಬೆಲೆ ಕೆಜಿಗೆ 100 ರಿಂದ 120 ರೂಪಾಯಿ ಇರುತ್ತದೆ. ಇವೆರಡು ವಸ್ತುಗಳು ಹತ್ತಿ ಬಿಸ್ನೆಸ್ ಮಾಡಲು ಬೇಕಾದಂತಹ ಮುಖ್ಯವಾದ ಸಾಮಗ್ರಿಗಳು. ಇವುಗಳನ್ನು ಬಳಸಿಕೊಂಡು ಹೇಗೆ ನಾವು ಸಂಪಾದನೆ ಮಾಡಬಹುದು ಎಂದು ನೋಡುವುದಾದರೆ, ನಾವು ಈ ಮಶಿನ್ನಿನ ಮೂಲಕ ದೀಪ ಹಚ್ಚಲು ಬಳಕೆ ಮಾಡುವ ಸಣ್ಣ ಬತ್ತಿಗಳನ್ನು ತಯಾರಿಸಬಹುದು. ಹೀಗೆ ಇನ್ನೊಂದು ಕಡೆ ದೊಡ್ಡ ಹತ್ತಿಯ ಚೂರುಗಳನ್ನು ಹಾಕುವುದರಿಂದ ದೊಡ್ಡ ದೊಡ್ಡ ಬತ್ತಿಗಳನ್ನು ಸಹ ತಯಾರಿಸಬಹುದು.
ತಯಾರಿಸಿದ ಬತ್ತಿಗಳನ್ನು ಪ್ಯಾಕ್ ಮಾಡಿ ಅದನ್ನು ಕಿರಾಣಿ ಸ್ಟೋರ್ ಗಳಲ್ಲಿ , ದೇವಸ್ಥಾನ ಇರುವಂತಹ ಏರಿಯಾದ ಅಂಗಡಿಗಳಲ್ಲಿ ಬತ್ತಿಗಳನ್ನು ಮಾರಾಟ ಮಾಡಬಹುದು. ನಾವು ಈ ಬಿಸ್ನೆಸ್ ನ ಲಾಭ ನೋಡುವುದಾದರೆ, ಹತ್ತಿಯನ್ನು ಒಂದು ಕೆಜಿಗೆ ನೂರು ರೂಪಾಯಿ ಕೊಟ್ಟು ತರುತ್ತೇವೆ. ನಂತರ ಹತ್ತಿಯನ್ನು ತಂದು ಅದನ್ನು ಬತ್ತಿ ಮಾಡಿ ಪ್ಯಾಕಿಂಗ್ ಮಾಡಿ ಮಾರಾಟ ಮಾಡುವವರಿಗೆ ನೂರು ರೂಪಾಯಿ ಖರ್ಚು ಆಗುತ್ತದೆ. ಟೋಟಲ್ ಒಂದು ಕೆಜಿ ಹತ್ತಿಯಿಂದ ಬತ್ತಿ ತಯಾರಿಸಲು 200 ರೂಪಾಯಿ ಖರ್ಚು ಬೀಳುವುದು. ಇದನ್ನ ಹೋಲ್ ಸೇಲ್ ಆಗಿ 1,200 ರೂಪಾಯಿಗೆ ಮಾರಾಟ ಮಾಡಬಹುದು. ಇದರಿಂದ ನಿಮಗೆ 1,000 ರೂಪಾಯಿ ಲಾಭ ದೊರೆಯುತ್ತದೆ. ಈ ರೀತಿಯಾಗಿ ದಿನಕ್ಕೆ 3 ಕೆಜಿ ಹತ್ತಿಯಿಂದ ಬತ್ತಿ ತಯಾರಿಸಿದರೆ ಒಂದು ದಿನಕ್ಕೆ 3,000 ರೂಪಾಯಿ ಹಾಗೂ ಒಂದು ತಿಂಗಳಿಗೆ 90,000 ರೂಪಾಯಿ ಲಾಭವನ್ನು ಗಳಿಸಬಹುದು.