ಬಹಳಷ್ಟು ಜನರು ಕೊಲೆಸ್ಟ್ರಾಲ್ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಅದಕ್ಕೆ ಕಾರಣ, ಅದಕ್ಕಿರುವ ಮನೆಮದ್ದಿನ ಬಗ್ಗೆ ಆಯುರ್ವೇದ ತಜ್ಞರ ಸಲಹೆಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊಡರ್ನ್ ಸೈನ್ಸ್ ಪ್ರಕಾರ ಕೊಲೆಸ್ಟ್ರಾಲ್ ಎಣ್ಣೆ, ಕೊಬ್ಬು, ತುಪ್ಪವನ್ನು ತಿನ್ನುವುದರಿಂದ ಬರುತ್ತದೆ. ಆಯುರ್ವೇದದ ಪ್ರಕಾರ ದೇಹದಲ್ಲಿ ಕೊಲೆಸ್ಟ್ರಾಲ್ ಜೀರ್ಣ ಪ್ರಕ್ರಿಯೆಯಲ್ಲಿ ಕುಂದು ಕೊರತೆ ಉಂಟಾದರೆ ಅಗ್ನಿ ಮಾಂದ್ಯ ಆಗುತ್ತದೆ ಅಂದರೆ ನೀವು ತಿಂದ ಆಹಾರ 3ತಾಸಿನಲ್ಲಿ ಜೀರ್ಣವಾಗಬೇಕು ಆದರೆ ಅಗ್ನಿ ಮಾಂದ್ಯ ಆದಾಗ 3ತಾಸಿನಲ್ಲಿ ಆಹಾರ ಜೀರ್ಣವಾಗದೆ ಹೊಟ್ಟೆಯಲ್ಲಿ ಕೊಳೆಯಲು ಪ್ರಾರಂಭವಾಗುತ್ತದೆ. ನಾವು ತಿಂದ ಆಹಾರವು ಹೊಟ್ಟೆಯಲ್ಲಿ ಸಾರಭಾಗ ಮತ್ತು ಕಿಟ್ಟಭಾಗವಾಗುತ್ತದೆ ಸಾರಭಾಗ ರಕ್ತಕ್ಕೆ ಸೇರಿದರೆ, ಕಿಟ್ಟಭಾಗ ಮಲದ ರೂಪದಲ್ಲಿ ತ್ಯಾಜ್ಯ ವಸ್ತುವಾಗಿ ಹೊರಹೋಗುತ್ತದೆ. ಈ ಕೊಳೆತ ಆಹಾರ ಸಾರ ಭಾಗಕ್ಕೂ ಸೇರದೆ ಕಿಟ್ಟಭಾಗಕ್ಕೂ ಸೇರದೆ ಎರಡು ಹಂತಗಳ ಮಧ್ಯದ ಭಾಗವನ್ನು ಆಯುರ್ವೇದದಲ್ಲಿ ಆಮ ಎನ್ನುವರು ಇದೆ ಕೊಲೆಸ್ಟ್ರಾಲ್ ಇದು ಉಪಯುಕ್ತವು ಅಲ್ಲ ಅನುಪಯುಕ್ತವು ಅಲ್ಲ ಇದನ್ನು ದೇಹ ಲಿವರಲ್ಲಿ ಸಂಗ್ರಹಿಸುತ್ತದೆ ಈ ಪ್ರಕ್ರಿಯೆ ವರ್ಷಾನುಗಟ್ಟಲೆ ನಡೆದರೆ ಲಿವರ್ ಊದಿಕೊಳ್ಳುತ್ತದೆ.
ಈ ಕೊಲೆಸ್ಟ್ರಾಲ್ ರಕ್ತನಾಳ ಸೇರಿದರೆ ಅಲ್ಲಿಯೂ ಬ್ಲಾಕ್ ಮಾಡುತ್ತದೆ. ಕೀಲುಗಳಲ್ಲಿ ಸಂಗ್ರಹವಾದರೆ ಕೀಲು ನೋವು ಉಂಟಾಗುತ್ತದೆ. ಹೀಗೆ ದೇಹದ ಬೇರೆ ಬೇರೆ ಭಾಗಗಳಿಗೆ ಸೇರಿ ನ್ಯೂನತೆಯನ್ನು ಉಂಟುಮಾಡುತ್ತದೆ. ಇದಕ್ಕೆ ಚಿಕಿತ್ಸೆ ಎಂದರೆ ದೇಹದಲ್ಲಿ ಅಗ್ನಿ ಯನ್ನು ವೃದ್ಧಿಸಬೇಕು. ಊಟದ ಮೊದಲು ಹಸಿ ಶುಂಠಿಯ ಚೂರು ಮತ್ತು ಸೈಂಧವ ಲವಣ ಇದು ಆಯುರ್ವೇದ ಅಂಗಡಿಯಲ್ಲಿ ಸಿಗುತ್ತದೆ ಚಿಟಿಕೆ ಸೈಂಧವ ಲವಣವನ್ನು ಬಾಯಲ್ಲಿ ಇಟ್ಟು ಒಂದೆ ಸಲ ಜಗಿಯಬಾರದು ನಂತರ ಊಟ ಮಾಡಿದಾಗ ಕೊಲೆಸ್ಟ್ರಾಲ್ ಉಂಟಾಗುವುದಿಲ್ಲ ಹೀಗೆ ಪ್ರತಿದಿನ ಮಾಡುವುದರಿಂದ ಕೊಲೆಸ್ಟ್ರಾಲ್ ಅನ್ನು ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳಬಹುದು. ಇದು ಸಾಧ್ಯವಿಲ್ಲವೆಂದರೆ ವೈದ್ಯರ ಬಳಿ ಹೋಗುವುದರಿಂದ ಮೆಡಿಸಿನ್ ತೆಗೆದುಕೊಳ್ಳುವರು. ಈ ಮಾಹಿತಿಯನ್ನು ತಪ್ಪದೆ ಬಂದು ತಿಳಿಸಿ ಕೊಲೆಸ್ಟ್ರಾಲ್ ನಿಂದ ಮುಕ್ತಿ ಪಡೆಯಿರಿ.