ಯಾವುದೇ ಆಸ್ತಿ, ಜಾಗ, ಮನೆ, ಯಾವುದೇ ಪತ್ರಗಳು ಅಸಲಿಯೋ,ನಕಲಿಯೋ ಎನ್ನುವುದನ್ನು ಸುಲಭವಾಗಿ ಮೊಬೈಲ್, ಕಂಪ್ಯೂಟರ್ ನಲ್ಲಿ ನೋಡುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.
ಮೊದಲು ಗೂಗಲ್ ಹೋಗಿ ಇ ಸ್ವತ್ತು ಅಂತ ಟೈಪ್ ಮಾಡಿ ಇ ಸ್ವತ್ತು ಡಾಟ್ ಕರ್ನಾಟಕ ಡಾಟ್ ಎನ್. ಐ.ಸಿ ಡಾಟ್ ಇನ್ ಇದು ಸರ್ಕಾರದ ವೆಬ್ ಸೈಟ್ ಕ್ಲಿಕ್ ಮಾಡಿ ವರದಿಗಳು ಇಲ್ಲಿ ಕಾವೇರಿ ರಿಪೋರ್ಟ್ ಅಂತ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು ನಂತರ ಪ್ರಾಪರ್ಟಿ ಐಡಿ, ರಿಜಿಸ್ಟ್ರೇಷನ್ ನಂಬರ್, ಯಾವ ಡಾಟಾದಿಂದ ಬೇಕಾದರೂ ಚೆಕ್ ಮಾಡಬಹುದು. ಪ್ರಾಪರ್ಟಿ ಐಡಿ ಇದ್ದರೆ ನಂಬರ್ ಹಾಕಿ ಗೋ ಅಂತ ಕ್ಲಿಕ್ ಮಾಡಿದರೆ ಡೀಟೇಲ್ ಬರುತ್ತದೆ. ನಂತರ ಇಲ್ಲಿ ರಿಕ್ಯೆಸ್ಟ್ ಐಡಿ ರಿಜಿಸ್ಟ್ರೇಷನ್ ನಂಬರ್ ಇರುತ್ತದೆ ಅದನ್ನು ತೆಗೆದುಕೊಂಡು ಅದು ಅಸಲಿಯೋ ನಕಲಿಯೋ ನೋಡಬಹುದು.
ಗೂಗಲ್ ನಲ್ಲಿ ಕಾವೇರಿ ಆನಲೈನ್ ಟೈಪ್ ಮಾಡಿ ಕಾವೇರಿ ಆನಲೈನ್ ಸರ್ವಿಸಸ್ ಅಂತ ಇರುತ್ತದೆ. ಅದನ್ನು ಕ್ಲಿಕ್ ಮಾಡಬೇಕು ಇಲ್ಲಿ ಐಡಿ, ಪಾಸವರ್ಡ್ ಹಾಕಿ ಲೋಗಿನ್ ಆಗಬೇಕು. ಆನಲೈನ್ ಸಿಸಿ ಕ್ಲಿಕ್ ಮಾಡಿದರೆ ಇಲ್ಲಿ ಸರ್ಚ್ ಬೈ ಡಾಕ್ಯುಮೆಂಟ್ ಡೀಟೇಲ್ ಇರುವಲ್ಲಿ ರಿಜಿಸ್ಟ್ರೇಷನ್ ನಂಬರ್, ಜಿಲ್ಲೆ, ಸಿಟಿ, ಡಾಕ್ಯುಮೆಂಟ್ ನಂಬರ್ ಹಾಕಿ ಸೆಂಡ್ ಒ.ಟಿ.ಪಿ ಕ್ಲಿಕ್ ಮಾಡಿದರೆ ಮೊಬೈಲ್ ಗೆ ಒ.ಟಿ.ಪಿ ಬರುತ್ತದೆ ಅದನ್ನು ಹಾಕಿ ವ್ಯೂ ಡಾಕ್ಯುಮೆಂಟ್ ಕ್ಲಿಕ್ ಮಾಡಿದರೆ ಡಾಕ್ಯುಮೆಂಟ್ ಕಾಪಿ ಬರುತ್ತದೆ ಆಗ ನಮ್ಮ ಬಳಿ ಇರುವ ಡಾಕ್ಯುಮೆಂಟ್ ಹಾಗೂ ಬಂದಿರುವ ಡಾಕ್ಯುಮೆಂಟ್ ನ್ನು ತಾಳೆ ಮಾಡಿ ನೋಡಬೇಕು ಆಗ ಅಸಲಿಯೋ , ನಕಲಿಯೋ ತಿಳಿಯುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ