ಪಹಣಿ ಆನ್ ಲೈನ್ ಎಂಬುದು ಅಂತರ್ಜಾಲದ ಮುಖಾಂತರ ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಮೂಲ ಆರ್ ಟಿ ಸಿ ಯನ್ನು ಪಡೆಯುವ ಸೌಕರ್ಯವಾಗಿರುತ್ತದೆ. ಸಾರ್ವಜನಿಕರು ಆನ್ ಲೈನ್ ನಲ್ಲಿ ಹಣವನ್ನು ಪಾವತಿಸಿ ಎಲ್ಲಿಂದಲಾದರೂ ಆರ್ ಟಿ ಸಿಯನ್ನು ಪಡೆಯಬಹುದು. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಈ ವ್ಯವಸ್ಥೆಯನ್ನು ನಮ್ಮ ರಾಜ್ಯ ಜಾರಿಗೆ ತಂದಿದೆ. ಇದು ಕರ್ನಾಟಕ ಸರ್ಕಾರವು ಆರಂಭಿಸಿರುವ ಒಂದು ವಿಶಿಷ್ಟ ವ್ಯವಸ್ಥೆಯಾಗಿದೆ. ಆದ್ದರಿಂದ ನಾವು ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
ಗೂಗಲ್ ಕ್ರೋಮ್ ಗೆ ಹೋಗಿ ಸರ್ಚ್ ಬಾರ್ ನಲ್ಲಿ ಮೊದಲು ಭೂಮಿ ಎಂದು ಕನ್ನಡದಲ್ಲಿ ಸರ್ಚ್ ಹೊಡೆಯಬೇಕು. ನಂತರದಲ್ಲಿ ರೆವೆನ್ಯೂ ಡಿಪಾರ್ಟ್ಮೆಂಟ್ ಮೇಲೆ ಕ್ಲಿಕ್ ಮಾಡಬೇಕು. ನಂತರದಲ್ಲಿ ಭೂಮಿ ಎನ್ನುವದರ ಮೇಲೆ ಟ್ಯಾಬ್ ಮಾಡಬೇಕು. ನಂತರದಲ್ಲಿ ಕ್ಲಿಕ್ ಹಿಯರ್ ಆಯ್ಕೆ ದೊರೆಯುತ್ತದೆ. ಅಲ್ಲಿ ಕ್ಲಿಕ್ ಮಾಡಬೇಕು. ನಂತರದಲ್ಲಿ ಐದರಿಂದ ಹತ್ತು ಸೆಕೆಂಡ್ ಗಳಷ್ಟು ಕಾಯಬೇಕು. ಅಲ್ಲಿ ವಸ್ತುಗಳ ಸಿಟಿಜನ್ ಸರ್ವಿಸಸ್ ಆಯ್ಕೆ ದೊರೆಯುತ್ತದೆ. ಅಲ್ಲಿ ವೈವ್ ಆರ್ ಟಿಸಿ ಮತ್ತು ಎಮ್.ಆರ್. ಮೇಲೆ ಕ್ಲಿಕ್ ಮಾಡಬೇಕು.
ನಂತರದಲ್ಲಿ ಬಲ ತುದಿಯಲ್ಲಿ ಇರುವ ಡೆಸ್ಕ್ ಟಾಪ್ ಸೈಟ್ ಮೇಲೆ ಕ್ಲಿಕ್ ಮಾಡಬೇಕು. ನಂತರದಲ್ಲಿ ಜಿಲ್ಲೆ ಯಾವುದೆಂದು ಕ್ಲಿಕ್ ಮಾಡುವ ಆಯ್ಕೆ ದೊರೆಯುತ್ತದೆ. ಆದ್ದರಿಂದ ಜಿಲ್ಲೆಯನ್ನು ಕ್ಲಿಕ್ ಮಾಡಬೇಕು. ತಾಲೂಕನ್ನು ಕ್ಲಿಕ್ ಮಾಡುವ ಆಯ್ಕೆ ದೊರೆಯುತ್ತದೆ. ಆದ್ದರಿಂದ ತಾಲೂಕನ್ನು ಕ್ಲಿಕ್ ಮಾಡಬೇಕು. ನಂತರದಲ್ಲಿ ಹೋಬಳಿ ಯಾವುದೆಂದು ಕ್ಲಿಕ್ ಮಾಡುವ ಆಯ್ಕೆ ದೊರೆಯುತ್ತದೆ. ಆದ್ದರಿಂದ ಹೋಬಳಿಯನ್ನು ಕ್ಲಿಕ್ ಮಾಡಬೇಕು. ನಂತರದಲ್ಲಿ ಸರ್ವೇ ನಂಬರ್ ಕೊಡಬೇಕು. ಟಾಬ್ ಮಾಡಿದ ನಂತರ ಸ್ಟಾರ್ ಎನ್ನುವ ಆಯ್ಕೆ ದೊರೆಯುತ್ತದೆ.
ಅದರ ಮೇಲೆ ಕ್ಲಿಕ್ ಮಾಡಬೇಕು. ಹಾಗೆಯೇ ನಂತರ ವರ್ಷ ಯಾವುದು ಬೇಕು ಎಂದು ಕ್ಲಿಕ್ ಮಾಡಬೇಕು. ಕೊನೆಯದಾಗಿ ವ್ಯೂವ್ ಮೇಲೆ ಕ್ಲಿಕ್ ಮಾಡಿದರೆ ಮಾಹಿತಿ ದೊರಕುತ್ತದೆ. ಇದಕ್ಕಾಗಿ ಯಾವುದೇ ರೀತಿಯಲ್ಲೂ ಸೈಬರ್ ಗೆ ಹೋಗುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಮಾಹಿತಿ ಪಡೆಯಬಹುದು. ಆದ್ದರಿಂದ ಈಗಿನ ತಂತ್ರಜ್ಞಾನ ಅಷ್ಟು ಮುಂದುವರಿದಿದೆ ಎಂದು ಹೇಳಬಹುದು. ಇದರಿಂದ ಪಹಣಿಯನ್ನು ತಿಳಿಯುವುದಾದರೆ ನಾಡಕಛೇರಿಗೆ ಹೋಗುವ ಅವಶ್ಯಕತೆ ಇಲ್ಲ.