ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಪ್ರತಿಯೊಂದು ಕೆಲಸಗಳ ನಕಲು ಪ್ರತಿಯನ್ನು ಪಡೆದುಕೊಳ್ಳುವುದಕ್ಕೆ ಆರ್ ಟಿ ಐ ಗೆ ಹೇಗೆ ಮತ್ತು ಯಾವ ರೀತಿಯಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಆನ್ಲೈನ್ ಮೂಲಕ ನೀವು ಯಾವ ದಾಖಲೆಗಳ ನಕಲು ಪ್ರತಿಯನ್ನು ಪಡೆಯಬಹುದು ಎಂದರೆ ಉದಾಹರಣೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದ ದಾಖಲೆಗಳ ಪ್ರತಿ. ಅದೇ ರೀತಿ ಆಶ್ರಯ ಯೋಜನೆಯಲ್ಲಿ ಮನೆ ಗಳಿಗೆ ಸಂಬಂಧಿಸಿದ ಮಾಹಿತಿ ಉಚಿತ ಶೌಚಾಲಯ ಯಾರು ಯಾರಿಗೆ ಲಭ್ಯವಾಗಿದೆ.
ಕುಡಿಯುವ ನೀರಿನ ಯೋಜನೆಗಾಗಿ ಎಷ್ಟು ಖರ್ಚು ಮಾಡಿದ್ದಾರೆ ಚರಂಡಿ ಗೋಸ್ಕರ ಮತ್ತು ರಸ್ತೆ ನಿರ್ಮಾಣಕ್ಕಾಗಿ ಸರ್ಕಾರದಿಂದ ಎಷ್ಟು ಬಜೆಟ್ ಬಂದಿದೆ ಅದರಲ್ಲಿ ಎಷ್ಟು ಖರ್ಚು ಆಗಿದೆ ಇದನ್ನೆಲ್ಲಾ ಆರ್ ಟಿ ಐ ಅಂದರೆ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳ ನಕಲು ಪ್ರತಿಯನ್ನು ಪಡೆದುಕೊಳ್ಳಬಹುದು. ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ಬ್ರೌಸರ್ ಅನ್ನು ತೆರೆದು ಅಲ್ಲಿ ಕರ್ನಾಟಕ ಸರ್ಕಾರದ ಆರ್ ಟಿ ಐ ವೆಬ್ಸೈಟ್ ಓಪನ್ ಮಾಡಬೇಕು ನಿಮ್ಮೆದುರು ಒಂದು ಪುಟ ತೆರೆದುಕೊಳ್ಳುತ್ತದೆ
ಅಲ್ಲಿ ಮಾಹಿತಿಯನ್ನು ಪಡೆಯುವುದಕ್ಕೆ ವಿನಂತಿ ಸಲ್ಲಿಸಿ ಎನ್ನುವುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಆನ್ಲೈನ್ ಮಾಹಿತಿಗಳನ್ನು ಪಡೆದುಕೊಳ್ಳುವಾಗ ಯಾವ ಯಾವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂಬುದನ್ನು ಅಲ್ಲಿ ತಿಳಿಸಿರುತ್ತಾರೆ ಅದನ್ನು ಓದಿಕೊಳ್ಳಬೇಕು. ನಂತರ ಕೆಳಗಡೆ ಕ್ಲಿಕ್ ಮಾಡಿ ಸಲ್ಲಿಸಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ಆನ್ಲೈನ್ ಆರ್ ಟಿ ಐ ವಿನಂತಿ ಸಲ್ಲಿಸುವುದಕ್ಕೆ ನಿಮ್ಮ ಇಮೇಲ್ ಮತ್ತು ಮೊಬೈಲ್ ನಂಬರನ್ನು ಅಲ್ಲಿ ಹಾಕಬೇಕು ಅಲ್ಲಿ ಕೇಳುವ ಕ್ಯಾಪ್ಚ ಕೊಡ್ ಬರೆದು ಸಲ್ಲಿಸಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
ನಂತರ ನಿಮ್ಮ ಮುಂದೆ ಆನ್ಲೈನ್ ಅರ್ಜಿ ಕಾಣಿಸುತ್ತದೆ ಅಲ್ಲಿ ಕೇಳುವ ಮಾಹಿತಿಯನ್ನು ತುಂಬಬೇಕು. ಮೊದಲಿಗೆ ಸಾರ್ವಜನಿಕ ಪ್ರಾಧಿಕಾರ ಆಯ್ಕೆಯಲ್ಲಿ ನಿಮ್ಮ ಜಿಲ್ಲೆಯ ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಆರ್ ಟಿ ಐ ಅರ್ಜಿದಾರನ ವೈಯಕ್ತಿಕ ಮಾಹಿತಿಯನ್ನು ಅಲ್ಲಿ ಭರ್ತಿ ಮಾಡಬೇಕು. ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿಯನ್ನು ಕೂಡ ಹಾಕಬೇಕು.
ಭಾರತೀಯರು ಮಾತ್ರ ಆರ್ ಟಿ ಐ ಗೆ ಅರ್ಜಿಯನ್ನು ಸಲ್ಲಿಸಬಹುದು. ನೀವು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಹೌದು ಎನ್ನುವುದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳುವ ಮಾಹಿತಿಯನ್ನು ತುಂಬಬೇಕು. ಆರ್ ಟಿ ಐ ಗಾಗಿ ನೀವು 3000 ಪದಗಳ ವರೆಗಿನ ಪಠ್ಯವನ್ನು ನಮೂದಿಸಬೇಕಾಗುತ್ತದೆ. ಅಲ್ಲಿ ವಿಷಯದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಅಧಿನಿಯಮ 2005 ನಿಯಮ 6(1) ಮತ್ತು 7(1) ಪ್ರಕಾರ ಮಾಹಿತಿ ಪಡೆಯಲು ಅರ್ಜಿ ಎಂಬುದನ್ನು ನಮೂದಿಸಬೇಕು.
ನಂತರದಲ್ಲಿ ಅರ್ಜಿದಾರನ ಹೆಸರು ಅರ್ಜಿದಾರನ ಸಂಪೂರ್ಣ ವಿಳಾಸ ಬರೆಯಬೇಕು ನಂತರ ಸಾರ್ವಜನಿಕ ಮಾಹಿತಿ ಅಧಿಕಾರಿ ಪದನಾಮ ಮತ್ತು ವಿಳಾಸವನ್ನು ಬರೆಯಬೇಕು. ನಂತರ ನಿಮಗೆ ಬೇಕಾಗಿರುವ ಯೋಜನೆಯ ಯಾವ ವರ್ಷದ ನಕಲು ಪ್ರತಿ ಬೇಕು ಎಂಬುದರ ಕುರಿತು ಬರೆಯಬೇಕು. ನಿಮಗೆ ಯಾವ ಯೋಜನೆಯ ಕುರಿತು ದಾಖಲೆ ಬೇಕು ಅದಕ್ಕೆ ಸಾಕ್ಷಿ ನೀಡುವಂತಹ ದಾಖಲೆಯನ್ನು ನೀವು ಅಪ್ಲೋಡ್ ಮಾಡಬೇಕು. ನಂತರ ಕ್ಯಾಪ್ಚಾ ಕೋಡ್ ಹಾಕಿ ಸಲ್ಲಿಸಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಆರ್ ಟಿ ಐ ಶುಲ್ಕ ಹತ್ತು ರೂಪಾಯಿಯನ್ನು ನೀವು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ. ನೀವು ಶುಲ್ಕವನ್ನು ಪಾವತಿಸಿದ ನಂತರ ನೊಂದಣಿ ಸಂಖ್ಯೆ ಸಿಗುತ್ತದೆ ಅದನ್ನು ನೀವು ಪ್ರಿಂಟ್ ತೆಗೆದುಕೊಳ್ಳಬಹುದು. ಈ ರೀತಿಯಾಗಿ ಆರ್ ಟಿ ಐ ಗೆ ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಕೆಲಸಗಳ ಪ್ರತಿಯನ್ನು ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರೊಂದಿಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ಈ ಮಾಹಿತಿಯನ್ನು ತಿಳಿಸಿರಿ.