ನಮ್ಮ ದೇಶದಲ್ಲಿ ಕೆಲವೊಂದು ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕೆ ಪಡಿತರ ಚೀಟಿ ಬಹಳ ಅವಶ್ಯವಾಗಿ ಬೇಕಾಗುತ್ತದೆ ನಿಮ್ಮ ಬಳಿ ಪಡಿತರ ಚೀಟಿ ಇಲ್ಲ ಎಂದರೆ ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಬೇಕು ಎಂದರೆ ಏನು ಮಾಡಬೇಕು ಯಾವ ರೀತಿಯಾಗಿ ಮಾಡಿದರೆ ಬೇಗ ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು ಯಾವ ರೀತಿಯ ಪ್ರಕ್ರಿಯೆಯನ್ನು ಅನುಸರಿಸಿದರೆ ಬಿಪಿಎಲ್ ಪಡಿತರ ಚೀಟಿ ಸಿಗುತ್ತದೆ ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಮೊದಲಿಗೆ ಪಡಿತರ ಚೀಟಿಯನ್ನು ಮಾಡಿಸಿಕೊಳ್ಳುವುದಕ್ಕೆ ಕೆಲವೊಂದು ದಾಖಲೆಗಳು ಬೇಕಾಗುತ್ತವೆ ಅವುಗಳು ಯಾವುದೆಂದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಆಧಾರ ಕಾರ್ಡ್ ಮುಖ್ಯವಾಗಿ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಗೆ ಲಿಂಕ್ ಇರಬೇಕು ಇವುಗಳನ್ನು ತೆಗೆದುಕೊಂಡು ನಿಮ್ಮ ಸಮೀಪದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಸಲ್ಲಿಸಬೇಕು
ಆದರೆ ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥರನ್ನಾಗಿ ಮಹಿಳೆಯನ್ನು ಮುಖ್ಯವಾಗಿ ಹಿರಿಯ ಮಹಿಳೆಯನ್ನು ಆಯ್ಕೆ ಮಾಡಬೇಕು ಇದು ಬಹಳ ಮುಖ್ಯವಾದದ್ದು. ಅರ್ಜಿಯನ್ನು ಸಿಎಸ್ಸಿ ಕೇಂದ್ರ ನೆಮ್ಮದಿ ಕೇಂದ್ರ ಅಥವಾ ಹೊಸ ಪಡಿತರ ಚೀಟಿಗೆ ಗೆ ಅರ್ಜಿ ಸಲ್ಲಿಸುವ ಸ್ಥಳದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ನಂತರ ಅದರ ಸ್ವೀಕೃತಿ ಪ್ರತಿಯನ್ನು ತೆಗೆದುಕೊಳ್ಳಬೇಕು. ನಂತರ ಅದನ್ನು ನಿಮ್ಮ ತಾಲೂಕಿನ ಆಹಾರ ಇಲಾಖೆಗೆ ಸಲ್ಲಿಸಬೇಕು ಆಹಾರ ಇಲಾಖೆಗೆ ಸಲ್ಲಿಸಿದ ನಂತರ ಅವರು ನಿಮಗೆ ಚೆಕ್ ಲಿಸ್ಟ್ ಅನ್ನು ಕೊಡುತ್ತಾರೆ. ಅದನ್ನು ತೆಗೆದುಕೊಂಡು ನಿಮ್ಮ ಗ್ರಾಮದಲ್ಲಿರುವ ಅಥವಾ ನಿಮ್ಮ ಮನೆಯ ಸುತ್ತಮುತ್ತ ಇರುವ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮೂರು ಕುಟುಂಬದವರ ಹೆಸರು ಮತ್ತು ಅವರ ಸಹಿಯನ್ನು ಚೆಕ್ ಲಿಸ್ಟ್ ಮೇಲೆ ಮಾಡಿಸಬೇಕು.
ಹಾಗೆ ಪಡಿತರ ಚೀಟಿಯನ್ನು ಮಾಡಿಸುವ ಮುಖ್ಯಸ್ಥರು ಕೂಡ ಚೆಕ್ ಲಿಸ್ಟ್ ಮೇಲೆ ಸಹಿಯನ್ನು ಮಾಡಬೇಕು. ಚೆಕ್ ಲಿಸ್ಟ್ ಮೇಲೆ ಸಹಿ ಹಾಕಿದ ಬಿಪಿಎಲ್ ಕಾರ್ಡ್ ಹೊಂದಿರುವವರ ಆಧಾರ್ ಕಾರ್ಡ್ ಮತ್ತು ಒಬ್ಬರ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿಯನ್ನು ತೆಗೆದುಕೊಂಡು ನಿಮ್ಮ ಊರಿನ ಗ್ರಾಮಲೆಕ್ಕಿಗರನ್ನು ಭೇಟಿ ಮಾಡಿ.
ಅವರು ಚೆಕ್ ಲಿಸ್ಟ್ ಮೇಲೆ ಸಹಿ ಮಾಡಿ ಮತ್ತು ಅದರ ಮೇಲೆ ಇವರಿಗೆ ಇಷ್ಟು ಜಮೀನಿದೆ ಇವರು ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಅರ್ಹರು ಎಂದು ಬರೆಯುತ್ತಾರೆ. ನಂತರ ನೀವು ಮತ್ತೆ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ತಾಲೂಕಿನ ಆಹಾರ ಇಲಾಖೆಗೆ ಸಲ್ಲಿಸಬೇಕು ತದನಂತರ ಆಹಾರ ಇಲಾಖೆಯವರು ದಾಖಲೆಗಳನ್ನು ಪರಿಶೀಲಿಸಿ ನಿಮಗೆ ಬಿಪಿಎಲ್ ಪಡಿತರ ಚೀಟಿಯನ್ನು ನೀಡುತ್ತಾರೆ.
ಈ ವಿಧಾನವನ್ನು ಅನುಸರಿಸುವುದರ ಮೂಲಕ ನೀವು ಬಿಪಿಎಲ್ ಪಡಿತರ ಚೀಟಿಯನ್ನು ಪಡೆದುಕೊಳ್ಳಬಹುದು ಒಂದು ವೇಳೆ ನೀವು ವಿಧಾನವನ್ನು ಅನುಸರಿಸದಿದ್ದರೆ ನಿಮಗೆ ಬಿಪಿಎಲ್ ಪಡಿತರ ಚೀಟಿ ಸಿಗುವುದು ತುಂಬಾ ಕಷ್ಟವಾಗುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗು ತಿಳಿಸಿರಿ.