ಕೃಷಿ ನಮ್ಮ ಭಾರತದಲ್ಲಿ ಸುಮಾರು ಶೇಕಡ 70ರಷ್ಟು ಜನರ ಉದ್ಯೋಗವಾಗಿದೆ. ಹಾಗೆಯೇ ಪ್ರತಿಯೊಬ್ಬ ರೈತನು ಬೆಳೆಯುವ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮಧ್ಯವರ್ತಿಗಳು ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ರೈತರು ಬಿಸಿಲಿನಲ್ಲಿ ಕಷ್ಟಪಟ್ಟು ಬೆಳೆಯುವುದಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಆದ್ದರಿಂದ ಈಗ ಸರ್ಕಾರ ರೈತರ ಅಕೌಂಟಿಗೆ ಹಣವನ್ನು ನೇರವಾಗಿ ಹಾಕುವ ವ್ಯವಸ್ಥೆಯನ್ನು ಮಾಡುತ್ತಿದೆ. ಆದ್ದರಿಂದ ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈ ವರ್ಷ ಸರ್ಕಾರ ರೈತರಿಗೆ ಬೆಳೆಯುವ ಬೆಳೆಗೆ ಸಾಲವನ್ನು ನೀಡುತ್ತದೆ. ಮೊದಲೆಲ್ಲಾ ಅದರ ಬಗ್ಗೆ ತಿಳಿಯಬೇಕೆಂದರೆ ಬ್ಯಾಂಕಿಗೆ ಹೋಗಬೇಕಿತ್ತು. ಆದರೆ ಈಗ ಹಾಗಲ್ಲ ಮೊಬೈಲ್ ಇದ್ದರೆ ಸಾಕು ಎಲ್ಲವನ್ನೂ ತಿಳಿಯಬಹುದು. ಇದರಿಂದ ಯಾವುದೇ ರೀತಿಯ ಮೋಸ ಆಗುವುದಿಲ್ಲ. ಬೆಳೆ ಪರಿಹಾರದ ಹಣವನ್ನು ತಿಳಿಯಬೇಕು ಎಂದರೆ ಒಂದು ವೆಬ್ಸೈಟ್ ಓಪನ್ ಮಾಡಬೇಕು. ಯಾವುದೇ ರೀತಿಯ ವೆಬ್ಸೈಟ್ ಇದ್ದರೆ ಸಾಕು ಆ ವಿಷಯದ ಬಗ್ಗೆ ಮಾಹಿತಿಯನ್ನು ತಿಳಿಯಬಹುದು. ಮೊದಲು parihara.karnataka.gov.in. ಎಂದು ವೆಬ್ಸೈಟ್ ನ್ನು ಬರೆಯಬೇಕು.
ಇದು ಓಪನ್ ಆದಾಗ ರೈತರಿಗೆ ಪರಿಹಾರ ಒದಗಿಸುವ ಬಗ್ಗೆ ತಿಳಿಯುತ್ತದೆ. ಪರಿಹಾರ ಸೇವೆಗಳು ಎಂಬ ಆಯ್ಕೆಯನ್ನು ನೋಡಿ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಹಣ ಸಂದಾಯ ವರದಿ ಒಪನ್ ಆಗುತ್ತದೆ. ಆಧಾರ್ ಐಡಿಯನ್ನು ಬರೆಯಬೇಕು. ನಂತರ ಇಯರ್ ನಲ್ಲಿ 2020 ಮತ್ತು 21 ಎಂದು ಸೆಲೆಕ್ಟ್ ಮಾಡಬೇಕು. ನಂತರ ವಿವರಗಳನ್ನು ಪಡೆಯಲು ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಈಗ ಹಣ ಸಂದಾಯದ ವಿವರ ದೊರೆಯುತ್ತದೆ. ಹಣ ಬಂದಿದ್ದರೆ ಗ್ರಾಮ ಲೆಕ್ಕಿಗರು ಇದನ್ನು ಅಲ್ಲಿ ಎಂಟ್ರಿ ಮಾಡಿರುತ್ತಾರೆ. ಹಣ ಬರದೆ ಇದ್ದರೆ ಎಂಟ್ರಿ ಮಾಡಿರುವುದಿಲ್ಲ.
ಹಾಗೆಯೇ ಊರಿಗೆ ಯಾರು ಯಾರಿಗೆ ಬೆಳೆಪರಿಹಾರ ಬಂದಿದೆ ಎಂದು ನೋಡುವುದಾದರೆ ಇದಕ್ಕೂ ಸಹ ಆಯ್ಕೆ ಇದೆ. ಹೋಮ್ ಪೇಜ್ ಗೆ ಹೋಗಿ ಗ್ರಾಮ ವರ್ಗೀಕರಣವಾರು ಫಲಾನುಭವಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಜಿಲ್ಲೆ, ತಾಲೂಕು ಮತ್ತು ಹಳ್ಳಿಯನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಬೇಕು. ಬೆಳೆ ಹಾನಿಯಾದ ವರ್ಷವನ್ನು ಸೆಲೆಕ್ಟ್ ಮಾಡಬೇಕು. ಹಾಗೆಯೇ ಸೀಸನ್ ನಲ್ಲಿ ಖಾರೀಫ್ ನ್ನು ಸೆಲೆಕ್ಟ್ ಮಾಡಬೇಕು. ಎಲ್ಲಾ ಮುಗಿದ ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಯಾವ ರೈತರಿಗೆ ಎಷ್ಟು ಹಣ ಜಮಾ ಆಗಿದೆ ಎಂದು ತಿಳಿಯಬಹುದು.