ಮನುಷ್ಯ ಬೆಳೆಯುತ್ತಾ ಹೋದಂತೆ ತಗ್ಗಿ ಬಗ್ಗಿ ನಡೆಯುವುದನ್ನು ಕಲಿಯಬೇಕು. ನಾನೇ ಮೇಲು ನನ್ನಿಂದನೇ ಎಲ್ಲಾ ಎನ್ನುವ ಅಹಂಕಾರ ಕೆಲವರಿಗೆ ಇರುತ್ತದೆ. ಕಾರಣ ಅವರ ಅಧಿಕಾರ ಮತ್ತು ದುಡ್ಡು. ಇವೆರಡೂ ಮನುಷ್ಯನನ್ನು ಅಹಂಕಾರಕ್ಕೆ ಹೋಗುವಂತೆ ಮಾಡುತ್ತವೆ. ಹಾಗೆಯೇ ಅದರ ಜೊತೆಗೆ ಸ್ಟಾರ್ ಗಿರಿ ಕೂಡ ಒಂದು. ಆದರೆ ಒಬ್ಬ ನಟನ ಉದಾರತೆಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ದಕ್ಷಿಣ ಭಾರತದ ಟಾಪ್ ನಟರಲ್ಲಿ ಸೂರ್ಯ ಕೂಡ ಒಬ್ಬರು. ಇವರು ಹಲವಾರು ಸಿನೆಮಾಗಳನ್ನು ಮಾಡಿದ್ದಾರೆ. ಇವರು ತನ್ನ 70ಕೋಟಿ ಬೆಲೆಯ ಮನೆಯನ್ನು ಅನಾಥಾಶ್ರಮಕ್ಕೆ ನೀಡಿದ್ದಾರೆ. ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ತನ್ನ ಮನೆಯಲ್ಲಿ ಕೆಲಸ ಮಾಡುವ ಹುಡುಗನಿಗೆ ಮದುವೆ ಫಿಕ್ಸ್ ಆಗಿತ್ತು. ಕೆಲವರು ಅವರಿಗೆ ಸಣ್ಣ ಪುಟ್ಟ ಸಹಾಯ ಮಾಡುತ್ತಾರೆ. ಆದರೆ ಸೂರ್ಯ ಹಾಗೆ ಮಾಡಲಿಲ್ಲ. ತಾನೇ ಮುಂದೆ ನಿಂತು ಸ್ವಂತ ತಮ್ಮನಂತೆ ಮದುವೆ ಮಾಡಿದ್ದಾರೆ. ಮದುವೆಯ ಎಲ್ಲಾ ಖರ್ಚುಗಳನ್ನು ಇವರೇ ನೋಡಿಕೊಂಡಿದ್ದಾರೆ.
ಎರಡು ದಿನ ಶೂಟಿಂಗ್ ಗೆ ರಜೆ ಹಾಕಿ ಮದುವೆ ಸುಗಮವಾಗಿ ನಡೆಯುವಂತೆ ನೋಡಿಕೊಂಡಿದ್ದಾರೆ. ಈ ಮದುವೆಗೆ ಸೂರ್ಯ ಅವರ ಕುಟುಂಬದ ಎಲ್ಲಾ ಸದಸ್ಯರು ಭಾಗಿಯಾಗಿದ್ದಾರೆ. ಮದುವೆಯಲ್ಲಿ ಭಾಗವಹಿಸಿ ಲವಲವಿಕೆಯಿಂದ ತಿರುಗಾಡುತ್ತಿದ್ದರು. ಇದನ್ನು ನೋಡಿದ ಜನ ಈ ನಟ ಸಿನೆಮಾದಲ್ಲಿ ಮಾತ್ರ ಹೀರೊ ಅಲ್ಲಾ ನಿಜ ಜೀವನದಲ್ಲಿ ಕೂಡ ಹೀರೊ ಆಗಿದ್ದಾರೆ ಎಂದು ಮಾತನಾಡಿಕೊಂಡಿದ್ದರು. ಮನೆಯ ಹಿರಿಯನಂತೆ ತಾಳಿಯನ್ನು ಸಹ ಅವರೇ ಖರೀದಿ ಮಾಡಿ ತಂದಿದ್ದರು.
ಸೂರ್ಯ ಅವರ ಈ ಪ್ರೀತಿ ನೋಡಿ ಮನೆಕೆಲಸದವನು ಕಣ್ಣೀರು ಹಾಕಿದ್ದಾನೆ. ಹೀಗೆ ತಮ್ಮಂತೆ ತಮ್ಮ ಜೊತೆ ಇರುವವರು ಕೂಡ ಖುಷಿಯಾಗಿ ಇರಬೇಕು ಎಂದು ಬಯಸುವವರು ಬಹಳ ವಿರಳ. ಈಗಿನ ಕಾಲದಲ್ಲಿ ಹಣವೇ ಮುಖ್ಯ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಇವರು ಹಾಗಲ್ಲ. ಹಣ ಮುಖ್ಯವಲ್ಲ ಬೇರೆಯವರ ಸಂತೋಷ ಮುಖ್ಯ ಎಂದು ಬಯಸಿ ಬದುಕುತ್ತಾರೆ. ಇವರು ನೂರು ಕಾಲ ಸುಖವಾಗಿ ಬಾಳಲಿ ಎಂದು ನಾವೆಲ್ಲರೂ ಬಯಸೋಣ.