ದಿನಾಲೂ ಎಲ್ಲರ ಮನೆಯಲ್ಲೂ ಪೂಜೆ ಮಾಡುತ್ತಾರೆ. ಪೂಜೆ ಆಗದೆ ಕೆಲವರ ಮನೆಯಲ್ಲಿ ಬೆಳಿಗ್ಗೆ ಉಪಹಾರ ಸಹ ಸೇವನೆ ಮಾಡುವುದಿಲ್ಲ. ಪೂಜೆ ಮಾಡಬೇಕು ಎನ್ನುವುದು ಹಿರಿಯರು ನಮಗೆ ಹೇಳಿಕೊಟ್ಟು ಹೋದ ಒಂದು ಒಳ್ಳೆಯ ಕಾರ್ಯ. ಮನೆಯಲ್ಲಿ ಹಿರಿಯರ ಭಾವಚಿತ್ರವನ್ನು ಯಾವ ಕಡೆ ಇಡಬೇಕು ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ದೇವರ ಭಾವಚಿತ್ರಕ್ಕೆ ಪೂಜೆ ಮಾಡುತ್ತಾರೆ. ಹಿರಿಯರ ಭಾವಚಿತ್ರಗಳನ್ನು ಹೊರಗೆ ನೇತು ಹಾಕಿರುತ್ತಾರೆ. ಆದರೆ ಹಿರಿಯರ ಭಾವಚಿತ್ರಕ್ಕೆ ಪೂಜೆ ಮಾಡುವವರು ಬಹಳ ಕಡಿಮೆ. ಹಿರಿಯರ ಭಾವಚಿತ್ರಕ್ಕೂ ಸಹ ಪೂಜೆ ಮಾಡಬೇಕು. ಹಿರಿಯರ ಭಾವಚಿತ್ರವನ್ನು ದಕ್ಷಿಣಕ್ಕೆ ಇಡಬೇಕು. ಸೂರ್ಯೋದಯ ಎದುರಿಗೆ ಆಗುತ್ತಿದ್ದರೆ ಬಲಗೈ ದಕ್ಷಿಣ ದಿಕ್ಕು ಆಗುತ್ತದೆ. ಆ ದಿಕ್ಕಿನ ಗೋಡೆಯಲ್ಲಿ ಹಿರಿಯರ ಭಾವಚಿತ್ರವನ್ನು ಇಟ್ಟು ಪೂಜೆ ಮಾಡಬೇಕು.

ಜ್ಞಾನಕೋಶ ಅಜ್ಜನಿಂದ ಮಗನಿಗೆ ಮತ್ತು ಮಗನಿಂದ ಮೊಮ್ಮಗನಿಗೆ ಬರುತ್ತದೆ. ಸಂಸ್ಕಾರ ಎನ್ನುವುದನ್ನು ಹಿರಿಯರು ಕಲಿಸುತ್ತಾರೆ. ಹರಿಯುವ ನೀರು ಪರಿಶುದ್ಧವಾಗಿ ಇರುತ್ತದೆ. ಏಕೆಂದರೆ ಅದು ಎಷ್ಟೋ ಬೆಟ್ಟ ಗುಡ್ಡಗಳನ್ನು ದಾಟಿಕೊಂಡು ಗಿಡಮೂಲಿಕೆಗಳ ಸಂದಿಯಲ್ಲಿ ಅದು ಹರಿದು ಬರುತ್ತದೆ. ಅದಕ್ಕಾಗಿಯೇ ನದಿಯ ನೀರು ಅಷ್ಟೊಂದು ಪವಿತ್ರವಾಗಿರುತ್ತದೆ. ಹಾಗೆಯೇ ನಮ್ಮ ಹಿರಿಯರು ಕೂಡ ಮುತ್ತಜ್ಜನಿಂದ ಅಜ್ಜ, ಅಜ್ಜನಿಂದ ಅಪ್ಪ ಹಾಗೂ ಅಪ್ಪನಿಂದ ಮಗನಿಗೆ ವಿಚಾರಧಾರೆಗಳು ಬರುತ್ತದೆ. ಹಾಗೆಯೇ ಸಂಸ್ಕಾರ, ಗುಣಗಳು ಬರುತ್ತವೆ.

ಯಾವುದೇ ಕಾರ್ಯವನ್ನು ಮಾಡುವಾಗ ಹಿರಿಯರನ್ನು ನೆನೆಸಬೇಕು. ಹಿರಿಯರನ್ನು ನೆನೆಸದೇ ಯಾವ ಕಾರ್ಯವನ್ನು ಮಾಡಬಾರದು. ಕೆಲವರು ನಾನು ನನ್ನ ತಂದೆಯ ಯಾವುದೇ ಸಹಾಯವಿಲ್ಲದೆ ನನ್ನ ಕಾಲಿನ ಮೇಲೆ ನಾನು ನಿಂತುಕೊಂಡಿದ್ದೇನೆ ಎಂದು ಹೇಳುತ್ತಾರೆ. ಆದರೆ ಅದು ಸುಳ್ಳು. ಏಕೆಂದರೆ ವಿದ್ಯೆ ಮತ್ತು ದೇಹ ತಂದೆಯಿಂದ ಬಂದಿದೆ. ಯಾರ ಜಾತಕದಲ್ಲಿ ಶನಿರಾಹು, ಶನಿಕೇತು ಸಂಬಂಧ ಇದೆಯೋ ಅಲ್ಲಿ ಪಿತೃಶಾಪವಿರುತ್ತದೆ. ಆದ್ದರಿಂದ ದಿನವೂ ಹಿರಿಯರ ಭಾವಚಿತ್ರಕ್ಕೆ ಒಂದು ದೀಪ ಹಚ್ಚಿ ನಮಸ್ಕಾರ ಮಾಡುವುದರಿಂದ ಪಿತೃಶಾಪದಿಂದ ಮುಕ್ತಿ ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!