ವಾಸ್ತುಪ್ರಕಾರ ಮನೆಯಲ್ಲಿ ಓಡುತ್ತಿರುವ ಕುದುರೆ ಚಿತ್ರ ಹಾಕಿದ್ರೆ ಏನ್ ಲಾಭ ಗೊತ್ತೆ

0 123

ವಾಸ್ತು ಬಗ್ಗೆ ಬಹಳಷ್ಟು ಜನರಿಗೆ ನಂಬಿಕೆಯಿದೆ. ವಾಸ್ತು ಪದ್ಧತಿಯಲ್ಲಿ ಮುಖ್ಯವಾಗಿ ಬರುವ ಏಳು ಕುದುರೆಗಳು ಪ್ರಮುಖವಾಗಿದೆ. ಯಾವ ಬಣ್ಣದ ಕುದುರೆಗಳ ಫೋಟೋವನ್ನು ಹಾಕಿದರೆ ಶುಭ, ಯಾವ ದಿಕ್ಕಿನಲ್ಲಿ ಹಾಕಿದರೆ ಒಳ್ಳೆಯ ಫಲ ಸಿಗುತ್ತದೆ ಅಲ್ಲದೆ ಬಿಸಿನೆಸ್ ನಲ್ಲಿ ಲಾಭ ಪಡೆಯಲು ಯಾವ ಬಣ್ಣದ ಕುದುರೆಯ ಫೋಟೋವನ್ನು ಹಾಕಬೇಕಾಗುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬಹಳ ಮನೆಗಳಲ್ಲಿ ಏಳು ಕುದುರೆಗಳ ಫೋಟೋಗಳನ್ನು ಹಾಕಿರುತ್ತಾರೆ ಆದರೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರುವುದಿಲ್ಲ. ವಾಸ್ತುಶಾಸ್ತ್ರದಲ್ಲಿ ಏಳು ಕುದುರೆಗಳ ಫೋಟೋ ಋಣಾತ್ಮಕ ಮತ್ತು ಧನಾತ್ಮಕ ಶಕ್ತಿಯನ್ನು ಬಿಂಬಿಸುತ್ತದೆ. ಏಳು ಕುದುರೆಗಳ ಫೋಟೋ ವೇಗ ಮತ್ತು ಸ್ಥಿರತೆಯನ್ನು ಹೊಂದಿರುತ್ತದೆ ಆದ್ದರಿಂದ ಮನೆಯಲ್ಲಿ ಹಾಕಿಕೊಳ್ಳುವುದರಿಂದ ನಾವು ಅಂದುಕೊಂಡಿರುವ ಕೆಲಸ ವೇಗವಾಗಿ ಸಾಗುತ್ತದೆ ಮತ್ತು ಸ್ಥಿರತೆಯಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ. ಏಳು ಅದೃಷ್ಟದ ಸಂಖ್ಯೆಯಾಗಿದ್ದು ಏಳು ಕುದುರೆಗಳ ಫೋಟೋವನ್ನು ಮನೆಯಲ್ಲಿ ಹಾಕುವುದು ಅದೃಷ್ಟ ತರುತ್ತದೆ ಎಂದು ಹೇಳಲಾಗುತ್ತದೆ.

ಭಗವದ್ಗೀತೆಯಲ್ಲಿ ಭಗವಾನ್ ಸೂರ್ಯದೇವನನ್ನು ಏಳು ಅಶ್ವಗಳ ರಥದಲ್ಲಿ ಚಿತ್ರಿಸಲಾಗಿದೆ, ಕುದುರೆ ಶಕ್ತಿ ಮತ್ತು ಯಶಸ್ಸಿನ ಸಂಕೇತವಾಗಿರುವುದರಿಂದ ಏಳು ಕುದುರೆಗಳ ಫೋಟೋವನ್ನು ಮನೆಯಲ್ಲಿ ಹಾಕುವುದರಿಂದ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ. ಏಳು ಕುದುರೆಗಳ ಫೋಟೋ ಮನೆಯಲ್ಲಿ ಹಾಕುವುದರಿಂದ ಆ ಮನೆಯಲ್ಲಿ ಧನಾತ್ಮಕ ಚಿಂತನೆ ಕಂಡುಬರುತ್ತದೆ. ಫೋಟೋದಲ್ಲಿ ಏಳು ಕುದುರೆಗಳು ಬಿಳಿ ಬಣ್ಣದ್ದಾಗಿದ್ದರೆ ಯಶಸ್ಸು ಸಿಗುತ್ತದೆ, ಬ್ರೌನ್ ಬಣ್ಣದ ಕುದುರೆಗಳಿರುವ ಫೋಟೋಗಳನ್ನು ಬಿಸಿನೆಸ್ ಮಾಡುವ ಸ್ಥಳಗಳಲ್ಲಿ ಹಾಕುವುದರಿಂದ ಒಳ್ಳೆಯದಾಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ ಮತ್ತು ಈ ಫೋಟೋವನ್ನು ಮನೆಯಲ್ಲಾಗಲಿ, ಕೆಲಸದ ಸ್ಥಳಗಳಲ್ಲಾಗಲಿ ಪೂರ್ವದಿಕ್ಕಿಗೆ ಹಾಕಿಕೊಂಡರೆ ಒಳ್ಳೆಯದು ಅಲ್ಲದೆ ಸಂಪತ್ತು ಹೆಚ್ಚಾಗುತ್ತಾ ಹೋಗುತ್ತದೆ. ಒಳ್ಳೆಯ ಹೆಸರು ಮಾಡಬೇಕು, ಕೀರ್ತಿ ತರಬೇಕು ಎಂಬ ಆಸೆ ಇದ್ದರೆ ಏಳು ಕುದುರೆಗಳ ಫೋಟೋವನ್ನು ಮನೆಯ ದಕ್ಷಿಣ ದಿಕ್ಕಿಗೆ ಹಾಕಿಕೊಳ್ಳುವುದು ಒಳ್ಳೆಯದು. ಈ ಫೋಟೋವನ್ನು ಮನೆ ಅಥವಾ ಕೆಲಸದ ಸ್ಥಳದಲ್ಲಿ ಕಿಟಕಿಗಳ ವಿರುದ್ಧವಾಗಿ ಹಾಕಿಕೊಳ್ಳುವುದರಿಂದಲೂ ಒಳ್ಳೆಯದಾಗುತ್ತದೆ.

ಏಳು ಕುದುರೆಗಳಿರುವ ಫೋಟೋವನ್ನು ಮನೆಯಲ್ಲಿ ಹಾಕುವಾಗ ದಾರ ಕಟ್ಟಿರಬಾರದು ಒಂದುವೇಳೆ ದಾರ ಕಟ್ಟಿದರೆ ನಿಮ್ಮ ಮನೆಯಲ್ಲಿ ಹಣ ಹೆಚ್ಚಾಗುವುದಿಲ್ಲ ಕಡಿಮೆಯಾಗುತ್ತಾ ಹೋಗುತ್ತದೆ. ಈ ಫೋಟೋದಲ್ಲಿ ಕುದುರೆಗಳು ಭೂಮಿಯ ಮೇಲೆ ಓಡುತ್ತಿರುವಂತೆ ಇರಬೇಕು, ಸ್ಪಷ್ಟವಾಗಿ ಗೋಚರವಾಗಿರಬೇಕು ಮತ್ತು ಫೋಟೋದಲ್ಲಿ ಕುದುರೆಗಳು ಸಂತೋಷದಿಂದ, ಧೈರ್ಯದಿಂದ ಓಡುತ್ತಿರಬೇಕು. ಈ ಫೋಟೋವನ್ನು ಮನೆಯ ಹಾಲ್ ನಲ್ಲಿ ಮಾತ್ರ ಹಾಕಿಕೊಳ್ಳಬೇಕು ಬೇರೆ ಯಾವುದೇ ರೂಮ್ ಗಳಲ್ಲಿ ಹಾಕಬಾರದು. ಬೇರೆ ಬೇರೆ ಬಣ್ಣದ ಕುದುರೆಗಳು ಬೇರೆ ಬೇರೆ ದಿಕ್ಕಿನಲ್ಲಿ ಓಡುತ್ತಿರುವ ಫೋಟೋಗಳನ್ನು ಹಾಕಬಾರದು. ವಾಸ್ತು ಪದ್ಧತಿಯಲ್ಲಿ ನಂಬಿಕೆ ಇರುವವರು ಈ ಮೇಲೆ ಹೇಳಿದಂತೆ ಬಿಳಿ ಬಣ್ಣದ ಒಂದೇ ದಿಕ್ಕಿನಲ್ಲಿ ಓಡುತ್ತಿರುವ ಏಳು ಕುದುರೆಗಳ ಫೋಟೋವನ್ನು ನಿಮ್ಮ ಮನೆಗಳಲ್ಲಿ ಹಾಕಿಕೊಳ್ಳಬಹುದು ಇದರಿಂದ ಯಶಸ್ಸು ಲಭಿಸುತ್ತದೆ. ಮನೆಯಲ್ಲಿ ಒಂದು ಕುದುರೆ ಇರುವ ಫೋಟೋವನ್ನು ಯಾವುದೇ ಕಾರಣಕ್ಕೂ ಹಾಕಬಾರದು ಇದರಿಂದ ಸಂಪತ್ತು ಹೆಚ್ಚಾಗುವುದಿಲ್ಲ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.