ಮನುಷ್ಯನಿಗೆ ತಾನು ಜೀವಿಸಲು ಬೇಕಾದ ಪ್ರಮುಖ ಅಂಶಗಳೆಂದರೆ ಗಾಳಿ ಮತ್ತು ನೀರು ಯಾಕಂದ್ರೆ ಮನುಷ್ಯ ಊಟವಿಲ್ಲದೆ ಬದುಕಬಹುದು ಆದರೆ ಗಾಳಿ ಇಲ್ಲದೆ ಬದುಕುವುದಿಲ್ಲ ಇನ್ನೂ ನೀರಿಲ್ಲದೇ ಸಾಧ್ಯವೇ ಇಲ್ಲ ದಿನನಿತ್ಯದ ನಮ್ಮ ಕಾರ್ಯಗಳಲ್ಲಿ ನೀರು ಒಂದು ಅತ್ಯಮೂಲ್ಯ ಅಂಶವಾಗಿದೆ, ಯಾಕಂದ್ರೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವಷ್ಟರಲ್ಲಿ ನಾವು ಅದೆಷ್ಟೋ ನೀರನ್ನು ನಮಗರಿವಿಲ್ಲದೆಯೇ ಉಪಯೋಗಿಸುತ್ತೇವೆ ನೀರಿಲ್ಲದೇ ನಮ್ಮ ಜೀವನವನ್ನು ಊಹಿಸಲು ಸಾಧ್ಯವೇ ಇಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಭೂಮಿಯ ಅಂತರ್ಜಲದ ಮಟ್ಟ ಕಡಿಮೆಯಾಗಿ ನೀರಿನ ಅಭಾವವುಂಟಾಗಿದೆ ಅದರತ್ತ ಗಮನಹರಿಸುವವರ ಸಂಖ್ಯೆಯೂ ಕೂಡ ಕಡಿಮೆಯಾಗಿದೆ ಅದಿರಲಿ ಬಿಡಿ ಆದರೆ ನಾವು ದಿನನಿತ್ಯ ಉಪಯೋಗಿಸುವ ನೀರು ನಮಗೆ ಯಾವ ಯಾವ ದೃಷ್ಟಿಯಿಂದ ಬಹಳ ಉಪಯೋಗಕಾರಿ ಎಂಬುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆದುಕೊಂಡು ಒಂದು ಲೋಟ ಶುದ್ಧವಾದ ನೀರನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆಯಲ್ಲಿನ ಸಮಸ್ಯೆಗಳು ದೂರವಾಗುತ್ತವೆ ಅದರಲ್ಲಿಯೂ ತಾಮ್ರದ ಪಾತ್ರೆಯಲ್ಲಿ ಶೇಖರಿಸಿ ಇಟ್ಟ ನೀರನ್ನು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಹೆಚ್ಚು ಪ್ರಯೋಜನಕಾರಿಯೂ ಹೌದು ಮತ್ತು ಬೆಳಿಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿನೀರನ್ನು ಕುಡಿಯುವುದರಿಂದ ದೇಹದಲ್ಲಿ ಬೇಡವಾದ ಕೊಬ್ಬು ಕರಗುತ್ತದೆ, ಇನ್ನೂ ಬಾಯಾರಿಸಿದಾಗ ಪ್ರತೀ ಬಾರಿಯೂ ಬಿಸಿ ನೀರನ್ನೆ ಕುಡಿಯುವುದರಿಂದ ನಿಮ್ಮ ದೇಹದ ತೂಕದಲ್ಲಿ ಗಣನೀಯ ಇಳಿಕೆಯನ್ನು ಕಾಣಬಹುದು.
ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಉಮ್ಮಸ್ಸು ಉತ್ಸಾಹ ಹೆಚ್ಚಾಗುತ್ತದೆಯಲ್ಲದೇ ನಿಮ್ಮ ದೇಹದಲ್ಲಿನ ಪ್ರತೀ ಅಂಗಾಗಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಇದು ಸಹಕಾರಿಯಾಗಿದೆ, ಇನ್ನು ರಾತ್ರಿ ವೇಳೆಯಲ್ಲಿ ತಾವು ಮಲಗುವ ಮುಂಚೆ ತಣ್ಣೀರಿನಲ್ಲಿ ಸ್ನಾನ ಮಾಡಿ ಮಲಗುವುದರಿಂದ ಚೆನ್ನಾಗಿ ನಿದ್ರೆ ಮಾಡಬಹುದು ಆದರೇ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದಲ್ಲ ಇನ್ನು ತಣ್ಣೀರಿನ ಸ್ನಾನಕ್ಕೆ ಹೊಂದಿಕೊಳ್ಳದವರು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಒಳಿತು.
ಮನುಷ್ಯನ ದೇಹದಲ್ಲಿ ಆತನ ದೇಹಕ್ರಿಯೆಗಳು ಸರಾಗವಾಗಿ ನಡೆಯಬೇಕಾದರೆ ನೀರು ಅತ್ಯವಶ್ಯಕ ಆದ್ದರಿಂದ ದಿನಕ್ಕೆ ಎಳರಿಂದ ಎಂಟು ಲೀಟರ್ ನೀರನ್ನು ಕುಡಿಯುವುದು ದೇಹಕ್ಕೆ ಒಳ್ಳೆಯದು ಮತ್ತು ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಪ್ರಯೋಜನಕಾರಿ ಯಾವುದೇ ಕಾರಣಕ್ಕೂ ಆಯಾಸವಾಗಿರುವ ಸಂದರ್ಭದಲ್ಲಿ ಊಟ ಮಾಡಿದ ನಂತರ ಸ್ನಾನ ಮಾಡುವುದು ಒಳ್ಳೆಯದಲ್ಲ
ಪ್ರತೀ ದಿನ ಬೆಳಿಗ್ಗೆ ತಣ್ಣೀರಿನ ಸ್ನಾನ ಮಾಡುವುದರಿಂದ ನಿಮ್ಮ ನರಮಂಡಲವು ಜಾಗೃತವಾಗುವುದಲ್ಲದೇ ನಿಮ್ಮ ದೇಹದ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಇದು ಸಹಾಯಕಾರಿಯಾಗಿದೆ ಅಲ್ಲದೇ ತಲೆಗೆ ತಣ್ಣೀರಿನ ಸ್ನಾನವು ಕೂದಲು ಚೆನ್ನಾಗಿ ಬೆಳೆಯಲು ಮತ್ತು ತಲೆಯಲ್ಲಿನ ಹೊಟ್ಟು ನಿವಾರಣೆಯಾಗಲು ಸಹಕಾರಿಯಾಗಿದೆ
ಒಂದು ಲೋಟ ನೀರಿಗೆ ಅರ್ಧ ಹೋಳು ನಿಂಬೆ ರಸ ಒಂದು ಚಿಟಿಕೆ ಉಪ್ಪು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುವುದರಿಂದ ಉರಿಮೂತ್ರ ಕಡಿಮೆಯಾಗುತ್ತದೆ ಉಳುಕಿರುವ ಅಥವಾ ಪೆಟ್ಟು ಬಿದ್ದು ಊದಿಕೊಂಡಿರುವ ಜಾಗಕ್ಕೆ ಬಿಸಿನೀರಿನ ಶಾಖ ಕೊಡುವುದರಿಂದ ಊತ ಕಡಿಮೆಯಾಗಿ ನೋವು ಶಮನವಾಗುತ್ತದೆ ಹೊಟ್ಟೆ ತೊಳೆಸುವುದು ಮತ್ತು ವಾಕರಿಕೆ ಬರುವಂತಹ ಸಂದರ್ಭದಲ್ಲಿ ರೋಗಿಯ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕುವುದರಿಂದ ಅವನ ವಾಕರಿಕೆ ಮತ್ತು ಹೊಟ್ಟೆ ತೊಳೆಸುವಿಕೆ ಕಡಿಮೆಯಾಗುತ್ತದೆ
ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಶೀತ ನೆಗಡಿ ಕಡಿಮೆಯಾಗುತ್ತದೆ ತಲೆಗೆ ಬಿಸಿನೀರು ಬೀಳುವುದರಿಂದ ಕಣ್ಣು ಉರಿ ನಿವಾರಣೆಯಾಗುತ್ತದೆ ಆದರೇ ತುಂಬಾ ಸುಡುವ ನೀರನ್ನು ತಲೆಯ ಮೇಲೆ ಹಾಕಿಕೊಳ್ಳಬಾರದು ಹಾಗೂ ಬಿಸಿ ನೀರಿನಲ್ಲಿ ಸ್ನಾನ ಮಾಡಿದ ನಂತರ ಗಾಳಿಯಲ್ಲಿ ಹೋಗಬಾರದು ಬಿಸಿನೀರಿನ ಸ್ನಾನದ ನಂತರ ಮಲಗಿಕೊಳ್ಳುವುದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ ಮತ್ತು ಆಯಾಸ ಪರಿಹಾರವಾಗುತ್ತದೆ