ಬೇಸಿಗೆ ಆರಂಭವಾದ ಕೂಡಲೇ ಸಾಂಕ್ರಾಮಿಕ ರೋಗವಾದ ಸಿಡುಬು ಅಥವಾ ಚಿಕನ್ಪಾಕ್ಸ್ ಹರಡುವ ಕಾಲ. ‘ವೆರಿಸೆಲ್ಲಾ ಜೋಸ್ಟರ್’ ಎಂಬ ವೈರಾಣುವಿನಿಂದ ಬರುವ ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಬಹಳ ಸುಲಭವಾಗಿ ಹರಡುತ್ತದೆ. ಇದರಲ್ಲಿ ಶರೀರದ ಮೇಲೆ ಚುಕ್ಕೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಚಿಕನ್ ಪಾಕ್ಸ್ ಸೋಂಕಾಗಿರುವ ವ್ಯಕ್ತಿಯ ಗಾಯದ ಸ್ಪರ್ಶದಿಂದ ಅಥವಾ ಅವರು ಬಳಸಿದ ವಸ್ತುಗಳನ್ನು ಉಪಯೋಗಿಸುವುದರಿಂದ ಈ ರೋಗವು ಹರಡುತ್ತದೆ.
ರೋಗಿಯು ಕೆಮ್ಮುವುದರಿಂದ, ಸೀನುವುದರಿಂದ ವೈರಾಣುಗಳು ಗಾಳಿಯಲ್ಲಿ ಸೇರಿ ಬೇರೆಯವರಿಗೆ ಉಸಿರಾಟದ ಮುಖಾಂತರ ಹರಡುತ್ತದೆ. ಸಿಡುಬು ಚುಚ್ಚುಮದ್ದು ಈ ರೋಗವನ್ನು ತಡೆಯಲು ಸಹಾಯ ಮಾಡಿದರೂ ಸಂಪೂರ್ಣವಾಗಿ ಗುಣವಾಗಲಾರದು. ಅಲ್ಲದೆ ಮತ್ತೆ ಕೆಲವರಿಗೆ ಮರಕಳಿಸುವ ಸಾಧ್ಯತೆಯೂ ಇದೆ. ಇದು ಸೌಮ್ಯವಾಗಿದ್ದರೆ ಅಪಾಯವಿಲ್ಲ. ಆದರೆ ಕೆಲವರಿಗೆ ಗಂಭೀರ ಸ್ವರೂಪ ಪಡೆದರೆ ತಕ್ಷಣ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಹಾಗೇ ಬಿಟ್ಟರೆ ರೋಗಿಯ ಪ್ರಾಣಕ್ಕೂ ಸಂಚಕಾರವಾಗುವ ಅಪಾಯವೂ ಇದೆ. ಇವುಗಳಿಗೆ ಸುಲಭಾವದ ಮನೆಮದ್ದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಚಿಕನ್ಪಾಕ್ಸ್ ಸಾಮಾನ್ಯವಾಗಿ 10 ರಿಂದ 12 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಾಣುವ ಕಾಯಿಲೆ, 2 ವರ್ಷದ ಒಳಗಿನ ಮಕ್ಕಳು ಹಾಗೂ 12 ವರ್ಷದ ಮೇಲ್ಪಟ್ಟವರಲ್ಲಿಯೂ ಇದು ತೀವ್ರತರವಾಗಿ ಕಾಣಿಸಿಕೊಳ್ಳಬಹುದು. ಗರ್ಭಿಣಿ ಸ್ತ್ರೀಯರಿಗೆ, ಹದಿಹರೆಯದವರಿಗೆ, ವಯಸ್ಕರಿಗೆ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಿಗೆ ಅಂದರೆ ಎಚ್ಐವಿ, ಕ್ಯಾನ್ಸರ್, ಕೀಮೋಥೆರಪಿ ಮತ್ತು ಸ್ಟೀರಾಯ್ಡ್ ತೆಗೆದುಕೊಳ್ಳುವವರಿಗೆ ಬೇಗನೆ ತಗಲುವ ಸಾಧ್ಯತೆ ಹೆಚ್ಚು. ಜತೆಗೆ ಇವರಲ್ಲಿ ಕಾಯಿಲೆ ಗಂಭೀರ ಸ್ವರೂಪದಲ್ಲಿರುತ್ತದೆ. ಜೀವನದಲ್ಲಿ ಒಮ್ಮೆ ಚಿಕನ್ ಪಾಕ್ಸ್ ಬಂದು ಹೋಗಿದ್ದರೆ ಸಾಮಾನ್ಯವಾಗಿ ವೈರಸ್ ಇನ್ನೊಮ್ಮೆ ಕಾಣಿಸಿಕೊಳ್ಳುವ ಉದಾಹರಣೆ ಬಹಳ ಕಡಿಮೆ.
ವೈರಾಣುವಿನಿಂದ ಬರುವ ಕಾಯಿಲೆಯಾದರೂ ಸಿಡುಬು ಗುಳ್ಳೆಗಳ ದ್ರವವನ್ನು ಮುಟ್ಟುವುದರಿಂದ, ರೋಗಿಯು ನಿಮ್ಮ ಸನಿಹದಲ್ಲಿ ಸೀನಿದಾಗ ಅಥವಾ ಕೆಮ್ಮಿದಾಗ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ, ಹಿಂದೆ ಬಂದಿರದಿದ್ದರೆ ಅಂಥವರಿಗೆ ಸುಲಭವಾಗಿ ಬರಬಹುದು. ಸಿಡುಬು ಅಥವಾ ಚಿಕನ್ ಪಾಕ್ಸ್ ಗಂದೆಗಳನ್ನು ಕಡಿಮೆ ಮಾಡಲು ಬೇವಿನ ಎಲೆ ಬಹಳ ಸಹಾಯಕಾರಿ. ಸಿಡುಬು ಬಂದಾಗ ಹಾಸಿಗೆಯ ಮೇಲೆ ಬೇವಿನ ಎಲೆಗಳನ್ನು ಹರಡಿ ಅದರ ಮೇಲೆ ಮಲಗಬೇಕು ಮತ್ತು ಗಂದೆಗಳು ಒಣಗಬೇಕಾದರೆ ಬೇವಿನ ಎಲೆಗಳನ್ನು ನೀರಲ್ಲಿ ಅರೆದು ಗಂದೆಗಳಿಗೆ ಲೇಪ ಮಾಡಿದರೆ ಗಂದೆಗಳು ನಿವಾರಣೆಯಾಗುತ್ತವೆ.
ರಕ್ತ ಚಂದನವನ್ನು ಪೇಸ್ಟ್ ಮಾಡಿ ಸಿಡುಬಿನ ಗಂದೆಗಳ ಮೇಲೆ ಹಚ್ಚಿದರೆ ಗಂದೆಗಳು ಬೇಗ ಒಣಗುತ್ತವೆ ಮತ್ತು ಕಲೆಗಳು ಉಳಿಯುವುದಿಲ್ಲ. ಸಿಡುಬಿನ ಜತೆ ವಾಂತಿ ಆಗುತ್ತಿದ್ದರೆ ಪುದಿನಾ ಎಲೆಗಳನ್ನು ಅಗಿಯಬೇಕು. ಆಗ ವಾಂತಿ ನಿಲ್ಲುತ್ತದೆ ಮತ್ತು ಜೀರ್ಣಶಕ್ತಿ ಹೆಚ್ಚಾಗಿ ಜ್ವರ ಕಡಿಮೆಯಾಗುತ್ತದೆ. ಕ್ಯಾರೆಟ್ ಮತ್ತು ಕೊತ್ತಂಬರಿ ಸೊಪ್ಪನ್ನು ಬೇಯಿಸಿ ಸೂಪ್ ಮಾಡಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ಬೇಗ ಹೆಚ್ಚಾಗುತ್ತದೆ. ಜ್ವರ ಶಮನವಾಗಿ ಗಂದೆಗಳು ಒಣಗಿದ ಮೇಲೆ ಬಾದಾಮಿ ಎಣ್ಣೆ ಮತ್ತು ಶ್ರೀಗಂಧದ ಎಣ್ಣೆಯನ್ನು ಬೆರೆಸಿ ಒಣಗಿದ ಗಂದೆಗಳ ಮೇಲೆ ದಿನಾ ಮಸಾಜ್ ಮಾಡಿದರೆ ಕಲೆಗಳು ಮಾಯವಾಗುತ್ತವೆ. ಸಿಡುಬು ಬಂದಾಗ ಆಹಾರದಲ್ಲಿ ಸಪ್ಪೆ ಊಟ ಮಾಡಬೇಕು ಮತ್ತು ಉಪ್ಪು , ಹುಳಿ ಮತ್ತು ಖಾರದ ಆಹಾರ ನಿಲ್ಲಿಸಿ ಲಘು ಆಹಾರ ಸೇವಿಸಬೇಕು.
ಕೆಲವು ಕಡೆಗಳಲ್ಲಿ ಸಿಡುಬು ಬಂದಾಗ ಮೂರು ದಿನಗಳ ಕಾಲ ಸ್ನಾನ ಮಾಡುವ ಪದ್ಧತಿ ಇಲ್ಲ. ಇನ್ನೂ ಕೆಲವು ಕಡೆ ಸಿಡುಬು ಬಂದ ಮೂರು ದಿನಗಳ ನಂತರ ಬೇವಿನ ಸೊಪ್ಪಿನ ರಸದ ಸ್ನಾನ ಮಾಡುವ ಪದ್ಧತಿ ಇದೆ. ಹೀಗೆ ಸ್ನಾನ ಮಾಡುವಾಗ ಕಹಿಬೇವಿನ ಸೊಪ್ಪನ್ನು ಬಿಸಿ ನೀರಿಗೆ ಹಾಕಿ ಸ್ವಲ್ಪ ಕುದಿಸಿ ನಂತರ ಅದಕ್ಕೆ ಸ್ವಲ್ಪ ಅರಿಶಿನವನ್ನು ಸಹ ಹಾಕಿ ಸ್ನಾನ ಮಾಡಿದರೆ ಬಹಳ ಉತ್ತಮ. ಹಾಗೇ ಮೈ ಗೆ ಎಣ್ಣೆ ಹಚ್ಚಲು ಬೇರೆ ಎಣ್ಣೆ ಬಳಕೆ ಮಾಡಬಾರದು ಬೇವಿನ ಎಣ್ಣೆಯನ್ನೆ ಹಚ್ಚಿ ಸ್ನಾನ ಮಾಡಬೇಕು. ಸಿಡುಬು ಬಂದವವರ ಹಾಸಿಗೆಯ ಬಟ್ಟೆಗಳನ್ನು ಪ್ರತೀದಿನ ತೊಳೆಯಬೇಕು. ಅವರಿಗೆ ಬೇವಿನ ಹಾಸಿಗೆ ಮಾಡಿದರೆ ಇನ್ನೂ ಉತ್ತಮ. ಇನ್ನೂ ಉದ್ದು ಹಾಕಿದ ಪದಾರ್ಥ ಮತ್ತು ಕರಿಬಾಳೆಹನ್ನು ಇವುಗಳನ್ನು ಹೆಚ್ಚಾಗಿ ನೀಡಬೇಕು ಇದರಿಂದ ಸಿಡುಬಿನ ಗುಳ್ಳೆಗಳು ಹೆಚ್ಚಾಗಿ ಏಳುತ್ತವೆ. ಹಾಗೇ ಇದು ಒಮ್ಮೆ ಆದರೆ ಮತ್ತೆ ಆಗುವ ಸಾಧ್ಯತೆ ಕಡಿಮೆ. ಆಹಾರದಲ್ಲಿ ಸರಿಯಾಗಿ ಪಥ್ಯ ಇರಬೇಕು.
ಪಥ್ಯ ಇಲ್ಲವಾದರೆ ಮತ್ತೆ ಮರುಕಳಿಸುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಕಹಿಬೇವಿನ ಸೊಪ್ಪಿನ ಕಷಾಯವನ್ನು ಎರಡೂ ಕಪ್ ಈರಿಗೆ ಒಂದಿಷ್ಟು ಬೇವಿನ ಎಲೆಯನ್ನು ಹಾಕಿ ಒಂದು ಕಪ್ ಗೆ ಬರುವಷ್ಟು ಕುದಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಕಪ್ ಹಾಗೂ ಸಂಜೆ ಖಾಲಿ ಹೊಟ್ಟೆಯಲ್ಲಿ ಅರ್ಧ ಕಪ್ ಕುಡಿಯಲು ಕೊಡಬೇಕು. ಉಪ್ಪು ಹುಳಿ ಖಾರ ಇಲ್ಲದ ಆಹಾರವನ್ನೇ ಕೊಡಬೇಕು ಮೊಸರನ್ನು ಸಹ ನೀಡುವ ಹಾಗೆ ಇಲ್ಲಾ. ನಂಜಿನ ಆಹಾರವನ್ನಂತು ಕೊಡಲೇ ಬಾರದು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋವನ್ನು ನೋಡಿ.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430