ಇಂದಿನ ಆಹಾರ ಪದ್ಧತಿ, ಜೀವನ ಶೈಲಿಯಿಂದ ನಮ್ಮ ದೇಹದಲ್ಲಿ ಶಕ್ತಿ ಇಲ್ಲದಂತಾಗಿದೆ ಜೊತೆಗೆ ಮೂಳೆಯ ಸಮಸ್ಯೆ ಕಾಣಿಸುತ್ತದೆ. ಈ ಸಮಸ್ಯೆಗೆ ಮನೆಯಲ್ಲಿಯೆ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಮನೆಮದ್ದಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಕೈ ಕಾಲು, ಸೊಂಟ ನೋವು, ಮೂಳೆಗಳಲ್ಲಿ ನೋವು, ಮೂಳೆಗಳಲ್ಲಿ ಸವಕಳಿ ಬಂದಿದ್ದರೆ, ರಕ್ತ ಹೀನತೆ, ಕ್ಯಾಲ್ಶಿಯಂ ಸಮಸ್ಯೆಗೆ ಹಾಲು, ಬಾದಾಮಿ ರಾಮಬಾಣವಾಗಿದೆ. ಈಗಿನ ಮಕ್ಕಳ ಮೂಳೆ ಗಟ್ಟಿಯಾಗಿರುವುದಿಲ್ಲ ಅದಕ್ಕೆ ಕಾರಣ ಅವರಲ್ಲಿ ಕ್ಯಾಲ್ಶಿಯಂ ಕೊರತೆ ಕಾಣುತ್ತದೆ. ಬಾದಾಮಿಯನ್ನು ಸೇವಿಸುವುದರಿಂದ ಮೂಳೆಗಳು ಸ್ಟ್ರಾಂಗ್ ಆಗುತ್ತದೆ ಮತ್ತು ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಬಾದಾಮಿಯಿಂದ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ.
ಬಾದಾಮಿಯಲ್ಲಿ ವಿಟಮಿನ್ಸ್, ಮಿನರಲ್ಸ್, ಫೈಬರ್, ಪ್ರೊಟೀನ್ ಅಂಶ ಇರುತ್ತದೆ. ಬಾದಾಮಿ ಸೇವನೆಯಿಂದ ಜೀರ್ಣ ಕ್ರಿಯೆಗೆ ಸಹಾಯಕವಾಗಿದೆ. ಪ್ರತಿದಿನ ರಾತ್ರಿ 4-5 ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಬೇಕು, ಬೆಳಗ್ಗೆ ಬಾದಾಮಿಯ ಸಿಪ್ಪೆಯನ್ನು ತೆಗೆದು ಸೇವಿಸಬೇಕು. ಬಾದಾಮಿ ಟೆನಿನ್ ಎಂಬ ಅಂಶ ಇರುತ್ತದೆ ಸಿಪ್ಪೆಸಹಿತ ಬಾದಾಮಿ ಸೇವಿಸಿದರೆ ಡೈಜೇಷನ್ ಸರಿಯಾಗಿ ಆಗುವುದಿಲ್ಲ.
ಬಾದಾಮಿಯನ್ನು ನೀರಿನಲ್ಲಿ ನೆನೆಸಿಡುವುದರಿಂದ ಬಾದಾಮಿಯಲ್ಲಿರುವ ಎಲ್ಲಾ ಅಂಶಗಳು ನಮ್ಮ ದೇಹಕ್ಕೆ ಸಿಗುತ್ತದೆ. ಬಾದಾಮಿ ಸೇವನೆಯಿಂದ ಯಂಗ್ ಆಗಿ ಕಾಣಿಸಬಹುದು. ಬಾದಾಮಿ ಸೇವನೆಯಿಂದ ನಮ್ಮ ಮೆದುಳಿನ ಸಾಮರ್ಥ್ಯ, ನೆನಪಿನ ಶಕ್ತಿ ಹೆಚ್ಚುತ್ತದೆ. ಪ್ರತಿದಿನ ಬಾದಾಮಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ವೃದ್ಧಿ ಆಗುವುದರೊಂದಿಗೆ ಅನೇಕ ರೋಗಗಳು ನಿವಾರಣೆಯಾಗುತ್ತದೆ. ಶುಗರ್ ಇದ್ದವರು ಬಾದಾಮಿ ಸೇವಿಸುವುದರಿಂದ ಬಹಳ ಒಳ್ಳೆಯದು.
ಹೃದಯದ ಆರೋಗ್ಯವನ್ನು ಕೂಡ ಬಾದಾಮಿ ಕಾಪಾಡುತ್ತದೆ. ಬಾದಾಮಿಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಂಶವಿದೆ. ಬಾದಾಮಿ ಸೇವಿಸುವುದರಿಂದ ಚರ್ಮದ ಆರೋಗ್ಯ ಹೆಚ್ಚಾಗುತ್ತದೆ, ಚರ್ಮದ ಅನೇಕ ಖಾಯಿಲೆಗಳಿಗೆ ಬಾದಾಮಿ ಉತ್ತಮ ಔಷಧಿಯಾಗಿದೆ. ಕೂದಲಿನ ಸಮಸ್ಯೆಗೆ ಬಾದಾಮಿ ಒಳ್ಳೆಯದು ಕೂದಲು ಉದುರುವುದು, ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ. ಬಾದಾಮಿ ಮತ್ತು ಎಳ್ಳನ್ನು ಸೇವಿಸುವುದರಿಂದ ಕ್ಯಾಲ್ಷಿಯಂ ಕೊರತೆ ನಿವಾರಣೆಯಾಗುತ್ತದೆ. ಎಳ್ಳನ್ನು ಹಸಿಯಾಗಿ ಸೇವಿಸಬಾರದು ಅದನ್ನು ಸ್ವಲ್ಪ ಫ್ರೈ ಮಾಡಿ ಸೇವಿಸಬೇಕು.
ಎಳ್ಳಿನಲ್ಲಿ ಮೆಗ್ನೀಷಿಯಂ ಕಾಪರ್, ಐರನ್, ಫೈಬರ್ ಅಂಶ ಹೆಚ್ಚಿರುತ್ತದೆ. ಎಳ್ಳು ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಎಳ್ಳು ಸೇವನೆಯಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ಎಳ್ಳನ್ನು ಹುರಿದು ತಣ್ಣಗಾದ ನಂತರ ಮಿಕ್ಸಿಯಲ್ಲಿ ಪೌಡರ್ ಮಾಡಿಟ್ಟುಕೊಳ್ಳಬಹುದು. ಪ್ರತಿದಿನ ಒಂದು ಸ್ಪೂನ್ ಎಳ್ಳಿನ ಪೌಡರ್ ಸೇವಿಸಬೇಕು. ಭುಜದ ನೋವು, ಕೈ ಕಾಲು ನೋವು ಇರುವವರು ಒಂದು ವಾರ ಎಳ್ಳಿನ ಪೌಡರ್ ಸೇವಿಸಬೇಕು ಇದರಿಂದ ನಿವಾರಣೆಯಾಗುತ್ತದೆ.
ಪ್ರತಿದಿನ ಎಳ್ಳು ಸೇವನೆ ಮಾಡುವುದರಿಂದ ನಿಶ್ಯಕ್ತಿ ನಿವಾರಣೆಯಾಗಿ ದೇಹಕ್ಕೆ ಶಕ್ತಿ ದೊರೆಯುತ್ತದೆ. ಎಳ್ಳಿನ ಪೌಡರ್ ಅನ್ನು ಹಾಲಿನೊಂದಿಗೆ ಬೇಕಾದರೂ ಕುಡಿಯಬಹುದು, ನೀರಿನೊಂದಿಗೆ ಬೇಕಾದರೂ ಕುಡಿಯಬಹುದು. ಪ್ರತಿದಿನ ಬೆಳಗ್ಗೆ ಎರಡು ಸ್ಪೂನ್ ಎಳ್ಳಿನ ಪೌಡರ್ ಒಂದು ಲೋಟ ಹಾಲು ಜೊತೆಗೆ ಐದು ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ಕ್ಯಾಲ್ಷಿಯಂ ಕೊರತೆ ಕಾಣಿಸಿಕೊಳ್ಳುವುದಿಲ್ಲ, ರಕ್ತ ಕಡಿಮೆ ಇರುವವರಿಗೆ ರಕ್ತ ಉತ್ಪತ್ತಿ ಆಗುತ್ತದೆ. ಮಕ್ಕಳು ಕೂಡ ಕುಡಿಯುವುದರಿಂದ ಅವರ ಆರೋಗ್ಯಕ್ಕೆ ಒಳ್ಳೆಯದು.