ಸ್ತ್ರೀಯರ ಆರೋಗ್ಯ ಅವರ ಪೀರಿಯಡ್ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸ್ತ್ರೀಯರಿಗೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಪೀರಿಯಡ್ ಆಗಬೇಕು ಲೇಟ್ ಪೀರಿಯಡ್ ಆಗುವುದು ಒಳ್ಳೆಯದಲ್ಲ ಹಾಗೆಯೇ ಅರ್ಲಿ ಪೀರಿಯಡ್ ಆಗುವುದು ಒಳ್ಳೆಯದಲ್ಲ. ಬಹಳಷ್ಟು ಮಹಿಳೆಯರು ಲೇಟ್ ಪೀರಿಯಡ್ ಸಮಸ್ಯೆಯನ್ನು ಎದುರಿಸುತ್ತಾರೆ. ಲೇಟ್ ಪೀರಿಯಡ್ ಸಮಸ್ಯೆ ಇದ್ದವರು ಯಾವ ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಸ್ತ್ರೀಯರು ಪ್ರತಿ ತಿಂಗಳು ಮುಟ್ಟಾಗುತ್ತಾರೆ ಅದನ್ನು ಒಂದು ನಿಗದಿತ ಸೈಕಲ್ ಎನ್ನಲಾಗುತ್ತದೆ. ತಿಂಗಳು ಆಗುವುದಕ್ಕಿಂತ ಒಂದು ವಾರದ ಮೊದಲು ಪೀರಿಯಡ್ ಆಗುವುದು ಒಳ್ಳೆಯದಲ್ಲ, ತಿಂಗಳಾಗಿ ಒಂದು ವಾರ, ಎರಡು ವಾರ ಆದರೂ ಆಗದೆ ಇರುವುದು ಒಳ್ಳೆಯದಲ್ಲ. ನಮ್ಮ ಆರೋಗ್ಯ, ದೇಹದ ಸದೃಢತೆ, ನಮ್ಮ ವಿಚಾರಗಳು ನಾವು ಸೇವಿಸುವ ಆಹಾರದ ಮೇಲಿರುತ್ತದೆ. ಸಾತ್ವಿಕ ಆಹಾರವನ್ನು ಸೇವಿಸುವುದರಿಂದ ಉತ್ತಮ ಯೋಚನೆ ಮಾಡುತ್ತೇವೆ, ದೇಹ ಸದೃಢವಾಗಿರುತ್ತದೆ, ಆರೋಗ್ಯವಾಗಿರುತ್ತದೆ. ನಮ್ಮ ಸುತ್ತಮುತ್ತ ಇರುವ ಗಿಡದ ಕಾಂಡ, ಬೇರು ಅದರ ಭಾಗಗಳನ್ನು ಬಳಸಿ ಎಷ್ಟು ಪ್ರಮಾಣದಲ್ಲಿ ಯಾವುದಕ್ಕೆ ಬಳಸಬೇಕು ಎನ್ನುವುದನ್ನು ತಿಳಿಸಿಕೊಡುವುದು ಆಯುರ್ವೇದ. ಪೀರಿಯಡ್ ತಿಂಗಳಿಗಿಂತ ಎರಡು-ಮೂರು ದಿನ ಹೆಚ್ಚುಕಡಿಮೆ ಆದರೆ ಯಾವುದೇ ಸಮಸ್ಯೆ ಇಲ್ಲ, ತೆಗೆದುಕೊಳ್ಳುವ ಆಹಾರ, ವಾತಾವರಣ, ಮನೋ ಒತ್ತಡ ಪ್ರಭಾವ ಬೀರುವುದರಿಂದ ಎರಡು ಮೂರು ದಿನ ಹೆಚ್ಚು ಕಡಿಮೆ ಆಗುತ್ತದೆ.
ಲೇಟ್ ಪೀರಿಯಡ್ ತಿಂಗಳಿಗಿಂತ ಒಂದು ವಾರ ಎರಡು ವಾರ ತಡವಾಗಿ ಪೀರಿಯಡ್ ಆದರೆ ವಾರಕ್ಕೆ ಒಮ್ಮೆ ಇನ್ನೂರೈವತ್ತು ಎಮ್ಎಲ್ ಎಳ್ಳಾಲನ್ನು ಮಾಡಿಕೊಳ್ಳಬೇಕು. ಎಳ್ಳಾಲು ಮಾಡುವ ವಿಧಾನವೆಂದರೆ ಎಳ್ಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು, ಯಾವುದೇ ಧಾನ್ಯವನ್ನು ಬಳಸುವಾಗ ಸ್ವಚ್ಛವಾಗಿ ತೊಳೆದು ಬಳಸಬೇಕು. ತೊಳೆದ ಎಳ್ಳನ್ನು ರಾತ್ರಿ ಸ್ಟೀಲ್ ಪಾತ್ರೆ ಅಥವಾ ಮಣ್ಣಿನ ಮಡಕೆಯಲ್ಲಿ ನೆನೆಸಬೇಕು. ಬೆಳಗ್ಗೆ ಉಗುರುಬೆಚ್ಚಗಿನ ನೀರಿನಲ್ಲಿ ರುಬ್ಬಿ ರುಚಿಗೆ ಬೇಕಾದಷ್ಟು ಬೆಲ್ಲ ಹಾಕಿ ಊಟಕ್ಕಿಂತ ಮೊದಲು ಒಂದು ಲೋಟ ಕುಡಿಯಬೇಕು. ಆಹಾರ ಪದ್ಧತಿಯಲ್ಲಿ ಎಳ್ಳು ಚಟ್ನಿಪುಡಿಯನ್ನು ಬಳಸುವುದು ಒಳ್ಳೆಯದು ಎಳ್ಳು ಚಟ್ನಿಪುಡಿಯನ್ನು ಯಾರೂ ಬೇಕಾದರೂ ಸೇವಿಸಬಹುದು, ಅದರಲ್ಲಿ ಕ್ಯಾಲ್ಸಿಯಂ ಇದ್ದು ಮೂಳೆಯ ಆರೋಗ್ಯ ಕಾಪಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೆ ಡಯಾಬಿಟೀಸ್ ಬರದಂತೆ ತಡೆಯುತ್ತದೆ.
ಅಡುಗೆಗೆ ಎಳ್ಳೆಣ್ಣೆಯನ್ನು ಬಳಸುವುದು, ಎಳ್ಳುಂಡೆ ಸೇವಿಸುವುದು ಹೀಗೆ ಎಳ್ಳಿನಿಂದ ತಯಾರಿಸಿದ ತಿನಿಸುಗಳನ್ನು ಸೇವಿಸುತ್ತಾ ಇರಬೇಕು. ಜೊತೆಗೆ ಪಪ್ಪಾಳೆ ಹಣ್ಣನ್ನು ಎರಡು ಮೂರು ದಿನಕ್ಕೊಮ್ಮೆ ಸೇವಿಸುವುದರಿಂದ ಲೇಟ್ ಪೀರಿಯಡ್ ನಿವಾರಣೆಯಾಗುತ್ತದೆ. ಬಾಳೆದಿಂಡು, ಬಾಳೆಗಡ್ಡೆಯ ಸಾರು, ಪಲ್ಯ ಮಾಡಿಕೊಂಡು ಸೇವಿಸಬೇಕು. ಅಡುಗೆಯಲ್ಲಿ ಹೆಚ್ಚಾಗಿ ನುಗ್ಗೆಕಾಯಿ, ನುಗ್ಗೆ ಸೊಪ್ಪನ್ನು ಬಳಸಬೇಕು ಜೊತೆಗೆ ಬೀಟ್ರೂಟ್, ಗಜ್ಜರಿ, ಸುವರ್ಣ ಗಡ್ಡೆ, ನವಿಲ್ ಕೋಸ್, ಪಾಲಕ್, ಹಾಗಲಕಾಯಿ, ಮಾಡಗಲಗಳನ್ನು ಹೆಚ್ಚು ಸೇವಿಸಬೇಕು. ಲೇಟ್ ಪೀರಿಯಡ್ ಇದ್ದವರು ಹುರುಳಿಕಾಳು, ತೊಗರಿಕಾಳುಗಳನ್ನು ಹೆಚ್ಚಾಗಿ ಸೇವಿಸಬೇಕು. ಲೇಟ್ ಪೀರಿಯಡ್ ಆಗುವವರು ಜವೆಗೋಧಿಯ ಉಪ್ಪಿಟ್ಟನ್ನು ತಯಾರಿಸಿ ಸೇವಿಸಬಹುದು, ಜವೆ ಗೋಧಿಯ ಚಪಾತಿ ಸೇವಿಸದೆ ಇರುವುದು ಒಳ್ಳೆಯದು.
ಈ ಎಲ್ಲಾ ಆಹಾರದ ಜೊತೆಗೆ ಲಿಂಬು ಎಲೆಯ ಕಷಾಯ ಮಾಡಿಕೊಂಡು ಕುಡಿಯುವುದರಿಂದಲೂ ಲೇಟ್ ಪೀರಿಯಡ್ ಸಮಸ್ಯೆ ನಿವಾರಣೆಯಾಗುತ್ತದೆ. ಮಜ್ಜಿಗೆ ಹುಲ್ಲು, ಹಾಗಲ ಎಲೆ, ತುಳಸಿ ಎಲೆ, ಪುದೀನಾ ಎಲೆಯ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಲೇಟ್ ಪೀರಿಯಡ್ ಸಮಸ್ಯೆ ಬಹುಬೇಗನೆ ನಿವಾರಣೆಯಾಗುತ್ತದೆ. ಯಾವುದೇ ಕಷಾಯ ಮಾಡಿಕೊಳ್ಳುವಾಗ ಅರ್ಧ ಇಂಚು ಹಸಿಶುಂಠಿ ಮತ್ತು ಅರ್ಧ ಇಂಚು ಅರಿಶಿಣ ಬೇರನ್ನು ಕಷಾಯಕ್ಕೆ ಹಾಕಬೇಕು. ಮಣ್ಣಿನ ಮಡಕೆಯಲ್ಲಿ ಕಷಾಯ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಮತ್ತು ಉತ್ತಮ ಫಲಿತಾಂಶ ಸಿಗುತ್ತದೆ ಅದು ಬಿಟ್ಟು ಸ್ಟೀಲ್ ಪಾತ್ರೆಗಳಲ್ಲಿ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಒಂದು ಗಂಟೆ ವಾಕಿಂಗ್ ಮಾಡುವುದು ಮತ್ತು ಯೋಗ, ಪ್ರಾಣಾಯಾಮ ಮಾಡುವುದರಿಂದ ಸ್ತ್ರೀಯರ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಋಷಿ ಮುನಿಗಳು ಆಹಾರವು ಔಷಧಿಯಾಗಬೇಕು ಆದರೆ ಔಷಧಿಯನ್ನು ಆಹಾರದಂತೆ ತೆಗೆದುಕೊಳ್ಳಬಾರದು ಎಂದು ಹೇಳುತ್ತಾರೆ ಆದ್ದರಿಂದ ನಾವು ತೆಗೆದುಕೊಳ್ಳುವ ಆಹಾರ ನಮ್ಮ ಆರೋಗ್ಯವನ್ನು ಹೆಚ್ಚಿಸಬೇಕು. ಮೆನೊಪಾಸ್ ಅಂದರೆ ಮಹಿಳೆಯರಿಗೆ 40- 50 ವರ್ಷದ ನಂತರ ಮುಟ್ಟು ನಿಲ್ಲಲು ಲೇಟ್ ಪೀರಿಯಡ್ ಹಾಗೂ ಅರ್ಲಿ ಪೀರಿಯಡ್ ಆಗುತ್ತದೆ ಆದ್ದರಿಂದ ಹೆದರುವ ಅಗತ್ಯವಿಲ್ಲ.