ಮನುಷ್ಯ ಆರೋಗ್ಯವಾಗಿ ಇರಬೇಕು ಎಂದರೆ ದೇಹದ ರಕ್ತ ಸಂಚಾರ ಸರಿಯಾಗಿ ಇರಬೇಕು. ಯಾವುದೇ ಭಾಗದಲ್ಲಿ ರಕ್ತಸಂಚಾರದಲ್ಲಿ ಅಡೆತಡೆಗಳು ಉಂಟಾದರೆ ಆ ಭಾಗದಲ್ಲಿ ನೋವು ಉಂಟಾಗುತ್ತದೆ. ಅದರಲ್ಲೂ ಹೃದಯದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಲೇಬೇಕು. ರಕ್ತ ತೆಳುವಾಗಿ ಇದ್ದು ಸರಾಗವಾಗಿ ಹರಿದುಹೋಗುವಂತಿರಬೇಕು. ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹೃದಯದ ಆರೋಗ್ಯಕ್ಕೆ ಮನೆಯ ಮದ್ದು ತುಂಬಾ ಒಳ್ಳೆಯದು. ಇದರಿಂದ ಬಿ.ಪಿ. ಕಡಿಮೆಯಾಗುತ್ತದೆ. ಇದರಿಂದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ರಕ್ತನಾಳಗಳಲ್ಲಿ ಬ್ಲಾಕೇಜ್ ಉಂಟಾದರೂ ಸಹ ಕಡಿಮೆಯಾಗುತ್ತದೆ. ಹಾರ್ಟ್ ಅಟ್ಯಾಕ್ ಆಗುವ ಸಾಧ್ಯತೆ ಕಡಿಮೆ ಇರುತ್ತದೆ. ಹೃದಯಕ್ಕೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತವೆ. ಇಂಗ್ಲೀಷ್ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಜಾಸ್ತಿ. ಶುಂಠಿ, ಬೆಳ್ಳುಳ್ಳಿ ಮತ್ತು ಅರಿಶಿನದಿಂದ ಯಾವುದೇ ಹಾನಿಯು ಮನುಷ್ಯನಿಗೆ ಇಲ್ಲ. ಈ ಮೂರರಲ್ಲಿ ಅದರದೇ ಆದ ಅಂಶಗಳು ಇವೆ.
ರಕ್ತವನ್ನು ತೆಳು ಮಾಡುವ ಅಂಶ ಈ ಪದಾರ್ಥಗಳಲ್ಲಿ ಇರುತ್ತದೆ. ಮೊದಲು ಒಂದು ಬೆಳ್ಳುಳ್ಳಿ ತೆಗೆದುಕೊಳ್ಳಬೇಕು. ಅದೇ ಗಾತ್ರದ ಶುಂಠಿ ತೆಗೆದುಕೊಳ್ಳಬೇಕು. ಅದಕ್ಕೆ ಅರ್ಧ ಚಮಚ ಅರಿಶಿನದ ಪುಡಿಯನ್ನು ತೆಗೆದುಕೊಳ್ಳಬೇಕು. ಬೆಳ್ಳುಳ್ಳಿ ಇಷ್ಟ ಆಗುವುದಿಲ್ಲ ಅಂಥವರು 2 ಲವಂಗ ತೆಗೆದುಕೊಳ್ಳಬಹುದು. ಟೊಮಾಟೋ ಹಣ್ಣನ್ನು ಹಸಿಯಾಗಿ ತಿನ್ನುವುದರಿಂದ ರಕ್ತನಾಳಗಳಿಗೆ ಬಹಳ ಒಳ್ಳೆಯದು. ರಾತ್ರಿ ಮಲಗುವ ಮುನ್ನ 300ಗ್ರಾಮ್ ಟೊಮಾಟೋ ಹಣ್ಣನ್ನು ತಿನ್ನುವುದರಿಂದ ರಕ್ತವು ನೀರಾಗುತ್ತದೆ.
ಹಾಗೆಯೇ ಆಹಾರದಲ್ಲಿ ಅಂದರೆ ಊಟದಲ್ಲಿ 70% ದಷ್ಟು ಸೊಪ್ಪನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ದಿನವೂ ವ್ಯಾಯಾಮ, ಯೋಗಾಭ್ಯಾಸ ಮತ್ತು ಧ್ಯಾನ, ಸಕಾರಾತ್ಮಕ ಯೋಚನೆ ಇವೆಲ್ಲವೂ ಉತ್ತಮ ಆರೋಗ್ಯಕ್ಕೆ ನಾವು ಮಾಡಬಹುದಾದ ಚಟುವಟಿಕೆಗಳು.