ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ಮದ್ಯಮ ವಯಸ್ಕರು ಹಾಗೂ ವಯಸ್ಸಾದವರ ವರೆಗೂ ಸರ್ವೇ ಸಾಮಾನ್ಯವಾಗಿ ಕಾಡುವಂತಹ ಒಂದು ಸಮಸ್ಯೆ ಎಂದರೆ ಅದು ಕಫ ದ ಸಮಸ್ಯೆ ಈ ಸಮಸ್ಯೆಯು ವರ್ಷದ ಎಲ್ಲಾ ಕಾಲಗಳಲ್ಲಿಯೂ ಜನರನ್ನು ಬಾದಿಸುತ್ತದೆ, ಚಳಿಗಾಲದಲ್ಲಂತು ಕೇಳುವ ಹಾಗೇ ಇಲ್ಲ ಇನ್ನೂ ಚಿಕ್ಕ ಮಕ್ಕಳಿಗೆ ಈ ರೀತಿಯ ಕಫ ಕಟ್ಟಲು ಶುರು ಮಾಡಿತೆಂದರೆ ಅವರಿಗೆ ಉಸಿರಾಡಲೂ ಕೂಡ ಸಮಸ್ಯೆಯಾಗಿಬಿಡುತ್ತದೆ.
ಸಾಮಾನ್ಯವಾಗಿ ಕಫವು ಶೀತದ ಕಾರಣದಿಂದಾಗಿ ಮತ್ತು ಅತಿ ಹೆಚ್ಚು ಎಣ್ಣೆ ಅಂಶವಿರುವ ಪದಾರ್ಥಗಳನ್ನು ತಿನ್ನುವುದರಿಂದಾಗಿ ಇನ್ನೂ ಹತ್ತು ಹಲವಾರು ಕಾರಣಗಳಿಂದ ಬರುತ್ತದೆ ಕಫವನ್ನು ನಿವಾರಿಸಲು ಆದಷ್ಟು ಬಿಸಿನೀರನ್ನು ಕುಡಿಯುವುದು ಒಳಿತು ಅದಕ್ಕಿಂತ ಹೆಚ್ಚಾಗಿ ನಾವು ಹೇಳುವ ಸುಲಭ ಮನೆ ಮದ್ದನ್ನು ಪಾಲಿಸುವುದರಿಂದ ನಿಮ್ಮ ಕಫ ಬಹಳ ಶೀಘ್ರ ಗತಿಯಲ್ಲಿ ನಿವಾರಣೆಯಾಗುವುದರಲ್ಲಿ ಎರಡು ಮಾತಿಲ್ಲ, ಹಾಗಾದರೆ ಅಂತಹ ಕಫ ವನ್ನು ನಿವಾರಿಸುವಂತಹ ಸುಲಭ ಮನೆ ಮದ್ದನ್ನು ತಯಾರಿಸುವ ವಿಧಾನ ಮತ್ತು ಅದನ್ನು ಸೇವಿಸುವ ವಿಧಾನವನ್ನು ತಿಳಿಸಿಕೊಡುತ್ತೇವೆ ಬನ್ನಿ.
ಮೊದಲಿಗೆ ಒಂದು ವೀಳ್ಯದ ಎಲೆಯನ್ನು ಚೆನ್ನಾಗಿ ತೊಳೆದುಕೊಂಡು ಇಟ್ಟುಕೊಳ್ಳಬೇಕು ಮತ್ತು ಒಂದು ವೀಳ್ಯದ ಎಲೆಗೆ ಅನುಪಾತದಲ್ಲಿ ಒಂಬತ್ತು ತುಳಸಿ ಎಲೆಗಳನ್ನೂ ಸಹ ತೊಳೆದು ಇಟ್ಟುಕೊಳ್ಳಬೇಕು, ನಂತರ ಹೀಗೆ ತೊಳೆದಿಟ್ಟುಕೊಂಡ ಒಂದು ವೀಳ್ಯದ ಎಲೆ ಮತ್ತು ಒಂಬತ್ತು ತುಳಸಿ ಎಲೆಗಳಿಗೆ ಸ್ವಲ್ಪ ಒಣ ಶುಂಠಿ ಮತ್ತು ಮೂರರಿಂದ ನಾಲ್ಕು ಕಾಳು ಮೆಣಸುಗಳನ್ನು ಸೇರಿಸಿ ಅದನ್ನು ಒಂದು ಕುಟ್ಟಣದ ಒಳಗೆ ಹಾಕಿ ಚೆನ್ನಾಗಿ ಕುಟ್ಟಿಕೊಳ್ಳಬೇಕು ಹೀಗೆ ಚೆನ್ನಾಗಿ ಕುಟ್ಟಿಕೊಂಡ ಅವುಗಳ ಮಿಶ್ರಣವನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಅದನ್ನು ಹಿಂಡಿ ಅದರ ರಸವನ್ನು ತೆಗೆದುಕೊಳ್ಳಬೇಕು.
ಹೀಗೆ ತೆಗೆದುಕೊಂಡ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಅದನ್ನು ಕಫ ಇರುವವರಿಗೆ ಕೊಡಬೇಕು ದಿನಕ್ಕೆ ಒಂದು ಬಾರಿ ಬೆಳಿಗ್ಗೆ ಉಪಹಾರಕ್ಕೂ ಮುಂಚೆ ಅವರಿಗೆ ಇದನ್ನು ಸೇವಿಸಲು ಕೊಡುವುದರಿಂದ ನಿಮ್ಮ ಕಫವು ಶೀಘ್ರದಲ್ಲಿಯೇ ಸುದಾರಿಸುತ್ತದೆ, ಇನ್ನೂ ಹೆಚ್ಚು ಕಫ ಇರುವವರು ಉಸಿರಾಡಲೂ ಕೂಡ ತೊಂದರೆ ಇರುವವರು ಈ ಮನೆ ಮದ್ದನ್ನು ದಿನದಲ್ಲಿ ಎರಡರಿಂದ ಮೂರು ಬಾರಿ ಸೇವಿಸುವುದು ಬಹಳಷ್ಟು ಒಳ್ಳೆಯದು ಅಲ್ಲದೇ ಕಫ ಇರುವವರು ಪ್ರತೀ ಬಾರಿ ಬಾಯಾರಿಸಿದಾಗಲೂ ಸಹ ಬಿಸಿ ನೀರನ್ನೆ ಸೇವಿಸುವುದು ಒಳಿತು ಇದರಿಂದ ನಿಮ್ಮ ಕಫ ಇನ್ನೂ ಬೇಗ ಸುದಾರಿಸುವಲ್ಲಿ ಎರಡು ಮಾತಿಲ್ಲ.