ಇತ್ತೀಚಿಗೆ ಅರೋಗ್ಯ ಸಮಸ್ಯೆ ತೊಂದರೆಗಳಲ್ಲೆ ಹೆಚ್ಚಿನ ಪಾತ್ರ ಅನಿಮಿಯಾ ತೆಗೆದುಕೊಳ್ಳುತ್ತದೆ. ಅನಿಮಿಯಾ ಎಂದರೆ ರಕ್ತ ಹೀನತೆ. ಬಿಳಿ ರಕ್ತ ಕಣಗಳ ಕೊರತೆಗಳಿಂದ ಉಂಟಾಗುತ್ತದೆ ಈ ರಕ್ತ ಹೀನತೆ. ಹಾಗಾದರೆ ರಕ್ತ ಹೀನತೆಗೆ ಮನೆ ಔಷಧಗಳಲ್ಲಿ ಪರಿಹಾರವಿದೆಯೆ? ಪರಿಹಾರ ಇದ್ದರೆ ಅದೇನು ಎಂಬುದನ್ನು ನಾವೂ ಇಲ್ಲಿ ತಿಳಿಯೋಣ.
ಈ ಒಂದು ಧಾನ್ಯದ ಸರಿಯಾದ ಸೇವನೆಯಿಂದ ವೃದ್ಧಾಪ್ಯ ಬಂದರೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ. ರಕ್ತ ಹೀನತೆ ಕಡಿಮೆ ಮಾಡುವುದರ ಜೊತೆಗೆ, ರಕ್ತದ ಶುದ್ದೀಕರಣವನ್ನು ಮಾಡುತ್ತದೆ ಈ ಧಾನ್ಯ. ಉತ್ತಮ ರಕ್ತವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರೋಗಗಳಿಂದ ನಮ್ಮನ್ನು ದೂರವಿರಿಸುತ್ತದೆ. ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಈ ಔಷಧ ಒಳ್ಳೆಯ ಉಪಾಯ. ಹೃದಯದ ಬ್ಲಾಕೇಜ್ ಗಳಿಂದ ವಿಮುಕ್ತಗೊಳಿಸಿ ಹೃದಯಾಘಾತದ ಸಂಭವಗಳನ್ನು ತಪ್ಪಿಸುತ್ತದೆ. ಕ್ಯಾನ್ಸರ್ ರೋಗದಿಂದಲೂ ದೂರವಿರಿಸುತ್ತದೆ. ಈ ಮದ್ದು ಅಸಿಡಿಟಿಗೂ ಒಳ್ಳೆಯದು. ಹೊಟ್ಟೆಯ ಸಮಸ್ಯೆ ದೂರ ಮಾಡುತ್ತದೆ. ಗ್ಯಾಸ್, ಮಲಬದ್ಧತೆ, ಸುಸ್ತು, ಹೈ ಬಿಪಿ ಇವೆಲ್ಲಕ್ಕೂ ಪರಿಹಾರ ನೀಡುತ್ತದೆ. ತೂಕ ಕಡಿಮೆ ಮಾಡಿಕೊಳ್ಳಬೇಕು ಅನ್ನುವವರಿಗೆ ಸಹಾಯಮಾಡುತ್ತದೆ. ಚರ್ಮದ ಅಲರ್ಜಿಯನ್ನು ಕಡಿಮೆ ಮಾಡಿ ಚರ್ಮದ ಕಾಂತಿಗೆ ಸಹಾಯಮಾಡುತ್ತದೆ. ಕೂದಲ ಆರೋಗ್ಯಕ್ಕೂ ಒಳ್ಳೆಯದು.
ಈ ಧಾನ್ಯದಲ್ಲಿ ಕ್ಯಾಲ್ಸಿಯಂ, ಮ್ಯಾಗ್ನಿಸಿಯಂ, ಐರನ್, ಪಾಸ್ಪರಸ್, ಕೊಪರ್, ಸೋಡಿಯಂ, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ6, ವಿಟಮಿನ್ ಇ ಮತ್ತು ಕೆ, ಜಿಂಕ್, ಸೆಲೆನಿಯಮ್, ನಿಯಾಸಿನ್ ನಂತಹ ಹಲವು ಅಂಶಗಳು ಇದರಲ್ಲಿ ಅಡಕವಾಗಿದೆ. ಇದರಿಂದಲೆ ತಿಳಿದು ಬರುತ್ತದೆ ಈ ಧಾನ್ಯ ಎಷ್ಟು ಪ್ರಯೋಜನಕಾರಿ ಎನ್ನುವುದು. ಈ ಧಾನ್ಯ ಬೇರೆ ಯಾವುದು ಅಲ್ಲ ಇದು ಒಣ ದ್ರಾಕ್ಷಿ. ಸರಿಯಾದ ರೀತಿಯಲ್ಲಿ ಇದನ್ನು ಸೇವಿಸಿದರೆ ರಕ್ತ ಹೀನತೆಯ ಸಮಸ್ಯೆ ಪರಿಹಾರವಾಗುವುದಂತೂ ಖಂಡಿತ. ಒಣ ದ್ರಾಕ್ಷಿಯನ್ನು ಸೇವಿಸುವ ಕ್ರಮ ಹೀಗಿದೆ. ಒಂದು ಮುಷ್ಟಿ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಒಣದ್ರಾಕ್ಷಿ ತೆಗೆದುಕೊಂಡು ಚೆನ್ನಾಗಿ ತೊಳೆಯಬೇಕು. ನಂತರ ಒಂದು ಪಾತ್ರೆಯಲ್ಲಿ ಎರಡು ಗ್ಲಾಸ್ ನೀರು ಹಾಕಿ ಬಿಸಿಗೆ ಇಟ್ಟು, ತೊಳೆದ ಒಣದ್ರಾಕ್ಷಿಯನ್ನು ಹಾಕಿ ಹತ್ತು ಹದಿನೈದು ನಿಮಿಷ ಚೆನ್ನಾಗಿ ಕುದಿಸಿದ ಮೇಲೆ ಮುಚ್ಚಳ ಮುಚ್ಚಿ ರಾತ್ರಿ ಬೆಳಗಾಗುವವರೆಗೂ ಹಾಗೆ ಬಿಡಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುದಿಸಿದ ಒಣದ್ರಾಕ್ಷಿಯ ನೀರನ್ನು ಕುಡಿದು, ದ್ರಾಕ್ಷಿಯನ್ನು ಜಗಿದು ಸೇವಿಸಿ. ಇದರಿಂದ ಬೊಜ್ಜು ಕರಗಿಸಿ, ದೇಹದ ಕಲ್ಮಷ ನಿವಾರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಒಣದ್ರಾಕ್ಷಿ ಹೇಗೆ ಉಪಯೋಗಿಸುವುದರಿಂದ ರಕ್ತ ಹೀನತೆ ಸಮಸ್ಯೆಗೆ ಪರಿಹಾರ ದೊರಕುತ್ತದೆ ಎಂಬ ಪ್ರಶ್ನೆಗೆ ಉತ್ತರ ದೊರೆಯಿತು. ಮೇಲೆ ತಿಳಿಸಿರುವ ರೀತಿಯಲ್ಲಿ ಬಳಸಿದರೆ ಒಣದ್ರಾಕ್ಷಿಯ ಸಂಪೂರ್ಣ ಆರೋಗ್ಯ ಲಾಭ ನಮ್ಮದಾಗುತ್ತದೆ.