ಒಂದೇ ಸ್ಥಿತಿಯಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದು. ಹೆಚ್ಚು ದೂರ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದು, ಕಾರುಗಳಲ್ಲಿ ದೀರ್ಘಕಾಲದ ಪ್ರಯಾಣ, ಬೆನ್ನಿಗೆ ಪೆಟ್ಟು ಬೀಳುವುದು, ಬೆನ್ನಿಗೆ ಸಂಬಂಧಿಸಿದ ಮೂಳೆಗಳು, ಮಾಂಸಖಂಡಗಳು, ಡಿಸ್ಕ್, ನರಗಳ ಸಮಸ್ಯೆಗಳಿಂದ ಸೊಂಟ ನೋವು ಬರುವುದು, ಬೆನ್ನುಹುರಿಯ ಕ್ಷಯಕ್ಕೆ ಗುರಿಯಾಗುವುದು, ಬೆನ್ನು ಮೂಳೆಗಳ ಊತ, ಕ್ಯಾನ್ಸರ್‌ಗೆ ಗುರಿಯಾಗುವುದು, ಗರ್ಭಾಶಯ ರೋಗಗಳು, ಅಂಡಾಶಯ ರೋಗಗಳು ಮತ್ತು ಗರ್ಭಧಾರಣೆ ಸಮಯದಲ್ಲಿ ಕೂಡ ಸ್ತ್ರೀಯರಲ್ಲಿ ಸೊಂಟ ನೋವು ಬರುವ ಸಾಧ್ಯತೆ ಇದೆ.
ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ಹೊತ್ತು ಕೆಲಸ ಮಾಡಿದರೆ ಮೈ-ಕೈ ನೋವು ಕಾಣಿಸಿಕೊಳ್ಳುತ್ತದೆ. ಅದಲ್ಲದೆ, ದೀರ್ಘ ಕಾಲದ ದೈಹಿಕ ಚಟುವಟಿಕೆಯಿಂದಾಗಿ ದೇಹದಲ್ಲಿ ನೋವು ಕಾಣಿಸುತ್ತದೆ.

ಮೈ-ಕೈ ನೋವು ಕಾಣಿಸಿಕೊಂಡಾಗ ಉಪ್ಪು ನೀರಿನ ಶಾಖವನ್ನು ಕೊಡಬೇಕು. ಉಪ್ಪುನೀರು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಸ್ನಾಯುನೋವನ್ನು ಕಡಿಮೆ ಮಾಡುತ್ತದೆ. ಮಸಾಜ್ ಮಾಡುವ ಮೂಲಕ ಮೈ-ಕೈ ನೋವು ನಿವಾರಣೆ ಮಾಡಬಹುದು. ಸರಿಯಾದ ಕ್ರಮದಲ್ಲಿ ಮಸಾಜ್​ ಮಾಡಿದರೆ ಕೊಂಚ ಆರಾಮದಾಯಕ ಅನಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.

ಮೈ-ಕೈಗೆ ಎಣ್ಣೆ ಹಚ್ಚಿ ಮಸಾಜ್ ಮಾಡಬೇಕು ನಂತರ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಮೈ-ಕೈ ನೋವು ನಿವಾರಣೆ ಆಗುತ್ತದೆ.ಶಾಖ ನೀಡುವ ಮೂಲಕ ಮೈ-ಕೈ ನೋವನ್ನು ಕಡಿಮೆ ಮಾಡಬಹುದಾಗಿದೆ. ಹೀಟ್ ಪ್ಯಾಡ್​ಗಳಿಗೆ ಬಿಸಿ ನೀರನ್ನು ತುಂಬಿಸಿ ನಂತರ ನೋವಿರುವ ಭಾಗಗಳಿಗೆ ಮುಟ್ಟಿಸುತ್ತಾ ಹೋಗಬೇಕು.ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡಲು ಮತ್ತು ರಕ್ತದ ಹರಿವನ್ನು ಸುಧಾರಿಸಲು ಹಾಟ್ ಕಂಪ್ರೆಸ್ ಉತ್ತಮ ಮಾರ್ಗವಾಗಿದೆ. ಇದು ಗಟ್ಟಿಯಾದ ಸ್ನಾಯುಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಆದರೆ ಗಾಯದಿಂದಾಗಿ ನೋವು ಉಂಟಾದರೆ ಅದನ್ನು ಬಳಸಬಾರದು. ನೋವಿರುವ ಜಾಗದಲ್ಲಿ ಹಾಟ್ ಕಾಂಪ್ರೆಸ್ ಅಥವಾ ಬೆಚ್ಚಗಿನ ನೀರಿನಲ್ಲಿ ಟವೆಲ್ ಅದ್ದಿ ಪ್ರೆಸ್ ಮಾಡಲು ನೀವು ಪ್ರಯತ್ನಿಸಬಹುದು. ಹೀಟಿಂಗ್ ಪ್ಯಾಡ್ ಅಥವಾ ಡ್ಯಾಂಪ್ ಟವೆಲ್ ತುಂಬಾ ಬಿಸಿಯಾಗಿರಬಾರದು. ಏಕೆಂದರೆ ಅದು ನಿಮ್ಮ ಚರ್ಮವನ್ನು ಸುಡುತ್ತದೆ.ಸ್ನಾಯು ಉಳುಕಿನಿಂದ ಉಂಟಾಗುವ ನೋವು ಮತ್ತು ಊತಕ್ಕೆ ಐಸ್ ಪ್ಯಾಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಪ್ರದೇಶವನ್ನು ನಿಶ್ಚೇಷ್ಟಗೊಳಿಸುತ್ತದೆ ಮತ್ತು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ನೀವು ಈ ರೀತಿಯಲ್ಲಿ ಐಸ್ ಪ್ಯಾಕ್ ತಯಾರಿಸಬಹುದು ಮತ್ತು ಬಳಸಬಹುದು. ಮೊದಲಿಗೆ ಪ್ಲಾಸ್ಟಿಕ್ ಚೀಲದಲ್ಲಿ ಕೆಲವು ಐಸ್ ಕ್ಯೂಬ್ ತೆಗೆದುಕೊಳ್ಳಿ. ಆ ನಂತರ ಚೀಲವನ್ನು ನೀರಿನಿಂದ ತುಂಬಿಸಿ ಮತ್ತು ಅದನ್ನು ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿ. ಈ ಚೀಲವನ್ನು ಟವೆಲ್‌ನಲ್ಲಿ ಕಟ್ಟಿಕೊಳ್ಳಿ. ಕೆಲವು ಸೆಕೆಂಡುಗಳ ಕಾಲ ನೋವಿರುವ ಜಾಗದ ಮೇಲೆ ಇರಿಸಿ. ಐಸ್ ಅನ್ನು ಒಂದೇ ಬಾರಿಗೆ ದೀರ್ಘಕಾಲ ಇಟ್ಟುಕೊಳ್ಳಬೇಡಿ. ಇದನ್ನು ದಿನಕ್ಕೆ ಎರಡು ಬಾರಿ ಪುನರಾವರ್ತಿಸಿ.

ನಮ್ಮ ಪೂರ್ವಜರು ಹಿಂದೆ ನೆಲದ ಮೇಲೆ ಮಲಗುತ್ತಿದ್ದರು.ಅಷ್ಟೇ ಯಾಕೆ ಇಂದು ಸಹ ಹಲವಾರು ಜನರು ನೆಲದ ಮೇಲೆ ಮಲಗುತ್ತಾರೆ. ಆದರೆ ಇದೀಗ ಆಧುನಿಕ ಜಗತ್ತಿನಲ್ಲಿ ಬೆಡ್, ಹಾಸಿಗೆ ಬಂದ ಮೇಲೆ ಅದರ ಮೇಲೆಯೇ ಮಲಗಿ ನೆಲದ ಮೇಲೆ ಮಲಗಿದರೆ ಹೇಗಿರುತ್ತದೆ ಅನ್ನೋದೇ ಮರೆತು ಹೋಗಿದೆ. ಆದರೆ ಬೆಡ್ ಮೇಲೆ ಮಲಗುವುದಕ್ಕಿಂತ, ನೆಲದ ಮೇಲೆ ಮಲಗುವುದು ಉತ್ತಮ.ನೆಲದ ಮೇಲೆ ಮಲಗುವಾಗ ಬೆನ್ನಿನ ನೆರವಿನಿಂದ ಮಲಗಬೇಕು. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ಜೊತೆಗೆ ದೇಹಕ್ಕೆ ಆರಾಮ ಸಿಗುತ್ತದೆ. ಮೊದಲಿಗೆ ಈ ರೀತಿ ಮಲಗುವುದು ಕಷ್ಟವಾಗುತ್ತದೆ. ಆದರೆ ನಂತರ ಇದು ಅಭ್ಯಾಸವಾಗುತ್ತದೆ. ಮೈ ಕೈ ನೋವೂ ಇರುವುದಿಲ್ಲ.ಬೆಡ್ ಸಮತಟ್ಟಾಗಿ ಇರುವುದಿಲ್ಲ,ಮಲಗಿದ ಹಾಗೆ ಬೆಡ್ ಸಹ ಮೇಲೆ ಕೆಳಗೆ ಆಗುತ್ತದೆ. ಇದರಿಂದ ಬೆನ್ನು ನೋವು, ಕೈ ಕಾಲು ನೋವು ಕಾಣಿಸಿಕೊಳ್ಳುತ್ತದೆ. ನೆಲದ ಮೇಲೆ ದಿಂಬು ಇಲ್ಲದೆ ಮಲಗಿದರೆ ಉಸಿರಾಟದ ಸಮಸ್ಯೆ ಕಡಿಮೆಯಾಗುತ್ತದೆ. ಇದು ಶ್ವಾಸಕೋಶದ ಸಮಸ್ಯೆ ಹೊಂದಿರುವ ರೋಗಿಗಳಿಗೂ ಉತ್ತಮ.ತಪ್ಪಾಗಿ ಮಲಗುವುದರಿಂದ ಬಚಾವಾಗಬೇಕು ಅಂದರೆ ನೆಲದ ಮೇಲೆ ಮಲಗಬೇಕು. ಬೆಡ್ ಮೇಲೆ ಮಲಗುವುದು ಶರೀರಕ್ಕೆ ಹಾನಿಕಾರಕ.

ವೈಜ್ಞಾನಿಕವಾಗಿ ಹೇಳಬೇಕೆಂದರೆ ಸುಸ್ತು, ಆಯಾಸ ಕಡಿಮೆಯಾಗಿ, ಚಿಂತೆ ಇಲ್ಲದ ನಿದ್ರೆ ಬರಲು ಸಹಾಯವಾಗುತ್ತದೆ. ಸಂಧಿಗಳಲ್ಲಿ ನೋವು ಕಾಣಿಸಿಕೊಂಡರೆ, ಸೊಂಟ ನೋವು ಕಾಣಿಸಿಕೊಂಡರೆ ಸಾಧ್ಯವಾದಷ್ಟು ನೆಲದ ಮೇಲೆ ಮಲಗಿ. ಇದರಿಂದ ಮಾಂಸಖಂಡಗಳ ನೋವು ಕಡಿಮೆಯಾಗಿ ದೇಹ ಹಗುರಾಗುತ್ತದೆ. ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಇರಬೇಕು ಎಂದಾದರೆ ಅದಕ್ಕೆ ಮುಖವಾಗಿ ನೆಲದ ಮೇಲೆ ಮಲಗಬೇಕು. ನೆಲದ ಮೇಲೆ ಮಲಗಿದರೆ ಮಾಂಸಖಂಡಗಳು ರಿಲ್ಯಾಕ್ಸ್ ಆಗುತ್ತವೆ. ಇದರಿಂದ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಚೆನ್ನಾಗಿ ನಿದ್ರೆ ಬರಲು ಸಹಾಯವಾಗುತ್ತದೆ.

ಉಳುಕು, ಬೆನ್ನು ಮೂಳೆಯ ಮುರಿತ, ಸ್ನಾಯು, ಅಸ್ಥಿರಜ್ಜುಗಳು ಹರಿಯುವುದು, ಬಾವು ಅಪಘಾತ, ಸೋಂಕು, ಕ್ಷಯ ರೋಗ, ಮಣಿಶಿರಗಳಲ್ಲಿರುವ ಪದರು ಸರಿಯುವುದು ಕೂಡ ತೀವ್ರ ಸ್ವರೂಪದ ಬೆನ್ನು ನೋವಿಗೆ ಕಾರಣ. ಮಹಿಳೆಯರಲ್ಲಿ ಮನೆಯಲ್ಲಿಅತಿಯಾದ ಕೆಲಸ, ಅತಿಯಾದ ಲೈಂ ಗಿಕತೆ, ಗರ್ಭಿಣಿಯರಿಗೆ, ಶಸ್ತ್ರಚಿಕಿತ್ಸೆಗೆ ಒಳಪಟ್ಟವರಿಗೆ, ಅತಿಯಾದ ಋತುಸ್ರಾವ, ಬಿಳಿ ಸೆರಗು ಹೋಗುವುದು ಪೌಷ್ಟಿಕ ಆಹಾರದ ಕೊರತೆ, ಕ್ಯಾಲ್ಸಿಯಂ ಕೊರತೆ ಸೇರಿದಂತೆ ಇನ್ನು ಅನೇಕ ಕಾರಣಗಳಿಂದ ಬೆನ್ನು ನೋವು ಕಾಣಿಸುತ್ತದೆ. ಆದ್ದರಿಂದ ಮೇಲಿನ ಹಂತಗಳನ್ನು ಪಾಲಿಸಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!