ಸೊಳ್ಳೆಗಳ ಕಾಟಕ್ಕೆ ಮನೆಯಲ್ಲಿಯೆ ಇರುವ ವಸ್ತುಗಳನ್ನು ಬಳಸಿಕೊಂಡು ಈ ರೀತಿಯಾಗಿ ಮಾಡುವುದರಿಂದ ಸೊಳ್ಳೆಗಳು ಬರದಂತೆ ತಡೆಯಬಹುದು. ಅದು ಎನು? ಹೇಗೆ ಮಾಡುವುದು? ಎನ್ನುವುದನ್ನು ಇಲ್ಲಿ ವಿವರವಾಗಿ ತಿಳಿದುಕೊಳ್ಳೋಣ.

ಸೊಳ್ಳೆಗಳಿಂದ ಚಿಕನ್ ಗುನ್ಯಾ, ಡೆಂಗ್ಯೂ ಅಂತಹ ಹಲವಾರು ರೀತಿಯ ಕಾಯಿಲೆಗಳು ಬರುತ್ತವೆ. ಸೊಳ್ಳೆಗಳು ಬರದೇ ಇರುವ ಹಾಗೆ ನಾವು ನಮ್ಮ ಮನೆಯಲ್ಲಿ ಕಾಯಿಲ್ಸ್ ಹಚ್ಚುತ್ತೇವೆ. ಆದರೆ ಇವುಗಳು ಕೂಡ ನಮ್ಮ ಆರೋಗ್ಯಕ್ಕೆ ಮಾರಕವೇ ಆಗಿರುತ್ತವೆ. ನಾವು ಸೊಳ್ಳೆಗಳನ್ನು ಓಡಿಸಲು ಎಂದು ಹಚ್ಚುವ ಈ ಕಾಯಿಲ್ ಗಳ ಹೊಗೆ ತೆಗೆದುಕೊಳ್ಳುವುದು ಹಾಗೂ ಎಷ್ಟೋ ಸಿಗರೇಟ್ ಸೇದುವುದು ಎರಡೂ ಒಂದೇ ಆಗಿರುತ್ತವೆ. ಅಷ್ಟು ಅಪಾಯಕಾರಿ ಆಗಿರುತ್ತವೆ ಇವು. ಇನ್ನು ಇವುಗಳ ಬದಲು ಲಿಕ್ವಿಡ್ ಹಾಕುತ್ತೇವೆ ಎಂದರೆ ಇದೂ ಕೂಡಾ ಅಪಾಯಕಾರಿಯೇ. ರಾಸಾಯನಿಕ ಮಿಶ್ರಿತ ಲಿಕ್ವಿಡ್, ಕಾಯಿಲ್ ಇವುಗಳ ಬಳಕೆಯಿಂದ ದೊಡ್ಡವರಿಗಿಂತ ಚಿಕ್ಕ ಮಕ್ಕಳಿಗೆ ಅಪಾಯ ಹೆಚ್ಚು. ಹಾಗಾಗಿ ನಾವು ಯಾವುದೇ ಅಡ್ಡಪರಿಣಾಮ ಇಲ್ಲದ ಮನೆಯಲ್ಲಿಯೇ ಸುಲಭವಾಗಿ ಸೊಳ್ಳೆಗಳನ್ನು ಓಡಿಸಲು ಮದ್ದನ್ನು ಮಾಡಿಕೊಳ್ಳಬಹುದು.

ಸೊಳ್ಳೆಗಳನ್ನು ಓಡಿಸಲು ಸುಲಭವಾದ ಮನೆಮದ್ದುಗಳನ್ನು ನಾವು ಬಳಸಬಹುದು ಅವುಗಳಲ್ಲಿ ಮುಖ್ಯವಾಗಿ ಲ್ಯಾವೆಂಡರ್ ಆಯಿಲ್. ಸೊಳ್ಳೆಗಳ ಕಾಟ ರಾತ್ರಿ ಹೆಚ್ಚಾಗಿದ್ದಾಗ ಮಲಗುವ ಸಮಯದಲ್ಲಿ ಬೆಡ್ಶೀಟ್ ಅಥಾವ ಪಿಲ್ಲೋ ಗಳ ಮೇಲೆ ಒಂದೆರಡು ಹನಿ ಅಷ್ಟು ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಅನ್ನು ಹಾಕಿಕೊಂಡು ಮಲಗಿದರೆ ಇದರ ಸುವಾಸನೆಗೆ ನಿದ್ದೆ ಚೆನ್ನಾಗಿ ಬರುವುದು ಹಾಗೂ ಇದರ ಸುವಾಸನೆ ಸೊಳ್ಳೆಗಳಿಗೆ ಆಗದೆ ಇರುವುದರಿಂದ ಸೊಳ್ಳೆಗಳು ಕೂಡ ಬರುವುದಿಲ್ಲ. ಲ್ಯಾವೆಂಡರ್ ಆಯಿಲ್ ನಮ್ಮ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ ಇದರ ಪರಿಮಳ ಸುಮಾರು ಐದಾರು ಗಂಟೆಗಳ ಕಾಲ ಇರುತ್ತದೆ ಅಲ್ಲಿಯವರೆಗೂ ಸೊಳ್ಳೆಗಳು ನಮ್ಮ ಸಮೀಪ ಕೂಡ ಸುಳಿಯುವುದೇ ಇಲ್ಲ. ಆದರೆ ಇದನ್ನು ಯಾವುದೇ ಕಾರಣಕ್ಕೂ ನೇರವಾಗಿ ನಮ್ಮ ಚರ್ಮದ ಮೇಲೆ ಪ್ರಯೋಗ ಮಾಡಲೇಬಾರದು ಯಾವುದಾದರೂ ಬೇರೆ ಎಣ್ಣೆಗಳ ಜೊತೆ ಸೇರಿಸಿ ನಮ್ಮ ಚರ್ಮಕ್ಕೆ ಹಚ್ಚಿಕೊಳ್ಳಬಹುದು.

ಇನ್ನು ಸೊಳ್ಳೆಗಳನ್ನು ಓಡಿಸಲು ಸುಲಭವಾದ ಎರಡನೇ ವಿಧಾನ ಏನು ಅಂತ ನೋಡುವುದಾದರೆ, ಒಂದಿಷ್ಟು ಕಹಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಒಣಗಿಸಿ ಒಂದು ಬೌಲ್ಗೆ ಹಾಕಿಕೊಂಡು ಅದಕ್ಕೆ ಒಂದೆರಡು ಕರ್ಪೂರವನ್ನು ಸೇರಿಸಿ ಬೆಂಕಿ ಹಚ್ಚಬೇಕು. ಕಹಿಬೇವಿನ ಸೊಪ್ಪು ಹಾಗೂ ಕರ್ಪೂರದ ವಾಸನೆಗೆ ಸೊಳ್ಳೆಗಳು ನಮ್ಮ ಸುತ್ತಲು ಬರುವುದಿಲ್ಲ. ಇನ್ನು ಹೆಚ್ಚಿನ ಸೊಳ್ಳೆಗಳು ಇದ್ದರೆ ತೆಂಗಿನ ಚಿಪ್ಪನ್ನು ಸ್ವಲ್ಪ ಹೊತ್ತು ಸ್ಟೋವ್ ಮೇಲೆ ಇಟ್ಟು ಅದು ಅರ್ಧ ಸುಟ್ಟಿದ ನಂತರ ಕರ್ಪೂರದಿಂದ ಬೆಂಕಿ ಹಚ್ಚಿದರೆ ಇನ್ನೂ ಹೆಚ್ಚಿನ ಸಮಯ ಹೊಗೆ ಇರುತ್ತದೆ. ಈ ರೀತಿ ಸುಲಭವಾದ ವಿಧಾನಗಳನ್ನು ಅನುಸರಿಸುವುದರಿಂದ ನಾವು ನಮ್ಮ ಮನೆಯ ಸುತ್ತ ಮುತ್ತ ಮತ್ತು ನಮ್ಮ ಮನೆಯೊಳಗೆ ಸೊಳ್ಳೆಗಳು ಬರದಂತೆ ನೋಡಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!