ಸಾಮಾನ್ಯವಾಗಿ ನೆಗಡಿ ಮತ್ತು ಕೆಮ್ಮು ಎಲ್ಲರಿಗೂ ಆಗುತ್ತದೆ. ಅದರಲ್ಲಿ ನೆಗಡಿ ಕೆಲವರಿಗೆ ಆಗುವುದೇ ಇಲ್ಲ. ಹಾಗೆಯೇ ಕೆಲವರಿಗೆ ವಾತಾವರಣಕ್ಕೆ ಆಗುತ್ತದೆ. ನೆಗಡಿಯ ಹಾಗೆ ಒಣಕೆಮ್ಮು ಆಗುತ್ತದೆ. ಇದು ಅತಿಯಾಗಿ ಮುಂದುವರೆದರೆ ಸುಮಾರು ಧಮ್ಮಿನ ಲಕ್ಷಣಕ್ಕೆ ಹೋಗುತ್ತದೆ. ನಾವು ಇಲ್ಲಿ ಒಣಕೆಮ್ಮನ್ನು ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ಪರಿಹಾರ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಒಂದು ಪಾತ್ರೆಯಲ್ಲಿ ಮೊದಲು ಸ್ವಲ್ಪ ಒಣದ್ರಾಕ್ಷಿಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಸ್ವಲ್ಪ ನೀರನ್ನು ಹಾಕಿ ಗ್ಯಾಸ್ ಮೇಲೆ ಇಡಬೇಕು. ನಂತರದಲ್ಲಿ ಇದನ್ನು ಚೆನ್ನಾಗಿ ಕುದಿಸಬೇಕು. ಅರ್ಧ ಲೋಟ ನೀರು ಹಾಕಬೇಕು. ಚೆನ್ನಾಗಿ ಕುದ್ದ ನಂತರ ಅದು ಕಾಲು ಲೋಟ ನೀರು ಇರಬೇಕು. ಅದರಲ್ಲಿ ಇರುವ ಒಣದ್ರಾಕ್ಷಿ ಚೆನ್ನಾಗಿ ಬೇಯಬೇಕು. ನಂತರ ಗ್ಯಾಸ್ ಆಫ್ ಮಾಡಿ ಒಂದು ಲೋಟಕ್ಕೆ ಅದನ್ನು ಹಾಕಿಕೊಳ್ಳಬೇಕು. ನಂತರ ಖಾಲಿಯಾದ ಪಾತ್ರಕ್ಕೆ ಅರ್ಧ ಲೋಟ ಹಾಲನ್ನು ಹಾಕಬೇಕು.
ಇದಕ್ಕೆ ಸಕ್ಕರೆಯನ್ನು ಹಾಕಬೇಕು. ಕೆಂಪುಸಕ್ಕರೆ ಕೆಮ್ಮಿಗೆ ತುಂಬಾ ಒಳ್ಳೆಯದು. ಹಾಗಾಗಿ ಸಕ್ಕರೆಯ ಬದಲು ಕೆಂಪು ಸಕ್ಕರೆಯನ್ನು ಪುಡಿ ಮಾಡಿ ಹಾಕಿದರೆ ಒಳ್ಳೆಯದು. ನಂತರ ದ್ರಾಕ್ಷಿಯನ್ನು ನೀರಿನಿಂದ ತೆಗೆದು ಚೆನ್ನಾಗಿ ಕಿವುಚಬೇಕು. ಕಿವುಚಿದ ರಸವನ್ನು ದ್ರಾಕ್ಷಿ ನೀರಿಗೆ ಹಾಕಬೇಕು. ದೊಡ್ಡವರಿಗೆ ಈ ಔಷಧಿ ಮಾಡುವುದಾದರೆ ದ್ರಾಕ್ಷಿಯ ಸಿಪ್ಪೆಯನ್ನು ಹಾಕಬೇಕು. ಹಾಲು ಸ್ವಲ್ಪ ಬಿಸಿಯಾದ ನಂತರದಲ್ಲಿ ಒಂದು ಲೋಟಕ್ಕೆ ಅರ್ಧ ಲೋಟ ದ್ರಾಕ್ಷಿ ನೀರನ್ನು ಹಾಕಬೇಕು.
ನಂತರ ಅದಕ್ಕೆ ಬೇಕಾದಷ್ಟು ಹಾಲು ಹಾಕಬೇಕು. ಈಗ ಅದಕ್ಕೆ ಸಕ್ಕರೆಪುಡಿಯನ್ನು ಹಾಕಬೇಕು. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನು ರಾತ್ರಿ ಮಲಗುವ ಮುನ್ನ ಕುಡಿಯಬೇಕು. ಇದನ್ನು ಸುಮಾರು ಒಂದು ವಾರಗಳ ಕಾಲ ಮಾಡಬೇಕು. ಹಾಗೆಯೇ ಜೀರಿಗೆಯನ್ನು ಸ್ವಲ್ಪ ಕಪ್ಪು ಬಣ್ಣ ಬರುವವರೆಗೆ ಹುರಿದು ಪುಡಿ ಮಾಡಬೇಕು. ಒಂದು ಲೋಟ ನೀರನ್ನು ಚೆನ್ನಾಗಿ ಕುದಿಸಿಕೊಂಡು ನಂತರ ಆ ನೀರನ್ನು ಒಂದು ಲೋಟಕ್ಕೆ ಹಾಕಿ ಅದಕ್ಕೆ ಅರ್ಧ ಚಮಚ ಜೀರಿಗೆಪುಡಿ ಮತ್ತು ಬೆಲ್ಲ ಸೇರಿಸಿ ಕುಡಿಯಬೇಕು. ಇದನ್ನು ಬಿಸಿ ಬಿಸಿ ಇರುವಾಗಲೇ ಕುಡಿಯಬೇಕು.