ಮನೆಯಲ್ಲಿ ಸುಲಭವಾಗಿ ಮತ್ತು ರುಚಿಕರವಾದ ಮಟನ್ ಬಿರಿಯಾನಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ
ಬೇಕಾಗುವ ಸಾಮಾಗ್ರಿಗಳು ಅರ್ಧ ಕೆ.ಜಿ ಬುಲೆಟ್ ರೈಸ್, 300 ಗ್ರಾಂ ಮಟನ್, 2 ಈರುಳ್ಳಿ, 2 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 2 ಸ್ಪೂನ್ ಕಸ್ತೂರಿ ಮೇತಿ, ಒಗ್ಗರಣೆಗೆ ಬೇಕಾಗುವ ಬಿರಿಯಾನಿ ಮಸಾಲೆ ಇದು ಅಂಗಡಿಯಲ್ಲಿ ಪಾಕೆಟ್ ಸಿಗುತ್ತದೆ. 2 ಟೊಮೆಟೊ, ಒಗ್ಗರಣೆಗೆ ಎಣ್ಣೆ, 2 ಸ್ಪೂನ್ ತುಪ್ಪ, ಉಪ್ಪು, ಬಿರಿಯಾನಿ ಪೌಡರ್, ಅರಿಶಿಣ, ಚಿಲ್ಲಿ ಪೌಡರ್, ಧನಿಯಾ ಪೌಡರ್. ರುಬ್ಬಲು ಒಂದು ಈರುಳ್ಳಿ, 5-6 ಹಸಿ ಮೆಣಸು, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು. ಕಾಲು ಕಪ್ ಮೊಸರು, ಅರ್ಧ ನಿಂಬೆ ಹಣ್ಣು.
ಮಾಡುವ ವಿಧಾನ ಕುಕ್ಕರ್ ಗೆ 2 ಸ್ಪೂನ್ ಎಣ್ಣೆ ಹಾಕಿ ಕಾದ ನಂತರ ತೊಳೆದ ಮಟನ್ ನ್ನು ಹಾಕಿ ಫ್ರೈ ಮಾಡಬೇಕು. ಇದಕ್ಕೆ ಕಾಲು ಟೇಬಲ್ ಸ್ಪೂನ್ ಅರಿಶಿಣ, ಉಪ್ಪು ಹಾಕಿ ಫ್ರೈ ಆದ ನಂತರ ಕೊತ್ತೊಂಬರಿ ಸೊಪ್ಪು, ಪುದೀನಾ ಸೊಪ್ಪನ್ನು ಹಾಕಿ ನೀರನ್ನು ಹಾಕಿ ಮುಚ್ಚಿಡಬೇಕು 5-6 ವಿಸಲ್ ಆಗಬೇಕು. ಒಂದು ಈರುಳ್ಳಿ, 5-6 ಹಸಿ ಮೆಣಸು, ಕೊತ್ತೊಂಬರಿ ಸೊಪ್ಪು, ಪುದೀನಾ ಸೊಪ್ಪು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ 3-4 ಟೇಬಲ್ ಸ್ಪೂನ್ ಎಣ್ಣೆ, ತುಪ್ಪ, ಪಲಾವ್ ಎಲೆ, ಬಿರಿಯಾನಿ ಒಗ್ಗರಣೆಗೆ ಬೇಕಾಗುವ ಸಾಮಗ್ರಿಗಳನ್ನು ಹಾಕಿ ಪ್ರೈ ಆದ ನಂತರ ಈರುಳ್ಳಿಯನ್ನು ಹಾಕಿ ಪ್ರೈ ಮಾಡಬೇಕು ಇದಕ್ಕೆ ಅರ್ಧ ಸ್ಪೂನ್ ಉಪ್ಪನ್ನು ಹಾಕಬೇಕು ನಂತರ ಕಸ್ತೂರಿ ಮೇತಿ, ಶುಂಠಿ ಬೇಳ್ಳುಳ್ಳಿ ಪೇಸ್ಟ್ ನ್ನು ಹಾಕಿ ಪ್ರೈ ಮಾಡಬೇಕು ಇದಕ್ಕೆ ರುಬ್ಬಿದ ಮಸಾಲೆ ಹಾಕಿ ಪ್ರೈ ಮಾಡಿ ಅದಕ್ಕೆ ಟೊಮೆಟೊ, ಮೊಸರನ್ನು ಹಾಕಿ ಮಿಕ್ಸ್ ಮಾಡಿ ಇದಕ್ಕೆ ಕುಕರ್ ನಲ್ಲಿ ಬೆಂದ ಮಟನ್ ನ್ನು ಹಾಕಿ ಮಿಕ್ಸ್ ಮಾಡಿ ಬಿರಿಯಾನಿ ಪೌಡರ್, ಅರಿಶಿಣ, ಚಿಲ್ಲಿ ಪೌಡರ್, ಧನಿಯಾ ಪೌಡರ್ ಹಾಕಿ ಮಿಕ್ಸ್ ಮಾಡಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಇಡಬೇಕು ಕುದಿಯುತ್ತಿರುವಾಗ ತೊಳೆದ ಅಕ್ಕಿಯನ್ನು ಹಾಕಿ ನಿಂಬೆ ರಸವನ್ನು ಹಾಕಿ ನಿಂಬೆ ರಸ ಹಾಕುವುದರಿಂದ ಅನ್ನ ಉದುರಾಗುತ್ತದೆ. 10 ನಿಮಿಷ ಕುದಿಯಲು ಬಿಡಬೇಕು ನಂತರ ಅನ್ನ ಆಗಿರುತ್ತದೆ ಇದನ್ನು ಮಿಕ್ಸ್ ಮಾಡಿದರೆ ಮಟನ್ ಬಿರಿಯಾನಿ ಸವಿಯಲು ಸಿದ್ಧ.