ಮನೆಯಲ್ಲಿ ಸುಲಭವಾಗಿ ಮತ್ತು ರುಚಿಯಾಗಿ ಮೀನು ಸಾರು ಮಾಡುವ ವಿಧಾನ, ಬೇಕಾಗುವ ಸಾಮಗ್ರಿಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ಹಲ್ವಾ ಮೀನು, ಮಾಂಜಿ ಮೀನು, ಬ್ಲಾಕ್ ಪೋಂಪ್ಲೆಟ್ ಯಾವುದೇ ಮೀನಾದರೂ ಈ ಮಸಾಲೆಯನ್ನು ಬಳಸಬಹುದು. ಖಾರ ಇಲ್ಲದಿರುವ ಹಸಿಮಣಸು, ಅರ್ಧ ಕಪ್ ನಷ್ಟು ಬೆಳ್ಳುಳ್ಳಿ, 1 ಕಪ್ ನಷ್ಟು ತೆಂಗಿನತುರಿ, ದೊಡ್ಡ ತುಂಡು ಶುಂಠಿ ಮತ್ತು ಕೊತ್ತುಂಬರಿ ಸೊಪ್ಪು ಇವೆಲ್ಲವನ್ನು ಮಿಕ್ಸಿ ಮಾಡಿಕೊಳ್ಳಬೇಕು ಮಿಕ್ಸಿಗೆ ಹಾಕುವ ಮೊದಲು ಟೊಮೆಟೊವನ್ನು ಹಾಕಬಹುದು. ನುಣ್ಣಗೆ ಮಿಕ್ಸಿ ಮಾಡಿಕೊಳ್ಳಬೇಕು. ಇನ್ನೊಂದು ಕಪ್ ನಲ್ಲಿ 2 ಚಮಚ ಚಿಲ್ಲಿ ಪೌಡರ್ 1 ಚಮಚ ಅರಿಶಿಣ, ಕಾಲು ಚಮಚ ಜೀರಿಗೆ, ಅರ್ಧ ಚಮಚ ಕೊತ್ತಂಬರಿ ಪೌಡರ್ ಇವನ್ನು ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಒಂದು ಕಪ್ ನಲ್ಲಿ ನಿಂಬೆ ಗಾತ್ರದ ಹುಣಸೆ ಹುಳಿಯನ್ನು ನೀರಿನಲ್ಲಿ ನೆನೆಸಿಡಬೇಕು.
ಒಂದು ಕಡಾಯಿಯಲ್ಲಿ ಕಾಲು ಕಪ್ ಎಣ್ಣೆಯನ್ನು ಹಾಕಿ 2 ಸಣ್ಣ ಈರುಳ್ಳಿಯನ್ನು ಹಾಕಬೇಕು. ಕೆಂಪಾಗುವವರೆಗೆ ಪ್ರೈ ಮಾಡಬೇಕು. ಇದಕ್ಕೆ ಜಜ್ಜಿದ ಕಾಳುಮೆಣಸನ್ನು ಹಾಕಬೇಕು. ಇದಕ್ಕೆ ಮಿಕ್ಸಿ ಮಾಡಿಕೊಂಡ ಮಸಾಲ ಹಾಕಬೇಕು ಹಸಿ ವಾಸನೆ ಹೋಗುವವರೆಗೆ ಪ್ರೈ ಮಾಡಬೇಕು. ನಂತರ ಮಿಕ್ಸ್ ಮಾಡಿಕೊಂಡ ಪೌಡರ್ ನ್ನು ಹಾಕಬೇಕು. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು. ಈ ಮಸಾಲೆಯನ್ನು ಡ್ರೈ ಆಗುವವರೆಗೆ ಪ್ರೈ ಮಾಡಬೇಕು. ಇದಕ್ಕೆ ಮೀನಿನ ಪೀಸ್ ಗಳನ್ನು ಹಾಕಬೇಕು ಒಂದು ನಿಮಿಷ ಸರಿಯಾಗಿ ಮಿಕ್ಸ್ ಮಾಡಬೇಕು. ನಂತರ ನೀರನ್ನು ಹಾಕಬೇಕು ಇದರೊಂದಿಗೆ ಹುಳಿ ನೀರನ್ನು ಸೇರಿಸಬೇಕು. ಇದನ್ನು ಮುಚ್ಚಿ ಕುದಿಸಬೇಕು. ಒಂದು ಕುದಿ ಬಂದರೆ ಸಾಕು ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಬಹುದು ಅನ್ನ ಅಥವಾ ಚಪಾತಿಯೊಂದಿಗೆ ಸವಿಯಬಹುದು. ಈ ರೆಸಿಪಿಯನ್ನು ಮೀನು ಪ್ರಿಯರಿಗೆ ತಿಳಿಸಿ.