ಸುಸ್ತು, ನಿಶ್ಯಕ್ತಿ, ಬಲಹೀನತೆ ಈ ರೀತಿಯ ಹಲವು ಸಮಸ್ಯೆಗಳಿಗೆ ಮನೆಯಲ್ಲಿಯೆ ಮಾಡಿಕೊಳ್ಳಬಹುದಾದ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ.
ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು, ರಾತ್ರಿ ನಿದ್ರೆ ಬರದೇ ಇರುವುದು, ಟೆನ್ಷನ್ ಆಗುವುದು, ರಾತ್ರಿ ಕಾಲು ನೋವು, ಯಾವುದೇ ಕೆಲಸ ಮಾಡಲು ಮನಸ್ಸಿಲ್ಲದೆ ಇರುವುದು ಈ ಎಲ್ಲ ಸಮಸ್ಯೆಗಳಿಗೆ ಮನೆಮದ್ದು ಇದೆ ಅದೇನೆಂದರೆ ಒಣ ಕೊಬ್ಬರಿಯನ್ನು ಸಣ್ಣ ಸಣ್ಣ 4 ತುಂಡುಗಳಾಗಿ ಮಾಡಿಕೊಳ್ಳಬೇಕು. ಒಣಕೊಬ್ಬರಿಯಲ್ಲಿ ಕಾಪರ್, ಮೆಗ್ನೀಷಿಯಂ, ಹೈ ಕ್ಯಾಲೋರಿಸ್ ಇರುವುದಲ್ಲದೆ ದೇಹದಲ್ಲಿರುವ ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಗುಡ್ ಕೊಲೆಸ್ಟ್ರಾಲ್ ನ್ನು ಹೆಚ್ಚಿಸುತ್ತದೆ. ಇದರ ಸೇವನೆಯಿಂದ ದೇಹಕ್ಕೆ ಶಕ್ತಿ ಬರುತ್ತದೆ. ಕಾಲು ಚಮಚ ಬಿಳಿ ಎಳ್ಳನ್ನು ಅಥವಾ ಕಪ್ಪು ಎಳ್ಳನ್ನು ತೆಗೆದುಕೊಳ್ಳಬಹುದು. ಎಳ್ಳಿನಲ್ಲಿ ಐರನ್, ಮೆಗ್ನೀಷಿಯಂ, ಕ್ಯಾಲ್ಸಿಯಂ ಇರುತ್ತದೆ ಇದರ ಸೇವನೆಯಿಂದ ಮೂಳೆಗಳಿಗೆ ಶಕ್ತಿ ಬರುತ್ತದೆ. ಕಲ್ಲು ಸಕ್ಕರೆ ರುಚಿಗೆ ತಕ್ಕಷ್ಟು ಡಯಾಬಿಟಿಸ್ ಇದ್ದರೆ ಕಲ್ಲುಸಕ್ಕರೆ ಬೇಡ. ಇದರಲ್ಲಿ ತಂಪಿನ ಗುಣವಿದ್ದು ಕಣ್ಣಿಗೆ ಉತ್ತಮವಾಗಿದೆ.
ಈ ಮೂರನ್ನು ಪೌಡರ್ ಮಾಡಿಕೊಳ್ಳಬೇಕು. ಇದನ್ನು ಒಂದು ಗ್ಲಾಸ್ ಹಾಲಿನಲ್ಲಿ ಹಾಕಿ ಕುದಿಸಬೇಕು. ಕುದಿಯುತ್ತಿರುವಾಗ ಅರ್ಧ ಸ್ಪೂನ್ ಸೋಂಪಾ ಕಾಳನ್ನು, ಕಾಲು ಸ್ಪೂನ್ ಗಸಗಸೆಯನ್ನು ಹಾಕಬೇಕು. ಚೆನ್ನಾಗಿ ಕುದಿದ ನಂತರ ಬಿಸಿ ಬಿಸಿಯಾದ ಹಾಲನ್ನು ಕುಡಿಯಬೇಕು. ರಾತ್ರಿ ಊಟದ ನಂತರ 1 ಗಂಟೆಯ ನಂತರ ಈ ಹಾಲನ್ನು ಕುಡಿಯಬೇಕು ದಿನಕ್ಕೆ ಒಂದು ಬಾರಿ ಪ್ರತಿದಿನ ಕುಡಿಯುವುದರಿಂದ ಅಶಕ್ತತೆ ಕಡಿಮೆಯಾಗಿ ರಾತ್ರಿ ನಿದ್ರೆ ಬರುತ್ತದೆ ಆಕ್ಟಿವ್ ಆಗಿ ಇರಬಹುದು. ಮಕ್ಕಳು ಸಹ ಕುಡಿಯಬಹುದು ಸಾಮಗ್ರಿಗಳನ್ನು ಮಕ್ಕಳಿಗೆ ಕಡಿಮೆ ಬಳಸಬೇಕು. ಈ ಮಾಹಿತಿಯನ್ನು ತಪ್ಪದೆ ತಿಳಿಸಿ.