ಹಾಸ್ಪಿಟಲ್ ಗಳಲ್ಲಿ ಹಾಗೂ ಚಿಕ್ಕಮಕ್ಕಳು ಹೆಚ್ಚು ಸೇವಿಸುವ ಬ್ರೆಡ್ ಗೆ ಯಾವಾಗಲೂ ಬೇಡಿಕೆ ಕಡಿಮೆಯಾಗುವುದಿಲ್ಲ. ಆದ್ದರಿಂದ ಬ್ರೆಡ್ ಮೇಕಿಂಗ್ ಬಿಸಿನೆಸ್ ಮಾಡುವುದು ಹೇಗೆ ಹಾಗೂ ಅದರ ಖರ್ಚು ಮತ್ತು ಲಾಭದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಬ್ರೆಡ್ ಮೇಕಿಂಗ್ ಬಿಸಿನೆಸ್ ಮಾಡಲು ಮಿಕ್ಸರ್ ಮಷೀನ್ ಬೇಕಾಗುತ್ತದೆ ಇದು 27,000 ರೂಗೆ ಸಿಗುತ್ತದೆ. ಬ್ರೆಡ್ ಮೇಕಿಂಗ್ ಮಷೀನ್ ಗೆ ಎರಡು ವರೆಲಕ್ಷ ಇರುತ್ತದೆ. ಸ್ಲೈಸರ್ ಮಷೀನ್ ಬೇಕಾಗುತ್ತದೆ ಇದರ ಬೆಲೆ 35,000 ರೂ ಇರುತ್ತದೆ. ಬ್ರೆಡ್ ತಯಾರಿಸಲು ಮೈದಾ, ಸಕ್ಕರೆ, ಈಸ್ಟ್, ಕೆನಾಲ್ ಆಯಿಲ್, ಡೈರಿ ಕ್ರೀಮರ್ ಬೇಕಾಗುತ್ತದೆ. ಬ್ರೆಡ್ ತಯಾರಿಸುವುದು ಹೇಗೆಂದರೆ ಮಿಕ್ಸರ್ ಮಷೀನ್ ಗೆ ಒಂದು ಕೆ.ಜಿ ಮೈದಾ ಹಿಟ್ಟನ್ನು ಹಾಕಬೇಕು ಅದಕ್ಕೆ 10ಗ್ರಾಂ ಶುಗರ್ ಹಾಕಬೇಕು, ಹಾಗೂ ನೀರನ್ನು ಸಹ ಹಾಕಿ ಮಷೀನ್ ಸ್ಟಾರ್ಟ್ ಮಾಡಬೇಕು, ನಂತರ 60ml ಕೆನಾಲ್ ಆಯಿಲ್ ಹಾಕಬೇಕು, ನಂತರ 7 ಗ್ರಾಂ ಈಸ್ಟ್ ಹಾಗೂ 10 ಗ್ರಾಂ ಡೈರಿ ಕ್ರೀಮರ್ ಹಾಕಬೇಕು, ನಂತರ ಸ್ವಲ್ಪ ನೀರನ್ನು ಹಾಕಿ ಮಷೀನ್ ಆಪರೇಟ್ ಮಾಡಿ ನಂತರ ಆಯಿಲ್ ಹಾಕಿದಾಗ ಸಾಫ್ಟ್ ಆಗುತ್ತದೆ, ನಂತರ ಮಷೀನ್ ಆಪ್ ಮಾಡಿ ಮಿಕ್ಸ್ ಆದ ಹಿಟ್ಟನ್ನು ತೆಗೆಯಬೇಕು. ಒಂದು ಬ್ರೆಡ್ 330 ಗ್ರಾಂ ಬರುವುದರಿಂದ 330 ಗ್ರಾಂ ಮಿಕ್ಸ್ ಆದ ಹಿಟ್ಟನ್ನು ಬ್ರೆಡ್ ಟ್ರೆನಲ್ಲಿ ಸೆಟ್ ಮಾಡಬೇಕು. 30 ನಿಮಿಷ ಹಾಗೆ ಬಿಡಬೇಕು ನಂತರ ಅದನ್ನು ಬ್ರೆಡ್ ಮೇಕಿಂಗ್ ಮಷೀನ್ ನಲ್ಲಿ ಇಟ್ಟು 45 ನಿಮಿಷ ಸೆಟ್ ಮಾಡಬೇಕು 45 ನಿಮಿಷ ನಂತರ ಬ್ರೆಡ್ ರೆಡಿ ಆಗುತ್ತದೆ. ನಂತರ ಸ್ಲೈಸರ್ ಮಷೀನ್ ನಲ್ಲಿ ಬ್ರೆಡ್ ಗಳನ್ನು ಕಟ್ ಮಾಡಬೇಕು. ಬ್ರ್ಯಾಂಡ್ ಕವರ್ ಗಳಿಂದ ಪ್ಯಾಕ್ ಮಾಡಿ ಸೇಲ್ ಮಾಡಬೇಕು.
ಒಂದು ಬ್ರೆಡ್ ಪ್ಯಾಕೆಟ್ ತಯಾರಿಸಲು ಮೈದಾ ಹಿಟ್ಟಿಗೆ 5 ರೂ, ಶುಗರ್ ಈಸ್ಟ್ ಆಯಿಲ್ ಗೆ 3 ರೂಪಾಯಿ, ಕರೆಂಟ್ ಚಾರ್ಜ್ 1 ರೂಪಾಯಿ ಮಾರ್ಕೆಟಿಂಗ್ 1 ರೂಪಾಯಿ ಖರ್ಚಾಗುತ್ತದೆ ಅಂದರೆ ಒಂದು ಬ್ರೆಡ್ ಪ್ಯಾಕೆಟ್ ತಯಾರಿಸಲು ಹತ್ತು ರೂಪಾಯಿ ಖರ್ಚಾಗುತ್ತದೆ. ಇದನ್ನು ಹೋಲ್ ಸೇಲ್ ಆಗಿ 15 ರೂಪಾಯಿಗೆ ಸೇಲ್ ಮಾಡಬಹುದು. ಶೋಪ್ ನವರು ರಿಟೇಲ್ ಆಗಿ 20-25 ರೂಗೆ ಸೇಲ್ ಮಾಡುತ್ತಾರೆ. ಒಂದು ಪ್ಯಾಕೆಟ್ ಗೆ 5 ರೂಪಾಯಿ ಲಾಭ ಸಿಗುತ್ತದೆ. ದಿನಕ್ಕೆ 500 ಪ್ಯಾಕೆಟ್ ಸೇಲ್ ಮಾಡಿದ್ರೆ ₹5000 ಗಳಿಸಬಹುದು. ಬ್ರೆಡ್ ಗಳನ್ನ ಬೇಕರಿಗಳಲ್ಲಿ, ಲೋಕಲ್ ಮಾರ್ಕೆಟ್ ಗಳಲ್ಲಿ ಮಾರ್ಕೆಟಿಂಗ್ ಮಾಡಿ ಸೇಲ್ ಮಾಡಬಹುದು. ಈ ಮಾಹಿತಿಯನ್ನು ತಪ್ಪದೆ ತಿಳಿಸಿ.