Home Guards Jobs 2023 In Karnataka: ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಓದಿದ್ದು ಒಳ್ಳೆಯ ಕೆಲಸ ಬೇಕು ಎಂದು ಹುಡುಕುತ್ತಿರುವವರಿಗೆ ಇದೀಗ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಬರೋಬ್ಬರಿ 900 ಹುದ್ದೆಗಳು ಖಾಲಿ ಇದ್ದು, ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು. ವಿದ್ಯೆ ಇರುವ ಯಾರೇ ಆದರೂ ಕೂಡ ಈ ಕೆಲಸಕ್ಕೆ ಸುಲಭವಾಗಿ ಅರ್ಜಿ ಹಾಕಬಹುದು ಎನ್ನುವುದನ್ನು ಗಮನಿಸಬೇಕು.
ಸರ್ಕಾರದ ಮಾನ್ಯತೆ ಪಡೆದಿರುವ ಯಾವುದೇ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯದಿಂದ 10ನೇ ತರಗತಿ ಮತ್ತು ಪಿಯುಸಿ ಪಾಸ್ ಆಗಿದ್ದರೆ ಸಾಕು, ನೀವು ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಈ ಕೆಲಸಕ್ಕೆ ಅಗತ್ಯವಿರುವ ವಯೋಮಿತಿ ಎಷ್ಟು ಎಂದು ನೋಡುವುದಾದರೆ, 18 ರಿಂದ 30 ವರ್ಷಗಳ ಒಳಗಿರುವ ಯಾರೇ ಆದರೂ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ, ಬೇರೆ ಹಿಂದುಳಿದ ವರ್ಗಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ. ಈ ಕೆಲಸಕ್ಕೆ ಸೇರಲು ನೀವು 10ನೇ ತರಗತಿಯಲ್ಲಿ 50% ಅಥವಾ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ್ದರೆ ಸಾಕು. ಇದು ಹೋಮ್ ಗಾರ್ಡ್ ಕೆಲಸ ಆಗಿದ್ದು, ಈ ಕೆಲಸಕ್ಕಾಗಿ ಕೆಲವು ಅಗತ್ಯ ದಾಖಲೆಗಳು ಬೇಕಾಗುತ್ತದೆ. ಅಗತ್ಯವಿರುವ ದಾಖಲೆಗಳು ಇನ್ಕಮ್ ಸರ್ಟಿಫಿಕೇಟ್, ಕ್ಯಾಸ್ಟ್ ಸರ್ಟಿಫಿಕೇಟ್, ಬರ್ತ್ ಸರ್ಟಿಫಿಕೇಟ್, ಆಧಾರ್ ಕಾರ್ಡ್ ಮತ್ತು ಫೋನ್ ನಂಬರ್ ಬೇಕಾಗುತ್ತದೆ.
Home Guards Jobs 2023 In Karnataka
ಜೊತೆಗೆ ಪಾಸ್ ಪೋರ್ಟ್ ಸೈಜ್ ಫೋಟೋ ಕೂಡ ಅಗತ್ಯವಿದೆ. ಇಂಟರ್ವ್ಯೂ ಅಟೆಂಡ್ ಮಾಡುವಾಗ ಇದೆಲ್ಲವೂ ನಿಮ್ಮ ಹತ್ತಿರ ಇರಬೇಕು. 900 ಹುದ್ದೆಗಳು ಖಾಲಿ ಇದ್ದು, ತಿಂಗಳ ವೇತನ ₹15,000 ರೂಪಾಯಿ ಇರುತ್ತದೆ. ಈ ಕೆಲಸಕ್ಕೆ ನೀವು ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಬಹುದು. ಬೆಂಗಳೂರಿನಲ್ಲಿ ನೇಮಕಾತಿ ನಡೆಯುತ್ತಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ ಎಂದು ಇನ್ನು ತಿಳಿದುಬಂದಿಲ್ಲ.
ಎಲ್ಲಾ ಜಿಲ್ಲೆಗಳಲ್ಲಿ ನೇಮಕಾತಿ ಇರಲಿದ್ದು, 10ನೇ ತರಗತಿ ಮಾರ್ಕ್ಸ್ ಕಾರ್ಡ್ ಮೆರಿಟ್ ಆಧಾರದ ಮೇಲೆ ನೀವು ಆಯ್ಕೆ ಆಗುತ್ತೀರಿ. ಈ ಕೆಲಸಕ್ಕೆ ಎಕ್ಸಾಂ ಅಥವಾ ಅಪ್ಲಿಕೇಶನ್ ಫೀಸ್ ಇರುವುದಿಲ್ಲ. ಈ ಕೆಲಸಕ್ಕೆ ನೇರವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಗದಗ, ಕಾರವಾರ, ಚಿಕ್ಕೋಡಿ, ಕಲ್ಬುರ್ಗಿ, ಧಾರವಾಡ, ಬೆಂಗಳೂರು, ಮೈಸೂರು, ಮಂಡ್ಯ, ಶಿವಮೊಗ್ಗ, ಪುತ್ತೂರು ಈ ಊರುಗಳಲ್ಲಿ 28 ಹುದ್ದೆಗಳು ಖಾಲಿ ಇದೆ. ಈ ಕೆಲಸಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.