ಮೊದಲನೆಯದಾಗಿ ಗ್ರಾನೈಟ್ ಖರೀದಿಸುವಾಗ ಅವಸರ ಮಾಡಬಾರದು ಹಾಗೂ ಬೆಳಗಿನ ಸಮಯದಲ್ಲಿ ಕೊಳ್ಳಲು ಹೋಗಬೇಕು. ಗ್ರಾನೈಟ್ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಹಾಗೂ ಒರಿಸ್ಸಾಯಿಂದ ಕೂಡ ಬರುತ್ತದೆ. ಈ ರಾಜ್ಯಗಳಿಂದ ಬರುವ ಕಲ್ಲುಗಳನ್ನ ಹಾರ್ಡ್ ಗ್ರಾನೈಟ್ ಅಂತಾರೆ, ಇವುಗಳನ್ನು ನೀವು ಬಳಸಬಹುದು ಆದರೆ ಮಧುರೈ ಸ್ಟೋನ್ ಎನ್ನುವುದು ಸಾಫ್ಟ್ ಸ್ಟೋನ್ ಆಗಿರುತ್ತದೆ. ಆದ್ದರಿಂದ ನೀವು ಮಧುರೈ ಗ್ರಾನೈಟ್ ಅನ್ನು ಫ್ಲೋರ್ ಗೆ ಹಾಕಬಾರದು ಹಾಗೆ ಇದನ್ನು ವಾಲ್ ಗೆ, ಫ್ರಂಟ್ ಕ್ಲಂಡಿಂಗ್ ಗೆ ಹಾಕಬಹುದು.
ಅಳತೆ ಮತ್ತು ದಪ್ಪ,ಸಾಮಾನ್ಯವಾಗಿ ಬರೋದು 18mm, 20 ಅಥವಾ 22 mm ಬರುತ್ತೆ. ಆದರೆ ನೀವು 18mm ಗಿಂತ ಜಾಸ್ತಿ ಇರುವ ಅಂದರೆ 20mm ಅಥವಾ 22 mm ದಪ್ಪದಲ್ಲಿ ತೆಗೆದುಕೊಂಡರೆ ನಿಮಗೆ ಗ್ರಾನೈಟ್ ಅಲ್ಲಿ ಬೆಂಡ್ ಬರುವುದು ತುಂಬಾ ಕಮ್ಮಿ ಆದರೆ ಸ್ವಲ್ಪ ದುಬಾರಿ. ಸಾಮಾನ್ಯವಾಗಿ ಗ್ರಾನೈಟ್ ಅಳತೆ ಲಭ್ಯವಿರುವುದು 3 ಅಡಿ ಗೆ 10 ಅಡಿ ಆದರೆ ಕೆಲವರಿಗೆ ಸ್ವಲ್ಪ ದೊಡ್ಡದು ಹಾಗೂ ಅಗಲ ಇರುವಂತಹದ್ದು ಬೇಕಾಗಿರುತ್ತದೆ. ಜೋಂಟ್ಸ ಕಮ್ಮಿ ಇರಲಿ ಅಂದ್ರೆ 4 ಅಡಿ ಗೆ 10 ಅಡಿ ಇರುವ ಗ್ರಾನೈಟ್ ಅನ್ನು ಕೊಂಡು ಕೊಳ್ಳಬಹುದು.
ಇದನ್ನು ಗ್ಯಾನ್ಸೈಜ್ ಎಂದು ಹೇಳುತ್ತಾರೆ ಇದು ದುಬಾರಿ ಇದೆ. ಯಾಕೆ ಕೆಲವೊಬ್ಬರು ಇದನ್ನು ಕೊಂಡುಕೊಳ್ಳುತ್ತಾರೆಂದರೆ ಎಲ್ಲ ಗ್ರಾನೈಟ್ ಗಳದ್ದು ಎಡ್ಜಸ್ ಗಳನ್ನು ಕಟ್ ಮಾಡಬೇಕಾಗುತ್ತದೆ ಹಾಗಾಗಿ ಇಲ್ಲಿ 5 ರಿಂದ 10% ವೆಸ್ಟೆಜ್ ಇರುತ್ತದೆ. ಹಾಗೂ ಯಾವುದೇ ಗ್ರಾನೈಟ್ ಇದ್ದರು ಕೂಡ 5 ರಿಂದ 10 % ವೆಸ್ಟೆಜ್ ಇರುತ್ತದೆ ಅದಕ್ಕೆ ನೀವು ಗ್ಯಾನ್ಸೈಜ್ ಅನ್ನು ತೆಗೆದು ಕೊಂಡರೆ ವೆಸ್ಟೆಜ್ ಕಮ್ಮಿ ಆಗುತ್ತೆ ಹಾಗೆ ಸ್ವಲ್ಪ ದೊಡ್ಡದಾಗಿ ಟೈಲ್ಸ್ ಬರುತ್ತೆ. ಆದರೆ ಗ್ಯಾನ್ಸೈಜ್ ಗೆ ಮಾತ್ರ ರೇಟ್ ಜಾಸ್ತಿ ಆಗಿರುತ್ತದೆ.
ಬೇರೆ ಬೇರೆ ದೇಶದಿಂದ ಗ್ರಾನೈಟ್ ಗಳನ್ನು ಆಮದು ಕೂಡ ಮಾಡಿಕೊಳ್ಳುತ್ತಿದ್ದಾರೆ. ಆಮದು ಮಾಡಿಕೊಳ್ಳುವ ಗ್ರಾನೈಟ್ ಗಳು ತುಂಬಾ ಉತ್ತಮವಾಗಿರುತ್ತವೆ ಹಾಗೆ ಇವು ಸ್ವಲ್ಪ ದುಬಾರಿಯಾಗಿರುತ್ತವೆ ಮತ್ತು ಕ್ವಾಲಿಟಿ ಹಾಗೂ ನೋಡಲು ಚನ್ನಾಗಿ ಇದ್ದರು ರೇಟ್ ಜಾಸ್ತಿ ಆಗಿರುತ್ತದೆ. ಗ್ರಾನೈಟ್ ಅನ್ನುವಂತಹದ್ದು ತುಂಬಾ ನ್ಯಾಚುರಲ್ ಸ್ಟೋನ್ ಕಲರ್ ಆಗಿರುತ್ತದೆ. ಆದರೆ ಕೆಲವೊಂದು ಕಡೆ ಕಲರ್ ಗಳನ್ನು ಹೈ ಲೈಟ್ ಮಾಡಲು ಆರ್ಟಿಫಿಷಿಯಲ್ ಕಲರ್ ಅನ್ನು ಬಳಸುತ್ತಾರೆ. ಆದರೆ ಇದನ್ನು ಬಳಸಬಾರದು.
ಕಲರ್ ಅನ್ನು ಕಂಡು ಹಿಡಿಯಲು ಗ್ರಾನೈಟ್ ಅನ್ನು ನೀರು ತೆಗೆದುಕೊಂಡು ವಾಶ್ ಮಾಡಿ ಹಿಂದೆ ಗಡೆ ಅಥವಾ ಸೈಡ್ ಅಲ್ಲಿ ಸ್ವಲ್ಪ ನೀರು ಹಾಕಿ ಉಜ್ಜಿ ಮುಂದೆ ಮತ್ತು ಹಿಂದೆ ಹೊಂದಿಕೆ ಆಗುತ್ತಿದೆಯಾ ಎನ್ನುವುದನ್ನು ನೋಡಬೇಕು ಒಂದು ವೇಳೆ ಕಲರ್ ಉಪಯೋಗಿಸಿದ್ದರೆ ಮುಂದೆ ಡಾರ್ಕ್ ಆಗಿದ್ದರೆ ಹಿಂದೆ ಸ್ವಲ್ಪ ಲೈಟ್ ಆಗಿರುತ್ತದೆ.