ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶ ಎಂದು ಹೇಳಬಹುದು ಚಿತ್ರದುರ್ಗ ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಎಪ್ಪತ್ತೈದು ಗೃಹರಕ್ಷಕ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಖಾಲಿ ಇರುವ ಗ್ರಹರಕ್ಷಕ ಗೌರವ ಸದಸ್ಯ ಸ್ಥಾನಗಳಿಗೆ ಅರ್ಹರಿರುವ ಹಾಗೂ ಸ್ವಯಂ ಸೇವಕ ಗ್ರಹರಕ್ಷಕ ಸದಸ್ಯರಾಗಲು ಇಚ್ಛೆ ಇರುವ ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಸೆಂಬರ್ ಹತ್ತು ಎರಡು ಸಾವಿರದ ಇಪ್ಪತ್ತೊಂದರ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಫ್ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ದಾಖಲೆಗಳೊಂದಿಗೆ ಸಮಾದೇಷ್ಟರು, ಗೃಹ ರಕ್ಷಕದಳ ಕಛೇರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ. ಇಲ್ಲಿಗೆ ನಿಗದಿತ ಅವಧಿಯೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಲು ಸೂಚಿಸಿದೆ.
ಮುಖ್ಯವಾಗಿ ಈ ಒಂದು ಹುದ್ದೆಗೆ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ ಗೃಹರಕ್ಷಕ ಹುದ್ದೆಗಳ ವಿವರವನ್ನು ನೋಡುವುದಾದರೆ ಹೊಸದಾಗಿ ಪ್ರಾರಂಭವಾಗಿರುವ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಉಪ ಘಟಕದಲ್ಲಿ ಮೂವತ್ತೆರಡು ಹುದ್ದೆಗಳು ಖಾಲಿ ಇವೆ ಮೊಳಕಾಲ್ಮೂರು ತಾಲೂಕು ರಾಂಪುರ ಉಪ ಘಟಕದಲ್ಲಿ ಒಂಬತ್ತು ಹುದ್ದೆಗಳು ಖಾಲಿ ಇವೆ.
ಚಳ್ಳಕೆರೆ ತಾಲೂಕು ಪರಶುರಾಂಪುರ ಉಪ ಘಟಕದಲ್ಲಿ ಹತ್ತು ಹುದ್ದೆಗಳು ಖಾಲಿ ಇದೆ ಚಿತ್ರದುರ್ಗ ತಾಲೂಕು ಭರಮಸಾಗರ ಉಪವಿಭಾಗದಲ್ಲಿ ಹದಿನಾಲ್ಕು ಹುದ್ದೆಗಳು ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಉಪವಿಭಾಗದಲ್ಲಿ ಹತ್ತು ಹುದ್ದೆಗಳು ಖಾಲಿ ಇದ್ದು ಒಟ್ಟು ಎಪ್ಪತ್ತೈದು ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಕರೆಯಲಾಗಿದೆ.
ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಯಾವ ಅರ್ಹತೆಗಳು ಇರಬೇಕು ಎಂಬುದರ ಬಗ್ಗೆ ನೋಡುವುದಾದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಹತ್ತೊಂಬತ್ತು ವರ್ಷದಿಂದ ನಲವತ್ತೈದು ವರ್ಷದೊಳಗಿನವರಾಗಿರಬೇಕು. ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು ಗ್ರಹರಕ್ಷಕ ಸದಸ್ಯತ್ವಕ್ಕೆ ಸೇರಬಯಸುವ ಅಭ್ಯರ್ಥಿಗಳು ನಿರ್ದಿಷ್ಟ ಪ್ರದೇಶದ ಗರಿಷ್ಠ ಐದು ಕಿಲೋಮೀಟರ್ ಒಳಗಿನವರಾಗಿರಬೇಕು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಬಾರದು. ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಬಾರದು.
ಉತ್ತಮ ದೇಹದಾರ್ಢ್ಯತೆ ಹೊಂದಿರಬೇಕು. ಅರ್ಜಿ ಸಲ್ಲಿಸುವ ಪುರುಷರು ನೂರಾ ಅರವತ್ತೆಂಟು ಸೆಂಟಿ ಮೀಟರ್ ಎತ್ತರ ಐವತ್ತು ಕೆಜಿ ತೂಕವನ್ನು ಹೊಂದಿರಬೇಕು ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. ಸ್ವಯಂಸೇವಾ ಮನೋಭಾವದಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಈ ಒಂದು ಹುದ್ದೆಗೆ ಅರ್ಜಿಯನ್ನು ಆಫ್ಲೈನಲ್ಲಿ ಸಲ್ಲಿಸ ಬೇಕಾಗಿರುವುದರಿಂದ ನೀವು ಜಿಲ್ಲಾ ಗೃಹರಕ್ಷಕ ದಳ ಕಛೇರಿ ಮೆದಿಹಳ್ಳಿ ರಸ್ತೆ, ಚಿತ್ರದುರ್ಗ ಇಲ್ಲಿ ಅರ್ಜಿಗಳು ದೊರೆಯುವ ಕಾರಣ ನೀವು ಅಲ್ಲಿಗೆ ಭೇಟಿ ನೀಡಿ ಅರ್ಜಿಯನ್ನು ಪಡೆದುಕೊಳ್ಳಬೇಕು.
ನವೆಂಬರ್ ಇಪ್ಪತ್ತೈದರಿಂದ ಡಿಸೆಂಬರ್ ಆರರವರೆಗೆ ಅರ್ಜಿಗಳು ದೊರೆಯುತ್ತವೆ. ಅರ್ಜಿಯನ್ನು ಪಡೆದುಕೊಂಡಂತಹ ಅಭ್ಯರ್ಥಿಗಳು ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ ಹತ್ತು ಎರಡು ಸಾವಿರದ ಇಪ್ಪತ್ತೊಂದರ ಸಂಜೆ ಐದು ಗಂಟೆ ಮುವತ್ತು ನಿಮಿಷದ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗೂ ಸ್ನೇಹಿತರಿಗೂ ತಿಳಿಸಿರಿ.