ಹೋಂ ಗಾರ್ಡ್ಸ್ ಮತ್ತು ನಾಗರೀಕ ಸೇವಾ ಸಂಸ್ಥೆ ಗೋವಾ ಸರ್ಕಾರ ಇಲ್ಲಿ ಮಾರ್ಚ್ ಒಂದು 2021 ನೆ ಸಾಲಿನ ಹೋಂ ಗಾರ್ಡ್ ಸ್ವಯಂ ಸೇವಕರಿಗೆ ಖಾಲಿ ಇರುವಂತಹ 296 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೇಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು? ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಹೋಂ ಗಾರ್ಡ್ ಖಾಲಿ ಇರುವ ಈ ಹುದ್ದೆಗೆ ಎಂಟನೇ ತರಗತಿ ಮುಗಿಸಿದವರು / ಉತ್ತೀರ್ಣ ಆದವರು ಕೂಡಾ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು 2021 ಮಾರ್ಚ್ ಮುವತ್ತೊಂದರ ಒಳಗೆ ಅರ್ಜಿ ಸಲ್ಲಿಸಬೇಕು. ಇನ್ನು ನೇಮಕಾತಿಗೆ ಕುರಿತಾಗಿ ಅಭ್ಯರ್ಥಿಗಳು ಸರ್ಕಾರ ಹೊರಡಿಸುವ ಅಧಿಸೂಚನೆಯಲ್ಲಿ ನೋಡಬಹುದು. ಇದೇ ಮಾರ್ಚ್ 31 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿರುವುದು.
ಗೋವಾ ಸರ್ಕಾರದ ಹೋಂ ಗಾರ್ಡ್ and ಸಿವಿಲ್ ಡಿಫೆನ್ಸ್ ಆರ್ಗನೈಜೇಷನ್ ಈ ಇಲಾಖೆಯಿಂದ ಕರೆಯಲಾದ ಈ ಅರ್ಜಿಯಲ್ಲಿ ಒಟ್ಟೂ ಖಾಲಿ ಇರುವ ಹುದ್ದೆಗಳು 296 ಆಗಿವೆ. ಅಭ್ಯರ್ಥಿಗಳು ಕೆಲಸ ಮಾಡುವ ಸ್ಥಳ ಗೋವಾ ಆಗಿರುತ್ತದೆ. ಹುದ್ದೆಯ ಹೆಸರು ಹೋಂ ಗಾರ್ಡ್ ಸ್ವಯಂ ಸೇವಕರು. ಇನ್ನು ಇವರಿಗೆ ನೀಡಲಾಗುವ ಸಂಬಳ / ವೇತನ ಎಷ್ಟು ಎಂದು ನೋಡುವುದಾದರೆ ಪ್ರತೀ ದಿನಕ್ಕೆ ಇವರಿಗೆ ವೇತನ ನೀಡಲಾಗುವುದು. ಹಾಗಾಗಿ ಪ್ರತೀ ದಿನದ ಇವರ ಸಂಬಳ 704 ರೂಪಾಯಿ ವೇತನ ನೀಡಲಾಗುವುದು. ಇನ್ನು ಅರ್ಜಿ ಸಲ್ಲಿಸುವವರು ಇಪ್ಪತ್ತು ರೂಪಾಯಿ ಹಣವನ್ನು ಅರ್ಜಿ ಶುಲ್ಕ ಎಂದು ತುಂಬಬೇಕು.
ಇನ್ನು ಮೊದಲೇ ಹೇಳಿದಂತೆ ಅಭ್ಯರ್ಥಿಗಳ ವಿದ್ಯಾರ್ಹತೆ ನೋಡುವುದಾದರೆ ಎಂಟನೇತರಗತಿ ಪಾಸ್ ಆಗಿರಬೇಕು ಹಾಗೂ ಈ ಕೆಲಸಕ್ಕೆ ಯಾವುದೇ ಅನುಭವದ ಅಗತ್ಯ ಇಲ್ಲಾ ಎಂದು ಕೂಡಾ ಹೇಳಿದ್ದಾರೆ. ಇನ್ನು ಅಭ್ಯರ್ಥಿಗಳ ವಯಸ್ಸು ಕನಿಷ್ಠ ಇಪ್ಪತ್ತು ವರ್ಷ ಹಾಗೂ ಗರಿಷ್ಠ ಐವತ್ತು ವರ್ಷದ ಒಳಗೆ ಇರಬೇಕು. ಇನ್ನು ಅರ್ಜಿ ಸಲ್ಲಿಸುವವರು ತಮ್ಮ ವಿದ್ಯಾರ್ಹತೆಯ ಜೆರಾಕ್ಸ್ ಪ್ರತಿಯೊಂದಿಗೆ ಈ ಕೆಳಗಿನ ಅಡ್ರೆಸ್ ಗೆ ಕಳುಹಿಸಬೇಕು. ಅಡ್ರೆಸ್ :- Commandant General Home Guards and Director , Civil Defence , Panaji Goa. ಈ ವಿಳಾಸಕ್ಕೆ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಕಳುಹಿಸಿಕೊಡಬೇಕು.